Recent Posts

Monday, January 20, 2025
ರಾಜಕೀಯ

ಸಿದ್ದಾಂತಗಳು ಒಂದೇ ಆಗಿದ್ದರೂ, ಬಿಜೆಪಿ ಪಕ್ಷವನ್ನು ಪ್ರತಿನಿಧಿಸುತ್ತಿಲ್ಲ – ಶ್ರೀಕರ್ ಪ್ರಭು

Shrikar prabhu

ಮಂಗಳೂರು ಏ 26: ನಾನು ಪ್ರತಿಪಾದಿಸುತ್ತಿರುವ ಸಿದ್ದಾಂತಗಳು ಹಾಗೂ ಬಿಜೆಪಿ ಪಕ್ಷದ ಸಿದ್ದಾಂತಗಳೂ ಒಂದೇ ಆಗಿದ್ದರೂ ನಾನು ಬಿಜೆಪಿಯನ್ನು ಪ್ರತಿನಿಧಿಸುತ್ತಿಲ್ಲ ಎಂದು ಶ್ರೀಕರ ಪ್ರಭು ಹೇಳಿದ್ದಾರೆ. ಮಂಗಳೂರಿನ ದಕ್ಷಿಣ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಸ್ವರ್ಧಿಸುತ್ತಿರುವ ಅವರು ನಗರದಲ್ಲಿ ಏ. 26 ರ ಗುರುವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, 2013 ರ ಸಾರ್ವತ್ರಿಕ ಚುನಾವಣೆಯ ಸಂದರ್ಭ ನಾನು ಬಿಜೆಪಿನಿಂದ, ವಿನಾಕಾರಣ ಹೊರಹಾಕಲ್ಪಟ್ಟೆ. ನನ್ನನ್ನು ಪಕ್ಷದಿಂದ ಹೊರದಬ್ಬಿರುವುದು ನೋವುಂಟು ಮಾಡಿದೆ. ಈ ಹಿಂದೆ ನಾನು ಜನಸೇವೆ ಮಾಡಿದವನು. ಇದೀಗ ಮತ್ತೆ ಜನಸೇವೆಯ ಅವಕಾಶ ಪಡೆಯಲು ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಗೆಲುವು ತನ್ನದೇ ಎಂದು ಶ್ರೀಕರ ಪ್ರಭು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಬಿಜೆಪಿಯಿಂದ ಸ್ಪರ್ಧಿಸುತ್ತಿಲ್ಲವಾದರೂ, ನಮ್ಮ ಸಿದ್ದಾಂತಗಳು ಒಂದೇ ಆಗಿದೆ. ಇಲ್ಲಿ ನನ್ನ ಪ್ರತಿಸ್ಪರ್ಧಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳಿಬ್ಬರೂ ಸರಿ ಇಲ್ಲ. ಕ್ಷೇತ್ರದ ಜನರಿಂದ ನನಗೆ ಪೂರಕ ಬೆಂಬಲ ದೊರಕುತ್ತಿರುವುದರಿಂದ ಜಯ ಗಳಿಸುವ ವಿಶ್ವಾಸ ನನ್ನಲ್ಲಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು