Recent Posts

Sunday, January 19, 2025
ಕ್ರೈಮ್ರಾಜ್ಯಸುದ್ದಿ

ವಿವಾಹಿತ ಮಹಿಳೆ ಝಕಿಯಾಳೊಂದಿಗೆ ಜಾಬೀರ್ ಅಕ್ರಮ ಸಂಬಂಧ ; ತಿಂಗಳ ಹಿಂದಷ್ಟೇ ಜಾಬೀರ್ ಮದುವೆ, ಆಂಟಿಯಿಂದ ಸುಪಾರಿ, ಯುವಕನ ಕೊಲೆ – ಕಹಳೆ ನ್ಯೂಸ್

ಕೋಲಾರ: ದಷ್ಟ ಪುಷ್ಟವಾಗಿ, ಜಿಮ್ ಬಾಡಿ ಮೆಂಟೈನ್ ಮಾಡುತ್ತ, ಇತ್ತೀಚೆಗಷ್ಟೇ ಮದುವೆಯಾಗಿದ್ದ ನವ ವಿವಾಹಿತನಿಗೆ ಸುಂದರವಾದ ಪ್ರೇಯಸಿಯ ಪ್ರೀತಿಯೇ ಅವನ ಕೊಲೆಗೆ ಕಾರಣವಾಗಿದೆ. ಮದುವೆಯ ಮನೆ ಈಗ ಸೂತಕದ ಮನೆಯಾಗಿದೆ.

ನಗರದ ಮಹಾಲಕ್ಷ್ಮಿ ಬಡಾವಣೆಯ ನಿವಾಸಿ ಜಾಬೀರ್ ಪ್ರೇಯಸಿ ನೀಡಿದ ಸುಪಾರಿಯಿಂದಲೇ ಕೊಲೆಯಾದವ. ಕೋಲಾರದಿಂದ ದೂರದ ಬೀದರ್‍ನ ನಿಡುವಂಚಿ ಗ್ರಾಮದ ಅಜ್ಞಾತ ಸ್ಥಳದಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದೆ. ಮಗ ಕಾಣೆಯಾದ ಬಗ್ಗೆ ಜಾಬೀರ್ ಪೋಷಕರು ಕೋಲಾರದ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಕೊಲೆಯಾದ ಒಂದು ತಿಂಗಳ ನಂತರ ದೂರದ ಬೀದರ್ ನ ನಿಡುವಂಚಿ ಗ್ರಾಮದ ಬಳಿ ಮಣ್ಣಲ್ಲಿ ಅವನ ಶವ ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೇರೆ ರಾಜ್ಯಗಳಿಂದ ಕಾರ್ ಗಳನ್ನು ಖರೀದಿಸಿ ತಂದು ಮಾರಾಟ ಮಾಡುವುದು ಜಾಬೀರ್‍ನ ಕಾಯಕವಾಗಿತ್ತು. ಜೊತೆಗೆ ಬಾಡಿ ಬಿಲ್ಡಿಂಗ್ ಮಾಡುವುದು ಹವ್ಯಾಸವಾಗಿತ್ತು. ಒಂದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ. ಇದೆಲ್ಲದರ ಮಧ್ಯೆ ತನ್ನ ತಂದೆಯ ದೂರದ ಸಂಬಂಧಿ ವಿವಾಹಿತ ಮಹಿಳೆ ಝಕಿಯಾಳೊಂದಿಗೆ ಸಲುಗೆ ತೋರಿದ್ದು ಇವನ ಪ್ರಾಣ ಹೋಗಲು ಕಾರಣವಾಗಿದೆ.

ಆಂಟಿಯಿಂದಲೇ ಸುಪಾರಿ
ವಿವಾಹಿತ ಮಹಿಳೆ ಝಕಿಯಾಗೆ ಇವನ ಮೇಲೆ ಮೋಹ ಹುಟ್ಟಿ, ಅನೈತಿಕ ಸಂಭಂದವೂ ಕೂಡ ಇತ್ತು ಎನ್ನಲಾಗಿದೆ. ಆದರೆ ಜಾಬೀರ್‍ಗೆ ಅವನ ಮನೆಯವರು ಚಿಕ್ಕಬಳ್ಳಾಪುರದಲ್ಲಿ ಬೇರೊಬ್ಬ ಯುವತಿಯೊಂದಿಗೆ ಮದುವೆ ಮಾಡಿದ್ದರು. ಇದನ್ನು ಅರಗಿಸಿಕೊಳ್ಳಲಾಗದ ಝಕಿಯಾ, ಬೇರೊಂದು ನೆಪ ಹೇಳಿ ಜಾಬೀರ್‍ನನ್ನು ಹೈದ್ರಾಬಾದ್‍ಗೆ ಕರೆಸಿಕೊಳ್ಳುವ ನಾಟಕವಾಡಿದ್ದಾಳೆ. ಬಳಿಕ ದಾರಿ ಮಧ್ಯೆ ಧಾರುಣವಾಗಿ ಕೊಲೆ ಮಾಡಿದ್ದಾರೆ.