Recent Posts

Monday, January 20, 2025
ಜಿಲ್ಲೆಸುದ್ದಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ವತಿಯಿಂದ 73ನೇ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಕಾರ್ಯಕ್ರಮ – ಕಹಳೆ ನ್ಯೂಸ್

ಕಾರ್ಕಳ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ತಾಲೂಕು ಎಬಿವಿಪಿಯ 73ನೇ ಸ್ಥಾಪನಾ ದಿವಸ್ ರಾಷ್ಟ್ರೀಯ ವಿದ್ಯಾರ್ಥಿ ದಿನದ ಪ್ರಯುಕ್ತ ಸೇವಾಧರ್ಮ-2021 ನ 2ನೇ ಯೋಜನೆಯ ಪ್ರಕಾರದಲ್ಲಿ ಹಿರ್ಗಾನದ ಅಭಿನಂದನಾ ಗೋಶಾಲೆಗೆ ಹಿಂಡಿ ನೀಡಲಾಯಿತು.


ನಂತರ ಎಳ್ಳಾರೆಯ ಶ್ರೀ ಜನಾರ್ದನ ಶಾಲೆಯ ವಠಾರದಲ್ಲಿ ಧ್ವಜಾರೋಹಣ ಮಾಡಲಾಯಿತು ನಂತರದಲ್ಲಿ ಶಾಲಾ ವಠಾರದಲ್ಲಿ ಸ್ವಚ್ಛತಾ ಕಾರ್ಯ ಮತ್ತು ಗಿಡನೆಡುವ ಕಾರ್ಯ ನಡೆಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಶಾಲೆಯ ಟ್ರಸ್ಟೀಗಳಾದ ಸಂತೋಷ್ ಹೆಗ್ಡೆ, ದೇವೇಂದ್ರ ಕಾಮತ್,ಸುಕೇಶ್ ಹೆಗ್ಡೆ,ಗುರುಪ್ರಸಾದ್ ಕಿಣಿ, ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ರಾಘವೇಂದ್ರ ನಾಯಕ್ ಶಾಲಾ ಮುಖ್ಯೋಪಾಧ್ಯಾಯಿನಿ ಅಶ್ವಿನಿ ಹೆಗ್ಡೆ, ಂಃಗಿP ಕಾರ್ಕಳನಗರಾಧ್ಯಕ್ಷ ಅಭಿಷೇಕ್ ಸುವರ್ಣ, ಕಾರ್ಕಳ ತಾಲೂಕು ಸಂಚಾಲಕ ಯುಕೇಶ್ ಉಜಿರೆ, ತಾಲೂಕು ವಿದ್ಯಾರ್ಥಿನಿ ಪ್ರಮುಖ್ ಅಪರ್ಣಾ ಕಾರ್ಕಳ, ತಾಲೂಕು ಸಹಸಂಚಾಲಕ ಕಾಬೆಟ್ಟು ಮನೀಶ್ ಕುಲಾಲ್, ನಗರಕಾರ್ಯದರ್ಶಿ ಮಂಜುಪ್ರಸಾದ್ ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.