Saturday, November 23, 2024
ಬಂಟ್ವಾಳಸುದ್ದಿ

ಮಳೆಗೆ ಸಂಪೂರ್ಣ ಹದಗೆಟ್ಟ ಕಾಡಬೆಟ್ಪು ಪಿಲಿಂಗಾಲು ಗಾಯತ್ರಿ ದೇವಿ ದೇವಸ್ಥಾನ ರಸ್ತೆ – ರಸ್ತೆ ವಿಸ್ತರಿಸಿ ಕಾಂಕ್ರಿಟೀಕರಣಗೊಳಿಸಲು ಭಕ್ತರ ಆಗ್ರಹ – ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳದ ಕಾವಳಪಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಕಾಡಬೆಟ್ಟು-ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನ ಸಂಪರ್ಕಿಸುವ ಮಣ್ಣಿನ ರಸ್ತೆ ಪ್ರಥಮ ಮಳೆಗೆ ಸಂಪೂರ್ಣ ಹದಗೆಟ್ಟು ಕೆಸರುಗದ್ದೆಯಾಗಿ ಪರಿವರ್ತನೆಗೊಂಡಿದೆ. ಈಗಾಗಲೇ ಕಿರಿದಾಗಿರುವ ಈ ರಸ್ತೆಯು ಬೇಸಿಗೆಯಲ್ಲಿ ಧೂಳು ತುಂಬಿಕೊಂಡರೆ ಮಳೆಗಾಲದಲ್ಲಿ ಕೆಸರುಮಯಗೊಂಡು ಪಾದಚಾರಿಗಳಿಗೆ ನಡೆದಾಡಲು ಹೋಗಲು ಪರದಾಡುವ ಸ್ಧಿತಿ ನಿರ್ಮಾಣವಾಗಿದೆ.


ಈ ಹಿಂದೆ ಪರಶುರಾಮ ಋಷಿ ತಪಸ್ಸು ಮಾಡಿದ್ದರು ಎಂಬ ಹಿನ್ನೆಲೆ ಹೊಂದಿರುವ ಪ್ರಕ್ರತಿ ರಮಣೀಯ ಸ್ಥಳದಲ್ಲಿ ಕಾರಣಿಕ ಪ್ರಸಿದ್ಧ ಗಾಯತ್ರಿ ದೇವಿ ದೇವಸ್ಥಾನ ಇದೆ. ವಗ್ಗ ರಾಷ್ಟ್ರೀಯ ಹೆದ್ದಾರಿ ಬಳಿ ಕಾವಳಕಟ್ಟೆ_ ವಾಮದಪದವು ರಸ್ತೆ ನಡುವೆ ಪಿಲಿಂಗಾಲು ದೇವಸ್ಥಾನ ರಸ್ತೆ ಹಾದು ಹೋಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂದಿನ ವರ್ಷ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಈ ದೇವಳಕ್ಕೆ ಬರಲು ಅನುಕೂಲವಾಗುವಂತೆ ರಸ್ತೆ ವಿಸ್ತರಿಸಿ ಕಾಂಕ್ರಿಟೀಕರಣಗೋಳಿಸಬೇಕು ಎಂದು ಇಲ್ಲಿನ ಭಕ್ತರು ಆಗ್ರಹಿಸಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಹಿತ ಶಾಸಕರು ಮತ್ತು ಸಂಸದರಿಗೆ ಮನವಿ ಸಲ್ಲಿಸಲಾಗಿದೆ ಎಂದು ದೇವಳದ ಧರ್ಮದರ್ಶಿ ಕೆ.ಎಸ್.ಪಂಡಿತ್ ತಿಳಿಸಿದ್ದಾರೆ.