Recent Posts

Sunday, January 19, 2025
ಸುದ್ದಿ

ಮಂಗಳೂರು ಚಿಲಿಂಬಿ ಶಿರಡಿ ಸಾಯಿ ಮಂದಿರದಲ್ಲಿ 70 ದಿನಗಳ ಅನ್ ಲೈನ್ ಯೋಗ ಶಿಬಿರ ಉದ್ಘಾಟನೆ – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪತಂಜಲಿ ಯೋಗ ಸಮಿತಿ ಭಾರತ್ ಸ್ವಾಭಿಮಾನ್ ಟ್ರಸ್ಟ್ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗ ಗುರು ಡಾ|ಜಗದೀಶ್ ಶೆಟ್ಟಿ ಅವರು ನೇತೃತ್ವದಲ್ಲಿ ಉಚಿತ ಯೋಗ ಶಿಬಿರ ಹಮ್ಮಿಕೊಳ್ಳಲಾಗಿತ್ತು. ನಗರದ ಚಿಲಿಂಬಿಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ 70 ದಿನಗಳ ಕಾಲ ನಡೆಯಲಿರುವ ಆನ್‌ಲೈನ್ ಶಿಬಿರಕ್ಕೆ ಚಾಲನೆ ಸಿಕ್ಕಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮಕ್ಕೆ ಎಸ್‌ಡಿಎಂ ಕಾಲೇಜಿನ ನಿವೃತ್ತ ಪಾಂಶುಪಾಲರಾದ ಡಾ|ದೇವರಾಜ್ ಅವರು ಉದ್ಘಾಟಿಸಿದ್ರು. ತದ ಬಳಿಕ ಪತ್ರಕರ್ತರಾದ ರವೀಂದ್ರ ಶೆಟ್ಟಿ ಮಾತನಾಡಿ, ಜಗದೀಶ್ ಶೆಟ್ಟ್ಟಿ ಅವರು ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಅನ್‌ಲೈನ್ ಯೋಗ ಶಿಬಿರವೂ ವಿದೇಶದಲ್ಲೂ ಪ್ರಸಿದ್ಧಿಯನ್ನ ಪಡೆದುಕೊಂಡಿದೆ ಎಂದು ಅವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಂದ ಯೋಗ ಗುರು ಡಾ|ಜಗದೀಶ್ ಶೆಟ್ಟಿ ಅವರಿಗೆ ಯೋಗಾಬ್ದಿ ಕಲಾನಿಧಿ ಬಿರುದು ಅನ್ನು ಪ್ರದಾನ ಮಾಡಲಾಯಿತು. ಒಡಿಯೂರು ಸಂಸ್ಥಾನದ ವತಿಯಿಂದಲೂ ಯೋಗ ಗುರು ಡಾ|ಜಗದೀಶ್ ಶೆಟ್ಟಿ ಅವರನ್ನ ಗೌರವಿಸಲಾಯ್ತು. ಎನ್‌ಎಂಪಿಟಿ ಮಾಜಿ ಟ್ರಸ್ಟಿ ಸುಧಾಕರ್ ಕಾಮತ್, ಶಾರಾದಾ ಮಹೋತ್ಸವ ಟ್ರಸ್ಟ್‌ನ ಅಧ್ಯಕ್ಷ ಸುಬ್ರಾಯ್ ನಾಯಕ್, ಆನಂದ್ ರೈ, ಎಲ್‌ಐಸಿ ನಿವೃತ್ತ ಅಧಿಕಾರಿ ಶಶಿಧರ್ ಜೆನ್ನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.