Recent Posts

Sunday, January 19, 2025
ಬೆಂಗಳೂರುರಾಜಕೀಯರಾಜ್ಯರಾಷ್ಟ್ರೀಯಸುದ್ದಿ

ಕೇಂದ್ರ ಸಚಿವ ಸ್ಥಾನ ತೊರೆದ ಸದಾನಂದ ಗೌಡ ರಾಜ್ಯ ರಾಜಕಾರಣಕ್ಕೆ? ಮತ್ತೆ ಮುಖ್ಯಮಂತ್ರಿಯಾಗ್ತಾರಾ ಡಿ.ವಿ. ಸದಾನಂದ ಗೌಡ..? – ಕಹಳೆ ನ್ಯೂಸ್

ನವದೆಹಲಿ : ಕೇಂದ್ರದಲ್ಲಿ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವರಾಗಿದ್ದ ಸದಾನಂದಗೌಡ ಬುಧವಾರದಂದು ಪಕ್ಷದ ನಿರ್ಧಾರದ ಮೇರೆಗೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿವಿಎಸ್ ರಾಜೀನಾಮೆ ವಿಚಾರ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರದ ಹುದ್ದೆ ತೊರೆದ ಗೌಡರಿಗೆ ರಾಜ್ಯದಲ್ಲಿ ಉನ್ನತ ಸ್ಥಾನಮಾನ ಸಿಗಲಿದೆಯಾ ಎನ್ನುವ ಕುತೂಹಲ ಮೂಡಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಮೋದಿ ಸರಕಾರದಲ್ಲಿ ಒಟ್ಟು ಎರಡು ಬಾರಿ ಕೇಂದ್ರ ಸಚಿವರಾಗಿರುವ ಡಿ.ವಿ. ಸದಾನಂದ ಗೌಡ ರೈಲ್ವೇ ಖಾತೆ, ಕಾನೂನು ಮತ್ತು ನ್ಯಾಯಿಕ ಖಾತೆ, ಸಾಂಕ್ಯಿಕ ಖಾತೆ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆಗಳನ್ನು ನಿರ್ವಹಿಸಿದ್ದಾರೆ. ಆ ಮೂಲಕ ಕೇಂದ್ರದಲ್ಲಿ ಉತ್ತಮ ಒಡನಾಟದ ಜೊತೆಗೆ ಅನುಭವವನ್ನು ಕೂಡ ಹೊಂದಿದ್ದಾರೆ. ಇನ್ನು ಸಕ್ರೀಯ ರಾಜಕಾರಣದಲ್ಲಿ ಸಾಕಷ್ಟು ಅನುಭವಗಳನ್ನು ಕೂಡ ಸದಾನಂದ ಗೌಡ ಅವರಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮತ್ತೆ ಮುಖ್ಯಮಂತ್ರಿಯಾಗ್ತಾರಾ ಡಿ.ವಿ. ಸದಾನಂದ ಗೌಡ ?


ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಸಿಎಂ ಖುರ್ಚಿಯಿಂದ ಬಿ.ಎಸ್. ಯಡಿಯೂರಪ್ಪ ಕೆಳಗಿಳಿದ ಸಂದರ್ಭದಲ್ಲಿ 2011ರ ಆಗಸ್ಟ್ 4ರಂದು ರಾಜ್ಯದ ಮುಖ್ಯಮಂತ್ರಿಗಳಾಗಿ ಕರಾವಳಿಯ ರಾಜಕಾರಣಿ ಡಿವಿ ಸದಾನಂದ ಗೌಡ ರಾಜ್ಯದ ೨೦ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅಲ್ಲಿಂದcm ಸರಿಸುಮಾರು ಹನ್ನೊಂದು ತಿಂಗಳುಗಳ ಕಾಲ ಸಿಎಂ ಆಗಿದ್ದ ಗೌಡರು 2012ರ ಜುಲೈ 11ರಂದು ಸಿಎಂ ಖುರ್ಚಿಯಿಂದ ಕೆಳಗಿಳಿದಿದ್ದರು. ಆ ಮೂಲಕ ಈ ಹಿಂದೆಯೇ ರಾಜ್ಯದಲ್ಲಿ ಸದಾನಂದ ಗೌಡ ಉನ್ನತ ಸ್ಥಾನವನ್ನು ಪಡೆದುಕೊಂಡು ಗಮನ ಸೆಳೆದಿದ್ದರು.

ಇದೀಗ ಕೇಂದ್ರ ಸಚಿವ ಸ್ಥಾನವನ್ನು ಮೋದಿ ಸರಕಾರ ವಾಪಾಸ್ ಪಡೆದುಕೊಂಡಿದೆ. ಒಂದು ಮೂಲಗಳ ಲೆಕ್ಕಾಚಾರ ಪ್ರಕಾರ ಡಿವಿ ಸದಾನಂದ ಗೌಡರನ್ನು ಮತ್ತೆ ರಾಜ್ಯ ರಾಜಕಾರಣದಲ್ಲಿ ಸಕ್ರೀಯಗೊಳಿಸಲಾಗುತ್ತದೆ ಎನ್ನಲಾಗಿದೆ. ರಾಜ್ಯದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನವನ್ನು ಬಿಜೆಪಿ ಹೈಕಮಾಂಡ್ ನೀಡುವ ಸಾಧ್ಯತೆಗಳನ್ನು ವ್ಯಕ್ತಪಡಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಈ ನಡುವೆ ಡಿವಿ ಸದಾನಂದ ಗೌಡ ಅವರ ರಾಜೀನಾಮೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಆದರೆ, ಇಲ್ಲಿಯ ತನಕ ಬಿಜೆಪಿ ಹೈಕಮಾಂಡ್ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಸದಾನಂದ ಗೌಡ ಅವರ ಮುಂದಿನ ಸ್ಥಾನಮಾನಗಳ ಕುರಿತಂತೆ ಹೈಕಮಾಂಡ್ ಗೌಪ್ಯತೆ ಕಾಪಾಡಿಕೊಂಡಿದ್ದು, ಸಂದರ್ಭ ಬಂದಾಕ್ಷಣ ಹೈಕಮಾಂಡ್ ತನ್ನ ನಿರ್ಧಾರ ತಿಳಿಸಲಿದೆ.