Friday, September 20, 2024
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ದೇರಾಜೆ ಬೆಟ್ಟದಲ್ಲಿ ಶ್ರೀ ದೈವ ಕೊಡಮಣಿತ್ತಾಯ ಸಾನಿಧ್ಯದ ಜಿರ್ಣೋದ್ಧಾರ ಕಾರ್ಯಕ್ಕೆ ಶಿಲಾನ್ಯಾಸ – ಕಹಳೆ ನ್ಯೂಸ್

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ದೇರಾಜೆ ಬೆಟ್ಟದಲ್ಲಿ ಶ್ರೀ ದೈವ ಕೊಡಮಣಿತ್ತಾಯ ಸಾನಿಧ್ಯದ ಜಿರ್ಣೋದ್ಧಾರದ ನಿಮಿತ್ತ ಇಂದು ಶಿಲಾನ್ಯಾಸ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕ್ಷೇತ್ರಕ್ಕೆ ಸುಮಾರು ೨೫೦ ವರ್ಷಗಳ ಇತಿಹಾಸವಿದೆ ಹಾಗೂ ಸುಮಾರು ನಲವತ್ತು ವರ್ಷಗಳ ಹಿಂದೆ ಈ ಕ್ಷೇತ್ರದಲ್ಲಿ ನೇಮೋತ್ಸವವು ನಡೆದಿದ್ದು ನಂತರ ಕ್ಷೇತ್ರವು ಶಿಥಿಲಾವಸ್ಥೆಗೆ ತಲುಪಿತ್ತು. ಮರೋಡಿ ಗ್ರಾಮದ ಪೊಸರಡ್ಕ ಶ್ರೀ ದೈವ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯ ಜಿರ್ಣೋದ್ಧಾರದ ನಿಮಿತ್ತ ನಡೆದ ಪ್ರಶ್ನಾ ಚಿಂತನೆಯಲ್ಲಿ ಈ ಸಾನಿಧ್ಯವು ಕಂಡು ಬಂದಿದ್ದು ಇದರ ಜಿರ್ಣೋದ್ಧಾರದ ಬಳಿಕ ಪೊಸರಡ್ಕ ಗರಡಿಯ ಜಿರ್ಣೋದ್ಧಾರವನ್ನು ನಡೆಸಬೇಕಾಗಿ ತಿಳಿದು ಬಂದಿದೆ.

ಜಾಹೀರಾತು

ಶ್ರೀ ಕೊಡಮಣಿತ್ತಾಯ ದೈವದ ಪ್ರಮುಖ ಆರಾಧನ ಕೇಂದಗಳಲ್ಲಿ ದೇರಾಜೆ ಬೆಟ್ಟ ಶ್ರೀ ದೈವ ಕೊಡಮಣಿತ್ತಾಯ ಕ್ಷೇತ್ರವು ಪ್ರಮುಖ ಸ್ಥಾನದಲ್ಲಿದೆ …ಹೆಸರಿಗೆ ತಕ್ಕ ಹಾಗೆ ಸುತ್ತ ಮುತ್ತ ವರ್ಣನೀಯ ಪ್ರಾಕೃತಿಕ ಸೌಂದರ್ಯದ ಮಡಿಲಲ್ಲಿ ಈ ಸಾನಿಧ್ಯವಿದ್ದು..ಇದರ ಜಿರ್ಣೊದ್ಧಾರದ ಸಲುವಾಗಿ ಇಂದು ಶಿಲಾನ್ಯಾಸ ಕಾರ್ಯಕ್ರಮವನ್ನು ಊರಿನ ಗುರಿಕಾರರು ಹಾಗೂ ಗ್ರಾಮಸ್ಥರ ಕೂಡುವಿಕೆಯಲ್ಲಿ ಶ್ರೀ ಅನಂತ ಅಸ್ರಣ್ಣ ಕೇಳ ಬೊಟ್ಟ ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು .

ಈ ಸಂದರ್ಭ ಕ್ಷೇತ್ರದ ಜಿರ್ಣೊದ್ಧಾರದ ಮುಖ್ಯಸ್ಥರಾದ ಹೇಮರಾಜ್ ಬೆಳ್ಳಿಬೀಡು ..ಕ್ಷೇತ್ರದ ಜಿರ್ಣೋದ್ದಾರಕ್ಕೆ ಒಗ್ಗಟ್ಟಾಗಿ ಶ್ರಮಿಸುವಂತೆ ಹಾಗೂ ಕ್ಷೇತ್ರದ ಆಭಿವೃದ್ಧಿಯ ಸಲುವಾಗಿ ಬೆಳ್ತಂಗಡಿಯ ಮಾನ್ಯ ಶಾಸಕರಾದ ಹರೀಶ್ ಪೂಂಜರವರು ಪೂರ್ಣ ಪ್ರಮಾಣದಲ್ಲಿ ಕ್ಷೇತ್ರದ ಜಿರ್ಣೋದ್ಧಾರಕ್ಕೆ ಸಹಕಾರವನ್ನು ನೀಡಿದ್ದು ಗ್ರಾಮಸ್ಥರ ಪರವಾಗಿ ಶಾಸಕರಿಗೆ ತುಂಬು ಹೃದಯದ ಧನ್ಯವಾದವನ್ನು ಸಮರ್ಪಿಸಿದರು..

 

ಇನ್ನೂ ಈ ಸಂದರ್ಭ ಗುರಿಕಾರರಾದ ಹೇಮರಾಜ್ ಬೆಳ್ಳಿಬೀಡು ,ರಾಜೇಂದ್ರ ಬಳ್ಳಾಲ್ ಮಿತ್ತ ಬೀಡು,ಜೀನೇಂದ್ರ ಜೈನ್ ಆರಂಬೊಟ್ಟು ,ಜಯವರ್ಮ ಬುಣ್ಣು ಕುಕ್ಯಾರೊಟ್ಟು,ಸುದರ್ಶನ್ ಜೈನ್ ಪಾಂಡಿಬೆಟ್ಟು ,ಶ್ರೀ ಉದಯ ನಾಪ,ಸೇಸಪ್ಪ ಪೂಜಾರಿ ಉಚ್ಚೂರು,ನಳಿನಿ ಪಿ.ಕೆ ಮತ್ತೊಟ್ಟು ,ರಮೇಶ್ ಬಲಾಂತ್ಯರೊಟ್ಟು ಹಾಗೂ , ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್,ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪದ್ಮಶ್ರೀ ಜೈನ್, ಪಂಚಾಯತ್ ಸದಸ್ಯರಾದ ಆಶೋಕ್ ಕೋಟ್ಯಾನ್ ,ರತ್ನಾಕರ್ ಬುಣ್ಣನ್ , ಪತ್ರಕರ್ತರಾದ ಪ್ರದೀಶ್ ಹಾರೊದ್ದು ಹಾಗೂ ಊರ ಪರವೂರ ಗ್ರಾಮಸ್ಥರು ಭಾಗಿಯಾದರು