Sunday, January 19, 2025
ಕೃಷಿದಕ್ಷಿಣ ಕನ್ನಡರಾಜ್ಯಸುದ್ದಿ

ಕ್ಯಾಂಪ್ಕೋದಿಂದ ದೇಶದ ಮೊದಲ ಹಲಸಿನ ಹಣ್ಣಿನ ಚಾಕ್ಲೆಟ್‌ ಬಿಡುಗಡೆ – ಕಹಳೆ ನ್ಯೂಸ್

ಮಂಗಳೂರು: ದೇಶದಲ್ಲೇ ಮೊದಲ ಬಾರಿ ಹಲಸಿನ ಹಣ್ಣಿನ ಚಾಕೋಲೆಟ್ ಅನ್ನು ಕ್ಯಾಂಪ್ಕೋ ಸಂಸ್ಥೆ ನಿನ್ನೆ ಮಾರುಕಟ್ಟೆಗೆ ಪರಿಚಯಿಸಿದೆ.

ಜಾಕ್ ಫ್ರೂಟ್ ಎಕ್ಲೆರ್ ಹೆಸರಿನ ಈ ಚಾಕೋಲೆಟ್ ಅನ್ನು ನಿನ್ನೆ ಕ್ಯಾಂಪ್ಕೋ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಕ್ಯಾಂಪ್ಕೋ ಸಂಸ್ಥೆ ಈಗಾಗಲೇ ವಿವಿಧ ಬಗೆಯ ಚಾಕೋಲೆಟ್​ಗಳನ್ನು ಪರಿಚಯಿಸಿದ್ದು, ಹಲಸಿನ ಹಣ್ಣಿನ ಚಾಕೋಲೆಟ್ ಇಂದು ಪರಿಚಯಿಸಿದೆ. ಹಲಸಿನ ಹಣ್ಣಿನಲ್ಲಿ ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಆದರೆ ದೇಶದಲ್ಲಿ ಎಲ್ಲಿಯೂ ಹಲಸಿನ ಹಣ್ಣಿನಿಂದ ಚಾಕೋಲೆಟ್ ತಯಾರಿಸಲಾಗಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಲಸಿನ ಹಣ್ಣಿನ ಚಾಕೋಲೆಟ್ ಪ್ರಾಯೋಗಿಕ ತಯಾರಿಯನ್ನು ಕಳೆದ 9 ತಿಂಗಳಿನಿಂದ ಪುತ್ತೂರು ಕ್ಯಾಂಪ್ಕೋ ಚಾಕೋಲೆಟ್ ಪ್ಯಾಕ್ಟರಿಯಲ್ಲಿ ನಡೆಸಲಾಗಿದ್ದು, ಇಂದು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.ಇನ್ನು 1 ಚಾಕೋಲೆಟ್​ಗೆ 2 ರೂ. ದರ ವಿಧಿಸಲಾಗಿದೆ. ಒಂದು ಟನ್ ಚಾಕೋಲೆಟ್ ಉತ್ಪಾದನೆಗೆ 500 ಕೆ.ಜಿ ಹಲಸಿನ ಹಣ್ಣು ಬಳಸಲಾಗಿದೆ. ಇದಕ್ಕೆ ಕೇರಳ ಮತ್ತು ಕರ್ನಾಟಕದ ಹಲಸಿನ ಹಣ್ಣನ್ನು ಬಳಸಲಾಗಿದೆ.