Friday, November 22, 2024
ಕ್ರೈಮ್ಪುತ್ತೂರು

ಪುತ್ತೂರಿನ ಬನ್ನೂರಿನಲ್ಲಿ ಝಳಪಿಸಿತೇ ತಲ್ವಾರ್..!? ; ಯುವಕರು ಕೈ, ಕೈ ಮಿಲಾಯಿಸಿದ್ದು, ನಿಜಾನಾ..!? ಪೋಲಿಸರಿಗೆ ಫಯಾಝ್ ದೂರು | ಗಾಲಾಟೆ ಮಾಡಿದ್ದು ಅವರೇ, ದೂರು ನೀಡಿದ್ದು ಅವರೇ..!? ಗಾಂಜಾ ವ್ಯಸನಿಗಳಿಂದ ಘಟನೆ.!? – ಕಹಳೆ ನ್ಯೂಸ್

ಪುತ್ತೂರು: ಬನ್ನೂರು ಜೈನರಗುರಿ ಸಮೀಪ ಯುವಕರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಇಬ್ಬರು ಯುವಕರು ತಲವಾರಿನಲ್ಲಿ ಹಲ್ಲೆಗೆ ಯತ್ನಿಸಿ ಪರಾರಿಯಾಗಿರುವುದಾಗಿ ಪುತ್ತೂರು ಠಾಣೆಗೆ ಯುವಕನೊಬ್ಬ ದೂರು ನೀಡಿದ ಘಟನೆ ನಿನ್ನೆ ತಡರಾತ್ರಿ ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಏನಿದು ಘಟನೆ..!? ಸತ್ಯ ಅಸತ್ಯತೆ ಏನು..!?

ಜಾಹೀರಾತು
ಜಾಹೀರಾತು
ಜಾಹೀರಾತು

ಬನ್ನೂರಿನ ಕೆಲ ಭಾಗಗಳಲ್ಲಿ ಪಡ್ಡೆಯುವಕರು, ಗಾಂಜಾ ಸೇದಿಕೊಂಡು ಸಮಾಜಘಾತುಕ ಕೃತ್ಯಗಳನ್ನು ನಡೆಸುತ್ತಿರುವ ಕುರಿತು ಹಿಂದೆ ಅನೇಕ ಭಾರಿ ವರದಿಯಾಗಿತ್ತು, ಪೋಲೀಸ್ ದಾಳಿಗಳೂ ನಡೆದಿತ್ತು. ಇಂದು ಅಂತಹುದೇ ‌ಘಟನೆಯೊಂದು ಬೆಳಕಿಗೆ ಬಂದಿದ್ದು, ಯುವಕರ ಮಧ್ಯೆ ಹೊಡೆದಾಟ, ತಲ್ವಾರ್ ದಾಳಿಯತ್ನ ಎಂಬೆಲ್ಲಾ ವರದಿಗಳು ಬರುತ್ತಿದ್ದು, ಈ ವರದಿಗಳ ಬೆನ್ನು ಹತ್ತಿದ ಕಹಳೆ ನ್ಯೂಸ್ ಗೆ ಸ್ಪೋಟಕ ಮಾಹಿತಿಯೊಂದು ಲಭಿಸಿದೆ.

ಎಸ್, ಹೌದು, ಈ ಘಟನೆಯ ದೂರಿನಲ್ಲಿ ನಮೋದಿಸಿದ ಯುವಕರ ಪೈಕಿ ಅಭಿಜಿತ್ ಮತ್ತು ಶರತ್ ಎಂಬವರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಬನ್ನೂರು ಜೈನರಗುರಿಯಲ್ಲಿರುವ ಶರತ್ ಎಂಬವರ ಮನೆಯ ಮುಂಭಾಗದಲ್ಲಿ ಒಂದೆಡದು ಗಾಂಜಾ ವ್ಯಸನಿಗಳಂತೆ ಕಾಣುತ್ತಿದ್ದ, ಪಡ್ಡೆಗಳು ನಿನ್ನೆಯ ದಿನ ಸಿಗರೇಟು ಸೇದಿಕೊಂಡು ಅಮಲಿನಲ್ಲಿ ತೇಲಾಡುತ್ತಿದ್ದುದ್ದನ್ನು ಗಮನಿಸಿ ‘ಇಲ್ಲಿ ಸೇದಬೇಡಿ’ ಎಂದು ಕೇಳಿದಕ್ಕೆ, ಪ್ರತಿಯಾಗಿ ಅಭಿಜಿತ್ ಹಾಗೂ ಶರತ್ ಎಂಬವರ ಮೇಲೆಯೇ ಹಲ್ಲೆ ನಡೆಸಿ, ಅವಾಶ್ಯಾವಗಿ ನಿಂದಿಸಿ, 20, 30ಕ್ಕೂ ಅಧಿಕ ಮಂದಿಯನ್ನು ಗುಂಪುಸೇರೆಸಿ ಕೋಮು ಸಾಮರಸ್ಯ ಕದಡಲು ರಾತ್ರೋರಾತ್ರಿ ಯತ್ನಿಸಿದ್ದಲ್ಲೆದೆ, ಕ್ರಮೇಣ ಈ ಕೃತ್ಯವೆಸಗಿದ ಫಯಾಜ್ ಮತ್ತು ಝೀಹಾದ್ ಎಂಬುವವರು ಸುಬಹರಂತೆ ಪೊಲೀಸ್ ಠಾಣೆಯಲ್ಲಿ ತಮ್ಮ ಮೇಲೆಯೇ ತಲುವಾರಿನಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಕೇಸ್ ದಾಖಲಿಸಿದ್ದಾರೆ ಎಂದು ಸ್ಥಳೀಯರು, ಪ್ರತ್ಯಕ್ಷದರ್ಶಿಗಳು ಆರೋಪ ಮಾಡಿದ್ದು, ಕಹಳೆ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ..

ಒಂದೆಡೆ ಖಾಸಗಿ ಜಾಗದಲ್ಲಿ ಗಾಂಜಾ ಸಿಗರೇಟ್ ಸೇದಿಕೊಂಡು ಮೋಜು ಮಸ್ತಿ ಮಾಡುತ್ತ ಇದ್ದವರನ್ನು ಪ್ರಶ್ನಿಸಿದ್ದೆ, ಅಮಾಯಕರ ಮೇಲೆ ಸುಳ್ಳು ಕೇಸ್ ದಾಖಲಾದರೆ ಇನ್ನೊಂದೆಡೆ ಈ ಹಿಂದೆಯೂ ಸ್ಥಳೀಯರು ಇದರ ಕುರಿತು ದೂರು ನೀಡಿದ್ದರು ಗಾಂಜಾ ಸೇದುವವರನ್ನು ಪ್ರಶ್ನಿಸದೆ ಅಮಾಯಕರ ಮೇಲೆ ಕೇಸ್ ದಾಖಲಿಸಿ, ಪೋಲೀಸರು ಶೋದಾ ನಡೆಸುತ್ತಿರುವುದು ವಿಪರ್ಯಾಸವೇ ಸರಿ ಎಂದು ಸ್ಥಳೀಯರು ಹಿಡಿಶಾಪಾ ಹಾಕುತ್ತಿದ್ದಾರೆ.

ರಾತ್ರೋರಾತ್ರಿ ಪೋಲೀಸ್ ಠಾಣೆಯಲ್ಲಿ ಹೈಡ್ರಾಮ..!?

ಇನ್ನೊಂದೆಡೆ ರಾತ್ರೋರಾತ್ರಿ ಘಟನೆಯ ಕುರಿತು, ತೀವ್ರ ಹಲ್ಲೆಗೊಳಗಾದ ಯುವಕರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಅರಿತ ಎಸ್.ಡಿ.ಪಿ.ಐ. ಮುಖಂಡರು, ಪುತ್ತೂರು ಪೋಲೀಸ್ ಠಾಣೆಗೆ ಲಗ್ಗೆ ಇಟ್ಟು, ಕೃತ್ಯ ನಡೆಸಿದ ಯುವಕರಿಂದಲೇ ನೊಂದ ಯುವಕರ ಮೇಲೆ ದೂರು ನೀಡಿದ್ದು, ಅಲ್ಲದೆ, ಘಟನಾ ಸ್ಥಳದಲ್ಲಿ 100 ಕ್ಕೂ ಅಧಿಕ ಮಂದಿ ಜಮಾಯಿಸಿದ್ದು, ಎಸ್.ಡಿ.ಪಿ.ಐ. ಕೋಮು ಸಂಘರ್ಷಕ್ಕೆ ಕುಮ್ಮಕ್ಕು ನೀಡುವ ಯೋಜನೆಯಲ್ಲಿ ಈ ಘಟನೆಯ ಮೂಲಕ ಕೋಮು ಸಾಮರಸ್ಯ ಕದಡುವಲ್ಲಿ ಪ್ರಯತ್ನಿಸಿದೆ ಎಂದು ಪರಿವಾರ ಸಂಘಟನೆಗಳು ಆರೋಪಿಸಿದ್ದು, ಈ ಕುರಿತು ಡಿವೈ ಎಸ್.ಪಿ ಯವರೇ ತನಿಖೆ ನಡೆಸಿ, ಜಿಲ್ಲಾವರಿಷ್ಠಾಧಿಕಾರಿವರು ಮುತುವರ್ಜಿ ವಹಿಸಿ, ಬನ್ನೂರಿನ ಗಾಂಜಾ ಕೇಸ್ ಗೆ ಬ್ರೇಕ್ ಹಾಕಬೇಕು ಎಂದು ಸ್ಥಳೀಯರು ರ
ಆಗ್ರಹಿಸಿದ್ದಾರೆ.