Saturday, November 23, 2024
ಜಿಲ್ಲೆಸುದ್ದಿ

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಬೀಳುತ್ತೆ ದುಬಾರಿ ದಂಡ – ಯಾವ ಸಂಚಾರಿ ನಿಯಮಕ್ಕೆ ಎಷ್ಟು ದಂಡ.? – ಕಹಳೆ ನ್ಯೂಸ್

ಸಂಚಾರಿ ನಿಯಮ ಪಾಲಸಿ ನೀವು ವಾಹನ ಚಲಾಯಿಸಿದ್ರೆ ಆರಾಮವಾಗಿರಬಹುದು. ಆದರೆ ನೀವು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ವಾಹನ ಚಲಾಯಿಸಿದರೆ ಸಂಚಾರಿ ಪೊಲೀಸರು ದುಬಾರಿ ದಂಡ ವಿಧಿಸುತ್ತಾರೆ ಅನ್ನೋದು ನಮಗೆ ಗೊತ್ತಿರೋದೆ. ಹಾಗಾದ್ರೇ.. ಯಾವ ಸಂಚಾರಿ ನಿಯಮಕ್ಕೆ ಎಷ್ಟು ದಂಡ ಗೊತ್ತಾ.?

ಜಾಹೀರಾತು
ಜಾಹೀರಾತು
ಜಾಹೀರಾತು

ಯಾವ ಸಂಚಾರಿ ನಿಯಮಕ್ಕೆ ಎಷ್ಟು ದಂಡ.?

ಜಾಹೀರಾತು
ಜಾಹೀರಾತು
ಜಾಹೀರಾತು
  1. ಹೆಲ್ಮೆಟ್ ಧರಿಸದೇ ವಾಹನ ಚಾಲನೆ – ಐಎಂವಿ ಕಾಯ್ದೆ ಸೆಕ್ಷನ್ 194(ಡಿ) ಅಡಿ ಪ್ರಕರಣ – ರೂ.500 ದಂಡ
  2. ಹಿಂಬದಿ ಸವಾರ ಹೆಲ್ಮೆಟ್ ಧರಿಸದೇ ವಾಹನ ಸವಾರಿ – ಕೆಎಂವಿ ನಿಯಮ 230(1)ರ ಅಡಿಯಲ್ಲಿ ಪ್ರಕರಣ, ರೂ.500 ದಂಡ
  3. ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ – ಐಎಂವಿ ಕಾಯ್ದೆ ಸೆಕ್ಷನ್ 194(ಬಿ) ಅಡಿಯಲ್ಲಿ ಪ್ರಕರಣ, ರೂ.500 ದಂಡ
  4. ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ – ಐಎಂವಿ ಕಾಯ್ದೆ ಸೆಕ್ಷನ್ 184 (ಸಿ) ಅಡಿಯಲ್ಲಿ ಪ್ರಕರಣ, ರೂ.1,000 ದಂಡ
  5. ಅಜಾಗರೂಕತೆ, ಅಪಾಯಕಾರಿಯಾಗಿ ವಾಹನ ಚಾಲನೆ – ಐಎಂವಿ ಕಾಯ್ದೆ ಸೆಕ್ಷನ್ 184 ಅಡಿಯಲ್ಲಿ ಪ್ರಕರಣ, ರೂ.1,000 ದಂಡ
  6. ತುರ್ತು ಸೇವಾ ವಾಹನಗಳಿಗೆ ದಾರಿಕೊಡಲು ವಿಫಲವಾದರೇ – ಐಎಂವಿ ಕಾಯ್ದೆ ಸೆಕ್ಷನ್ 194(ಇ) ಅಡಿ ಪ್ರಕರಣ, ರೂ.1,000 ದಂಡ
  7. ನಿಷೇದಿತ, ನಿರ್ಬಂಧಿತ ವಲಯಗಳಲ್ಲಿ ಹಾರ್ನ್ ಬಳಕೆ – ಐಎಂವಿ ಕಾಯ್ದೆ ಸೆಕ್ಷನ್ 194(ಎಫ್) – ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ರೂ.500, ಇತರೆ ವಾಹನಗಳಿಗೆ ರೂ.1,000.