Recent Posts

Monday, January 20, 2025
ರಾಜಕೀಯ

ಹಿಂದೂಗಳ ಹತ್ಯಾಕಾಂಡ ನಡೆಸಿದ ಪಿ.ಎಫ್.ಐ. ಜೊತೆ ಹೊಂದಾಣಿಕೆ ಮಾಡುವ ಕಾಂಗ್ರೆಸ್ ಕಿತ್ತೊಗೆಯಿರಿ ; ಬಿಜೆಪಿ ಗೆಲ್ಲಿಸಿ – ಮುರಳಿಕೃಷ್ಣ ಹಸಂತಡ್ಕ

ಪುತ್ತೂರು : ಹಿಂದೂಗಳ ಸಾಲು ಸಾಲಾಗಿ ಹತ್ಯೆ ನಡೆಸಿದ ಜಿಹಾದಿ ದೇಶದ್ರೋಹಿಗಳ ಪಡೆ ಪಿ.ಎಫ್.ಐ. ಜೊತೆ ಕಾಂಗ್ರೆಸ್ ಇವತ್ತು ಹೊಂದಾಣಿಕೆಯನ್ನು ಮಾಡಿಕೊಂಡಿದೆ. ತನ್ಮೂಲಕ ಪರೋಕ್ಷವಾಗಿ ಹಿಂದೂಗಳ ಹತ್ಯೆಗೆ ಬೆಂಬಲ ನೀಡಿದೆ. ಹಾಗಾಗಿ ಈ ಭಾರಿ ಹಿಂದೂ ಧರ್ಮ ವಿರೋಧಿಗಳನ್ನು ಕಿತ್ತೊಗೆಬೇಕು ಎಂದು ಬಜರಂಗದಳದ ದಕ್ಷಿಣ ಪ್ರಾಂತದ ಸಹಸಂಚಾಲಕರಾದ ಮುರಳಿಕೃಷ್ಣ ಹಸಂತಡ್ಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹಿಂದೂ ಸಮಾಜ ಯಾವತ್ತು ವ್ಯಕ್ತಿಯಲ್ಲ ಶಕ್ತಿಯನ್ನು ಬೆಂಬಲಿಸಬೇಕು. ಹಿಂದೂ ಧರ್ಮದ ಉಳಿವಿಗಾಗಿ ಭಾರತೀಯ ಜನತಾಪಕ್ಷವನ್ನು ಬೆಂಬಲಿಸಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಜೀವ ಮಠಂದೂರು ಗೆಲುವಿಗಾಗಿ ಹಿಂದೂ ಸಮಾಜ ಶ್ರಮಿಸುತ್ತದೆ :

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸಂಜೀವ ಮಠಂದೂರು ಗೆಲುವಿಗಾಗಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಾರೆ. ಈ ಭಾರಿ ಪುತ್ತೂರಿನಲ್ಲಿ ಭಾ.ಜ.ಪ. ಹೊಸ ಇತಿಹಾಸವನ್ನು ನಿರ್ಮಿಸಲಿದೆ. 25,000 ಮತಗಳ ಅಂತರದಿಂದ ಕಾಂಗ್ರೆಸ್ ಸೋಲಲಿದೆ. ಹಿಂದುತ್ವದ ಆದರದ ಬಿಜೆಪಿ ಅಧಿಕಾರ ಪಡೆಯಲಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿ.ಎಚ್.ಪಿ. ಮುಖಂಡರಾದ ಡಾ. ಕೃಷ್ಣ ಪ್ರಸನ್ನ, ಜನಾರ್ಧನ ಬೆಟ್ಟ, ಶ್ರೀಧರ ತೆಂಕಿಲ, ಮಾಧವ ಪೂಜಾರಿ ಉಪಸ್ಥಿತರಿದ್ದರು.