Recent Posts

Monday, January 20, 2025
ರಾಜಕೀಯ

ಕಾಂಗ್ರೆಸ್ ಪ್ರಣಾಳಿಕೆ ಕರ್ನಾಟಕಕ್ಕೆ ಹೊಸ ಭಾಷ್ಯ ಬರೆಯಲಿದೆ: ವೀರಪ್ಪ ಮೊಯ್ಲಿ

ಮಂಗಳೂರು: ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆ ಬಿಡುಗಡೆಗೆ ಸಿದ್ಧಗೊಂಡಿದೆ. ನಾಳೆ ಮಂಗಳೂರಿನಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಬಿಡುಗಡೆಗೊಳಿಸಲಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಣಾಳಿಕೆಯಲ್ಲಿ ಶಿಕ್ಷಣ, ಆರೋಗ್ಯ, ಮೂಲಸೌಕರ್ಯಕ್ಕೆ ವಿಶೇಷ ಒತ್ತು ನೀಡಲಾಗಿದೆ. ಯುವಜನ, ಕ್ರೀಡೆ, ಕೃಷಿ, ತೋಟಗಾರಿಕೆ ಸಹಿತ ಎಲ್ಲ ವಿಷಯಗಳ ಬಗ್ಗೆ ಆದ್ಯತೆ ನೀಡಲಾಗಿದೆ. ತಜ್ಞರು, ಪರಿಣಿತರು, ಅಧಿಕಾರಿಗಳು, ಶಾಸಕರ ಜೊತೆಗೆ ಚರ್ಚಿಸಲಾಗಿದೆ. ಪ್ರತಿ ಜಿಲ್ಲೆಗೆ ಪ್ರತ್ಯೇಕ ಪ್ರೊಫೈಲ್ ಸೇರಿಸಲಾಗಿದೆ. ಕರ್ನಾಟಕಕ್ಕೆ ಹೊಸ ಭಾಷ್ಯ ಬರೆಯುವ ಭರವಸೆ ಇದೆ. ಇದು ಜನರ ಪ್ರಣಾಳಿಕೆಯಾಗಲಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು