Friday, January 24, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಅಜ್ಜನ ಮಾಯೆ ತುಳು ಕಿರುಚಿತ್ರದ ಮುಹೂರ್ತ – ನಿಮ್ಮ ಮುಂದೆ ಬರಲಿದೆ “ಕೊರಗಜ್ಜ””ನ ಕಾರಣಿಕ ಕಥೆ – ಕಹಳೆ ನ್ಯೂಸ್

ತುಳುವಿನಲ್ಲಿ ವಿಭಿನ್ನ ಕಥಾಹಂದರ ಹೊಂದಿರುವಂತಹ ಹಲವಾರು ಸನ್ನಿವೇಶಗಳನ್ನೊಳಗೊಂಡ ತುಳುನಾಡ ಕಾರ್ನಿಕದ ಶಕ್ತಿ ‘ಕೊರಗಜ್ಜ’ ನ ಕಾರಣಿಕದ ಕುರಿತಾಗಿ ಸತ್ಯ ಆಧಾರಿತ ‘ಅಜ್ಜನ ಮಾಯೆ’ ಎಂಬ ತುಳು ಕಿರುಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

inspire films ತಂಡದ ಈ ಕಿರುಚಿತ್ರದಲ್ಲಿ ಚಿತ್ರನಟ ದೀಪಕ್ ರೈ ಪಾಣಾಜೆ ಯವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದು ಜನಮೆಚ್ಚುಗೆಗೆ ಪಾತ್ರರಾಗಿರುವ ಹಲವಾರು ಕಿರುಚಿತ್ರಗಳನ್ನು ರಚಿಸಿ ನಟಿಸಿರುವ ರವಿಚಂದ್ರ ರೈ ಬಿ ಮುಂಡೂರು ಇವರ ಕಥೆ ಚಿತ್ರಕಥೆ ನಿರ್ದೇಶನದಲ್ಲಿ ರಾಜ್ ಪ್ರೊಡಕ್ಷನ್ ಧನರಾಜ್ಅವರ ಕ್ಯಾಮಾರಾವರ್ಕ್ ಹಾಗೂ ಪುತ್ತೂರಿಗೆ ಹೊಸದಾಗಿ ಆನ್ಲೈನ್ ಶಾಪಿಂಗ್ ಪ್ಲಾಟ್-ಫಾರ್ಮ್ ಮುಖಾಂತರ ಪರಿಚಯಗೊಳ್ಳಲಿರುವ AceCartz ಪುತ್ತೂರು ಇವರ ಪ್ರಾಯೋಜಕತ್ವದಲ್ಲಿ ಮೂಡಿಬರಲಿದೆ..

ಜಾಹೀರಾತು
ಜಾಹೀರಾತು
ಜಾಹೀರಾತು

ಅಜ್ಜನ ಮಾಯೆ ತುಳು ಕಿರುಚಿತ್ರದ ಮುಹೂರ್ತ ಸಂಧರ್ಭದಲ್ಲಿ ಹೆಸರಾಂತ ಚಲನಚಿತ್ರನಟ ದೀಪಕ್ ರೈ ಪಾಣಾಜೆ, ನಿರ್ದೇಶಕರಾದ ರವಿಚಂದ್ರ ರೈ ಬಿ ಮುಂಡೂರು,ರಾಜ್ ಪ್ರೊಡಕ್ಷನ್ ಕ್ಯಾಮರಾವರ್ಕ್ ಧನರಾಜ್,ರವಿ ಸಿಂಗೇರಿ,ಹರೀಶ್ ರೈ ಮುಗೇರು(ಕುಂಬ್ರ), ಕಿರಣ್ ಶೆಟ್ಟಿ ಮುಲ್ಕಿ , ಹರೀಶ್ ಆಲಂಗಾಜೆ, ವೆಂಕಪ್ಪ ಬರೆಪ್ಪಾಡಿ, ಅನಿಲ್ ಕುಮಾರ್ ಕೌಡಿಚ್ಚಾರು, ಪ್ರವೀಣ್ ಮುಲಾರ್, ಅಭಿಶೇಕ್ ಶೆಟ್ಟಿ ಸಂಪ್ಯ,ಚೇತನ್ ಪಂಜಳ, ಜಗದೀಶ್ ಪಿ.ಕೆ ಪಾದಲಾಡಿ,ರಿತೇಶ್ ಕೆಮ್ಮಾಯಿ, ಜಗದೀಶ್ ಶೆಟ್ಟಿ ಕೆರೆಮೂಲೆ, ಪೂಜಾ ಶೆಟ್ಟಿ ಮುಂಡೂರು,ಬೇಬಿ ಶಾರ್ವರಿ ಕೌಡಿಚ್ಚಾರು,ವಸಂತ ಪುತ್ತೂರು, ವಿಕ್ಕಿ ಶೆಟ್ಟಿ ಪುತ್ತೂರು,ಹರೀಶ್ ಬರೆಪ್ಪಾಡಿ,ಶ್ರೀಕಾಂತ್ ಬರೆಪ್ಪಾಡಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಅತಿ ಶೀಘ್ರವಾಗಿ ತುಳುನಾಡ ಜನರ ಮುಂದೆ ಬರಲಿದೆ.