ಅಂಬುಲೆನ್ಸ್ ಚಾಲಕನಾಗಿ ಕೊರೋನಾ ರೋಗಿಗಳ ಸೇವೆ ಮಾಡುತ್ತಿರುವ ಪುತ್ತೂರಿನ ಮನೋಜ್ – ಉಪ್ಪಿನಂಗಡಿ ಸೇವಾ ಭಾರತೀ ವತಿಯಿಂದ ಸನ್ಮಾನ – ಕಹಳೆ ನ್ಯೂಸ್
ಉಪ್ಪಿನಂಗಡಿ : ಕೊರೊನಾ ಕಷ್ಟ ಕಾಲದ ಸಂದರ್ಭದಲ್ಲಿ, ಅಂಬುಲೆನ್ಸ್ ಚಾಲಕನಾಗಿ ಕೊರೋನಾ ರೋಗಿಗಳ ಸಾಗಾಟಕ್ಕೆ ಪುತ್ತೂರಿನ ಮನೋಚ್ ಎಂಬವರು ನಿಸ್ವಾರ್ಥ ಭಾವದಿಂದ ಶ್ರಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇವರ ಸೇವೆಯನ್ನ ಗುರುತಿಸಿ, ಉಪ್ಪಿನಂಗಡಿ ಸೇವಾ ಭಾರತೀ ವತಿಯಿಂದ ಇವರನ್ನ ಸನ್ಮಾನ ಮಾಡಲಾಯಿತು.
ಸನ್ಮಾನ ಕಾರ್ಯಕ್ರಮದಲ್ಲಿ ವಿ. ಹಿಂ. ಪ ಜಿಲ್ಲಾ ಸಂಘಟನಾ ಕಾರ್ಯಾಧ್ಯಕ್ಷರು ಭಾಸ್ಕರ್ ಧರ್ಮಸ್ಥಳ, ಜಿಲ್ಲಾ ಗೊರಕ್ಷಕ್ ಪ್ರಮುಖ್ ಮಹೇಶ್ ಬಜತ್ತೂರ್, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉಷಾ ಮುಳಿಯ, , ಗ್ರಾಮ ಪಂಚಾಯತ್ ಸದಸ್ಯರು ಗಲಾದ ಧನಂಜಯ ಕುಮಾರ್, ಶೋಭಾ ದಯಾನಂದ್, ಲೋಕೇಶ್ ಬೆತ್ತೊಡಿ, ಸುರೇಶ್ ಅತ್ರಮಜಲ್, ಮಾಜಿ ತಾಲೂಕ್ ಪಂಚಾಯತ್ ಸದಸ್ಯೆ ಸುಜಾತ ಕೃಷ್ಣ ಆಚಾರ್ಯ ಸಿ. ಎ. ಬ್ಯಾಂಕ್ ಉಪಾಧ್ಯಕ್ಷರು ಸುನಿಲ್ ದಡ್ಡು, ಸುಧಾಕರ್ ಕೋಟೆ, ರವಿನಂದನ್ ನಟ್ಟಿಬೈಲ್, ಅದೇಶ್ ಶೆಟ್ಟಿ, ರಮೇಶ್ ಬಂಡಾರಿ , ಹರಿರಾಮಚಂದ್ರ, ಆನಂದ ಕುಂಟಿನಿ, ಜಯಂತ್ ಪುರೋಳಿ, ಕೇಶವ ನಾಯ್ಕ್, ಪ್ರಸಾದ್ ಬಂಡಾರಿ,ಹಾಗೂ ಸೇವಾಭಾರತಿ ಸದಸ್ಯರುಗಳು ಉಪಸ್ಥಿತರಿದ್ದರು