Recent Posts

Monday, January 20, 2025
ರಾಜಕೀಯರಾಷ್ಟ್ರೀಯಸಿನಿಮಾಸುದ್ದಿ

ಮುಸ್ಲಿಮರನ್ನು ಮದುವೆಯಾದ ಮಹಿಳೆ, ಮಕ್ಕಳು ಧರ್ಮ ಯಾಕೆ ಬದಲಿಸಿಕೊಳ್ಳಬೇಕು: ಅಮೀರ್​​ಗೆ ಕಂಗನಾ ಪ್ರಶ್ನೆ – ಕಹಳೆ ನ್ಯೂಸ್

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಕಿರಣ್ ರಾವ್ ವಿಚ್ಛೇದನಾ ವಿಚಾರವಾಗಿ ನಟಿ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದಾರೆ.

ಸದಾ ಒಂದಲ್ಲ ಒಂದು ವಿವಾದ ಸೃಷ್ಟಿಸಿಕೊಳ್ಳುವ ಕಂಗನಾರವರು ಇದೀಗ ಅಮೀರ್ ಖಾನ್ ಮುಸ್ಲಿಂ, ಕಿರಣ್ ರಾವ್ ಹಿಂದೂ, ಇವರಿಬ್ಬರಿಗೆ ಹುಟ್ಟಿದ ಮಗ ಆಜಾದ್ ರಾವ್ ಖಾನ್ ಮಾತ್ರ ಏಕೆ ಮುಸ್ಲಿಂ ಆಗಿಯೇ ಮುಂದುವರೆಯುತ್ತಿದ್ದಾನೆ. ಮುಸ್ಲಿಮರನ್ನು ಮದುವೆಯಾದವರು ಧರ್ಮವನ್ನು ಯಾಕೆ ಬದಲಾಯಿಸಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತಂತೆ ಕಂಗನಾ ರಣಾವತ್‍ರವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ, ಪಂಜಾಬ್‍ನ ಹಲವು ಕುಟುಂಬಗಳಲ್ಲಿ ಒಬ್ಬ ಮಗನನ್ನು ಸಿಖ್, ಮತ್ತೊಬ್ಬ ಮಗನನ್ನು ಹಿಂದೂ ಆಗಿ ಬೆಳೆಸುತ್ತಾರೆ. ಆದರೆ ಈ ಪದ್ದತಿ ಹಿಂದೂ ಹಾಗೂ ಮುಸ್ಲಿಂ ಅಥವಾ ಸಿಖ್ ಹಾಗೂ ಮುಸ್ಲಿಂ, ಅಥವಾ ಮುಸ್ಲಿಮರನ್ನು ಮದುವೆಯಾದ ಯಾರಲ್ಲೂ ಈ ಪದ್ಧತಿ ಕಾಣಿಸುವುದಿಲ್ಲ ಯಾಕೆ? ಎಂದಿದ್ದಾರೆ.

ಅಮೀರ್ ಖಾನ್ ಸರ್ ಅವರು ಎರಡನೇ ವಿಚ್ಛೇದನಾ ಪಡೆಯುತ್ತಿರುವ ಬಗ್ಗೆ ಆಶ್ಚರ್ಯ ಪಡೆಯುತ್ತೇನೆ. ಆದರೆ ಮಕ್ಕಳು ಮಾತ್ರ ಏಕೆ ಮುಸ್ಲಿಂ ಆಗಿರಬೇಕು. ಏಕೆ ಮಹಿಳೆಯರು ಹಿಂದೂ ಆಗಿ ಮುಂದುವರೆಯಬಾರದು. ಬದಲಾಗುತ್ತಿರುವ ಸಮಯದೊಂದಿಗೆ ನಾವು ಇದನ್ನು ಬದಲಿಸಬೇಕು. ಒಂದೇ ಕುಟುಂಬದಲ್ಲಿ ಹಿಂದೂ, ಸಿಖ್, ಬೌದ್ಧರು, ಜೈನರು ಜೊತೆಯಾಗಿರಲು ಸಾಧ್ಯವಿರುವಾಗ ಮುಸ್ಲಿಮರಿಗೆ ಮಾತ್ರ ಯಾಕೆ ಸಾಧ್ಯವಿಲ್ಲ? ಮುಸ್ಲಿಮರನ್ನು ಮದುವೆಯಾದವರು ಧರ್ಮವನ್ನು ಯಾಕೆ ಬದಲಾಯಿಸಿಕೊಳ್ಳಬೇಕು ಎಂದು ಬರೆದುಕೊಳ್ಳುವ ಮೂಲಕ ಕಿಡಿಕಾರಿದ್ದಾರೆ.

ಸದ್ಯ ಕಂಗನಾರವರ ಈ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಮೀರ್ ಖಾನ್‍ರವರು ಇದಕ್ಕೆ ಏನು ಉತ್ತರ ನೀಡುತ್ತಾರೆ ಎಂದು ಕಾದು ನೋಡಬೇಕಾಗಿದೆ.