Recent Posts

Monday, January 20, 2025
ದಕ್ಷಿಣ ಕನ್ನಡಸುದ್ದಿ

‘ತುಳುವೆರೆಗಾದ್ ಪದೊ ಸಾಹಿತ್ಯ’ ಕಾರ್ಯಕ್ರಮ – ಅಂತರ್ಜಾಲದಲ್ಲಿ ಉದ್ಘಾಟನೆಗೊಂಡ ಕಾರ್ಯಕ್ರಮಕ್ಕೆ ಭಾರಿ ಮೆಚ್ಚುಗೆ – ಕಹಳೆ ನ್ಯೂಸ್

ತುಳು ಭಾಷೆಯ ಬಗ್ಗೆ ಎಳೆಯ ಮಕ್ಕಳಲ್ಲಿ ವಿಶೇಷ ಆಸಕ್ತಿ ಮೂಡಿಸುವ ಸಲುವಾಗಿ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವ ಉಳಿಸುವ ಉದ್ದೇಶದಿಂದ ತುಳುವರ ಚಾವಡಿಯ ಮುತುವರ್ಜಿಯಿಂದ ಆರಂಭವಾದ ” ಜೋಕುಲೆಗಾದ್ ಪದ ಸಾಹಿತ್ಯ” ಕಾರ್ಯಗಾರವನ್ನು ಅಂತರ್ಜಾಲ ಮೂಲಕ ತುಳುವೆರೆ ಚಾವಡಿಯ ಗೌರವಾಧ್ಯಕ್ಷರಾದ ಪುರುಷೋತ್ತಮ ಚೇಂಡ್ಲಾ ರವರು ದಂಪತಿ ಸಮೇತ ನಡೆಸಿದರು.


ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಬಳಿಕ ಮಾತನಾಡಿದ ಇವರು ತಂತ್ರ ಯುಗ ವಿಶ್ವವನ್ನು ನೋಡಿದರೂ ವಿಶ್ವನಾಥನನ್ನು ನೋಡಲು ಸಾಧ್ಯವೇ? ದೇವರನ್ನು ಕಾಣಲು ಆದ್ಯಾತ್ಮಿಕ ಶಕ್ತಿ ಬೇಕು, ಅದನ್ನು ಮಕ್ಕಳಲ್ಲಿ ಕಾಣಬೇಕು ಮಾತ್ರ ಭಾಷೆ ಮರೆಯದೆ ಇತರ ಭಾಷೆ ಪ್ರೀತಿಸಿ ಎಂದರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ದಯಾನಂದ ಜಿ ಕತ್ತಲ್ಸಾರ್ ಸಾಹಿತ್ಯ ವಿಜ್ಙಾಪನ ಪತ್ರ ಬಿಡುಗಡೆಗೊಳಿಸಿ ತಾಯಿ ತಂದೆ, ಭಯ ಭಕ್ತಿ, ದೈವ ದೇವರು ಇದನ್ನು ಮರೆಯದಿರಿ, ನಿಮ್ಮ ಮಡಕೆಯಲ್ಲಿ ನನ್ನ ತೊಗರಿ ಬೇಯಲು ಅವಕಾಶವಿರಲಿ ಎಂದರು.
ಶಶಿಧರ ಕೋಟೆ ಅವರು ಮಾತು ಹಾಗೂ ಹಾಡಿನ ಮೂಲಕ ಮಾಹಿತಿ ನೀಡಿದರು. ವಿ. ಮನೋಹರ್ ಆಟದಲ್ಲಿನ ಪಾಠ, ಪದ್ಯದಲ್ಲಿ ಕೊಂಡಾಟ ಇರಲಿ ಎಂದರು. ಡಾ! ಗಣನಾಥ್ ಎಕ್ಕಾರ್,ಸೂಕ್ತ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತುಳುನಾಡಿನ ಜಿಲ್ಲಾ ರಾಜ್ಯ ದೇಶ ವಿದೇಶದ ತುಳುವರು, ತುಳು ಸಂಘಟನೆಯ ಪದಾಧಿಕಾರಿಗಳು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಇನ್ನು ತುಳುವೆರೆ ಚಾವಡಿ ಬೆಂಗಳೂರು ಇದರ ಅಧ್ಯಕ್ಷರಾದ ಆಶಾನಂದ ಉಪಸ್ಥಿತರಿದ್ದರು. ರಮೇಶ್ ಶೆಟ್ಟಿಗಾರರು ಸ್ವಾಗತಿಸಿ ಸತೀಶ್ ಅಡ್ಪಲ ಪ್ರಸ್ತಾವಿಕವಾಗಿ ಮಾತನಾಡಿದರು. ಎ.ಎನ್. ಅಡಿಗ ನಿರೂಪಿಸಿ, ಧನ್ಯವಾದ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉದ್ದೇಶ?
ತುಳು ಭಾಷೆಯನ್ನು ಉಳಿಸಿ ಬೆಳೆಸುವ ವಿಶೇಷ ಪ್ರಯತ್ನವನ್ನು ತುಳುವರ ಚಾವಡಿ “ಜೋಕುಲೆಗಾದ್ ಪದ ಸಾಹಿತ್ಯ” ಎಂಬ ಹೆಸರಿನ ಮೂಲಕ ಅಂತರ್ಜಾಲ ತಾಣದಲ್ಲಿ ಮುಟ್ಟಿಸುವ ಕೆಲಸ ಕ್ಕೆ ಮುಂದಾಗಿದೆ.ಇತ್ತೀಚಿನ ದಿನಗಳಲ್ಲಿ ತುಳುವರು ಪಾಶ್ಚಾತ್ಯ ಸಂಸ್ಕೃತಿಗಳಿಗೆ ಮಾರು ಹೋಗುವುದು ಹೆಚ್ಚಾಗಿದೆ. ಇದು ಉತ್ತಮ ಬೆಳವಣಿಗೆ ಅಲ್ಲ. ತುಳು ಸಂಸ್ಕೃತಿ ಉಳಿದರೆ ಮಾತ್ರ ಜಿಲ್ಲೆ ರಾಜ್ಯ ಉಳಿದಿತು. ಆಚಾರ ವಿಚಾರಗಳು ಉಳಿಯಬಹುದು. ಅ ನಿಟ್ಟಿನಲ್ಲಿ ನಮ್ಮ ಚಿಕ್ಕ ಪ್ರಯತ್ನ. ಮುಂದಿನ ದಿನಗಳಲ್ಲಿ ಭಾಷೆಯ ಬಗ್ಗೆ ವಿಶೇಷ ಆಸಕ್ತಿ ಮತ್ತು ಭಾಷೆಯ ಬಗ್ಗೆ ಆಳವಾದ ಜ್ಞಾನ ಉಳಿಯಬೇಕೆಂಬ ನಿಟ್ಟಿನಲ್ಲಿ ಮಕ್ಕಳಿಗೆ ಭಾಷೆಯ ಆಸಕ್ತಿ ನೀಡಲು ಅವಕಾಶ ಈ ಮೂಲಕ ನೀಡುವುದೇ ಮುಖ್ಯ ಉದ್ದೇಶ. ಇತ್ತೀಚಿನ ವರ್ಷಗಳಲ್ಲಿ ಪ್ರತಿ ಮನೆಯಲ್ಲಿ ಮಕ್ಕಳಿಗೆ ಪಾಶ್ಚಾತ್ಯ ಸಂಸ್ಕೃತಿಗಳನ್ನು ಬಿಂಬಿಸುವ ಮತ್ತು ಓಲೈಕೆ ಮಾಡುವ ಸಂಗೀತ ಮತ್ತು ಪದಗಳನ್ನು ಹಾಡಿ ಮನ ಪರಿವರ್ತನೆ ಮಾಡುವ ಕೆಲಸ ಆಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪದ್ದತಿ ಸರಿಯಲ್ಲ ಎಂದು ಮನಗಂಡು ಭಾಷೆಯ ಉಳಿವಿಗಾಗಿ ತುಳುವರ ಸಹಕಾರ ಬೇಕಾಗಿದೆ ಎಂದು ತುಳುವರ ಚಾವಡಿ ತಿಳಿಸಿದೆ.
ಇನ್ನು ಮಕ್ಕಳ ಶಿಶು ಗೀತೆಗಳು ಪುಸ್ತಕ, ಆಡಿಯೋ ವೀಡಿಯೋ ರೂಪದಲ್ಲಿ ಮತ್ತು ಆ್ಯನಿಮೇಷನ್ ರೂಪದಲ್ಲಿ, ಯೂ ಟ್ಯೂಬ್ ಇತರ ಅಂತರ್ಜಾಲದ ಮೂಲಕ ಮಕ್ಕಳಿಗೆ ಹಾಗೂ ಪೋಷಕರಿಗೆ ಮುಟ್ಟಲಿದೆ, ಅದಕ್ಕಾಗಿ ಕೆಲಸ ಸಾಗುತ್ತಿದ್ದು, ತುಳು ಶಿಶು ಸಾಹಿತಿಗಳಿಂದ ಸ್ವರಚಿತ ಅಥವಾ ಸಂಗ್ರಹ ಹಾಡುಗಳನ್ನು ಕಳುಹಿಸಬೇಕಾಗಿ ತುಳುವೆರೆ ಚಾವಡಿ ಬೆಂಗಳೂರು ವಿನಂತಿ ಮಾಡಿದೆ.