ಕಲೆ, ನಟನೆ ಎಲ್ಲರಿಗೂ ಒಲಿಯುವುದಿಲ್ಲ, ಅಂತಹ ಕಲೆ ಒಲಿದವರು ಅದೃಷ್ಟವಂತರು. ಹೌದು ಸ್ನೇಹಿತರೇ ಕೆಲವರಿಗೆ ತನ್ನ ಕಲೆಯನ್ನು ಪ್ರದರ್ಶಿಸುವ ಅವಕಾಶ ಸಿಗುವುದಿಲ್ಲ. ಇನ್ನೂ ಕಲವರಿಗೆ ಅದೃಷ್ಟದಂತೆ ಪ್ರದರ್ಶಿಸುವ ಅವಕಾಶ ದೊರೆಯುತ್ತದೆ. ಯಾವುದೇ ಕಲೆಯನ್ನು ಕಾರ್ಯಗತಗೊಳಿಸುವ ಶಕ್ತಿ ಅವರಲ್ಲಿ ಇದರೆ ಜಯ ಎಂಬುದು ಅವರ ಬೆನ್ನಹಿಂದೆ ಇದೆ ಇರುತ್ತದೆ. ಅದರಲ್ಲೂ ಸಿನಿಮಾ, ಧಾರಾವಾಹಿಗೆ ಭಾರಿ ಬೇಡಿಕೆ ಇರುವ ದಿನಮಾನದಲ್ಲಿ ನಟನೆಯತ್ತ ಒಲವು ತೋರಿಸುವವರ ಸಂಖ್ಯೆ ಜಾಸ್ತಿ ಇದೆ. ಅದರಲ್ಲೂ ಸಿನಿಮಾ ಧಾರಾವಾಹಿ, ಯಾವುದಾದರೂ ಸರಿ ನಾಯಕ- ನಾಯಕಿಯಾಗಿ ಮಿಂಚಬೇಕು, ಯಾವುದೇ ಪಾತ್ರವಾದರೂ ದೊರೆಯಬೇಕೆಂಬ ಕನಸು ಕಾಣುವ ಅದೆಷ್ಟೋ ಜನರನ್ನು ನಾವು ಕಾಣಬಹುದು. ಅಂತಹದೆ ಆಸೆ ಕನಸನ್ನು ಹೊತ್ತು ಬಂದವರೇ ಶರಣ್ಯ ಗಾಣಿಗ.
ಸಂತೋಷ್ ಗಾಣಿಗ ಹಾಗೂ ಗೀತಾ ಗಾಣಿಗ ಅವರ ಪ್ರೀತಿಯ ಮಗಳಾಗಿರುವ ಶರಣ್ಯ ಗಾಣಿಗ ಧರ್ಮಸ್ಥಳದಲ್ಲಿ ಹುಟ್ಟಿ, ನಂತರ ಮಂಗಳೂರಿನಲ್ಲಿ ತನ್ನ ಬಾಲ್ಯ ಜೀವನವನ್ನು ಕಳೆದರು.
ಹೀಗೆ ತನ್ನ ಶಿಕ್ಷಣವನ್ನು ಮಂಗಳೂರಿನಲ್ಲಿ ಪೂರ್ಣಗೊಳಿಸಿದ ಶರಣ್ಯ ಗಾಣಿಗ ನಂತರ ಮೇಘ ಮಿಡಿಯಾದಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಹೀಗೆ ತನ್ನ ಕೆಲಸವನ್ನು ನಿರ್ವಹಿಸುವ ಶರಣ್ಯ ಗಾಣಿಗ ಅವರ ಜೀವನ ಹೊಸ ಪಯಾಣಕ್ಕೆ ವೇದಿಕೆಯಾಗಿದ್ದು ಒಂದು ಆಡಿಷನ್. ಬಾಲ್ಯದಿಂದಲೇ ಭರತನಾಟ್ಯ, ನಟನೆಯಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ ಶರಣ್ಯಗೆ ಇಂದು ಒಂದು ಉತ್ತಮ ವೇದಿಕೆಯಾಯಿತು. ಶರಣ್ಯ ಗಾಣಿಗ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಅಯೋಜಿಸಿದ ಆಡಿಷನ್ ಅವರನ್ನು ಬಣ್ಣದ ಲೋಕಕ್ಕೆ ಕರೆದುಕೊಳ್ಳುವಂತೆ ಮಾಡಿರುವುದು ನಿಜಕ್ಕೂ ಸತ್ಯ.
ಪ್ರಸುತ್ತ ಇವರು ಕರ‍್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ “ಗೀತಾ” ಧಾರಾವಾಹಿಯಲ್ಲಿ ಗೀತಾಳ ಸ್ನೇಹಿತೆಯಾಗಿ ಶರಣ್ಯ ಎಂಬ ಪಾತ್ರಧಾರಿಯಾಗಿ ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೀತಾ ಧಾರಾವಾಹಿಯ ಮೂಲಕ ತನ್ನ ಪ್ರತಿಭೆಯನ್ನು ಪ್ರದರ್ಶಿಸುವ ಶರಣ್ಯ ಇಂದು ಎಲ್ಲಾರ ಮನಸ್ಸಿನಲ್ಲಿ ಅಚ್ಚು ಮೆಚ್ಚಿನ ನಟಿಯಾಗಿದ್ದಾರೆ.ಅಷ್ಟೇ ಅಲ್ಲದೇ ಪ್ರಸುತ್ತ ಅಪರಾಧ ಆಧಾರಿತ ಕಥೆಯನ್ನು ಪ್ರಸಾರ ಮಾಡುವ “ಶಾತಂ ಪಾಪಂ” ಎಂಬ ಧಾರಾವಾಹಿಯ ಸಂಚಿಕೆಯಲ್ಲಿಯೂ ತನ್ನ ನಟನ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ.
ಸಾವಿರ ಪದಗಳು ಹೇಳಲಾಗದ್ದನ್ನು ಒಂದು ನಟನೆ ಮೂಲಕ ಹೇಳಬಹುದು ಎಂಬ ಮಾತಿದೆ. ಒಬ್ಬ ನಟನಾಗಬೇಕಾದರೆ ಮೊದಲು ಕ್ಯಾಮರವನ್ನು ಹೇಗೆ ಫೇಸ್ ಮಾಡಿಬೇಕು ಎಂಬುದು ತುಂಬ ಮುಖ್ಯವಾಗಿರುತ್ತದೆ. ಅದರಲ್ಲಿಯೂ ತನ್ನ ನಟನೆಯನ್ನು ಕ್ಯಾಮರದ ಮುಂದೆ ಪ್ರದರ್ಶಿಸುವುದು ತುಂಬ ಕಷ್ಟ ಕೂಡ ಹೌದು. ನಟನೆ ನನ್ನ ಜೀವನದಲ್ಲಿ ಹೊಸ ಜಗತ್ತನ್ನು ನಿರ್ಮಿಸಿದೆ, ಗೀತಾ ಧಾರಾವಾಹಿಯಲ್ಲಿ ನಟನೆ ಮಾಡುವುದಕ್ಕೆ ತುಂಬಾನೇ ಹೆಮ್ಮ ಮತ್ತು ಖುಷಿ ಇದೆ. ಹೀಗೆ ಸ್ವತಃ ತಮ್ಮ ಅನುಭವವನ್ನು ಶರಣ್ಯ ಹಂಚಿಕೊAಡಿದ್ದಾರೆ.
ಶ್ರಮ ಮತ್ತು ಜಾಣ್ಮೆ ನಾನು ಇದನ್ನು ಮಾಡಬೇಕು ಎನ್ನುವ ಛಲ ಎಲ್ಲರಲ್ಲಿಯೂ ಇರಬೇಕು. ಈ ಗುಣ ಇದ್ದವರು ಮಾತ್ರ ಒಂದೊಳ್ಳೆ ನಟಿ ಅಥವಾ ನಟನಾಗಬಲ್ಲರು ಎಂಬುದು ಅವರ ಅಭಿಪ್ರಾಯವಾಗಿದೆ.
ಶರಣ್ಯನ ಈ ಒಂದು ಹೆಜ್ಜೆಜೀವನದಲ್ಲಿ ಕಂಡ ಕನಸುಗಳನ್ನು ನೆರೆವೇರುವಂತೆ ಮಾಡಿರುವುದು ಸತ್ಯ,ಯಾವುದೇ ಒಂದು ವಿಚಾರಕ್ಕೆ ಸಂಬAಧಿಸಿದAತೆ ಸಾಧನೆ ಮಾಡಬೇಕಾದರೆ ತಂದೆ ತಾಯಿಯ ಬೆಂಬಲ ಮುಖ್ಯವಾಗುತ್ತದೆ ಅದೇ ರೀತಿ ಶರಣ್ಯನ ಈ ಒಂದು ಸಾಧನೆಯ ಹಿಂದೆ ಅವರ ತಂದೆ ತಾಯಿ ಹಾಗೂ ಸ್ನೇಹಿತರ ಪ್ರೀತಿ ವಿಶ್ವಾಸ ಮುಖ್ಯವಾಗಿರುವುದು ನಿಜಕ್ಕೂ ಸತ್ಯ.ಹೀಗೆ ಇವರ ಆಸೆ ಕನಸು ಈಡೇರಲಿ ಹಾಗೆಯೇ ಒಂದೊಳ್ಳೆ ನಟಿಯಾಗಿ ಬೆಳ್ಳಿಪರಯಲ್ಲಿ ಇನ್ನೂ ಅನೇಕ ಧಾರಾವಾಹಿಗಳಲ್ಲಿ ನಟನೆಯನ್ನು ಪ್ರದರ್ಶಿಸುವ ಅವಕಾಶ ದೊರಬೇಕು ಎಂಬುದು ನಮ್ಮ ಹಾರೈಕೆ.
✍️ ಕವಿತಾ
ತೃತೀಯ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜು, ಪುತ್ತೂರು