ಜು.20ರಂದು ದ್ವಿತೀಯ ಪಿಯುಸಿ ಫಲಿತಾಂಶ ವೆಬ್‌ಸೈಟ್‌ನಲ್ಲಿ ಪ್ರಕಟ ; ಫಲಿತಾಂಶ ನೋಡುವುದು ಹೇಗೆ..? – ಕಹಳೆ ನ್ಯೂಸ್
ಬೆಂಗಳೂರು, ಜು 16 : ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶವನ್ನು ಜುಲೈ 20ರಂದು ಪ್ರಕಟಿಸುವುದಾಗಿ ಶಿಕ್ಷಣ ಇಲಾಖೆ ಹೇಳಿದೆ.
ಕೊರೊನಾ ಕಾರಣದ ಹಿನ್ನೆಲೆ ಸ್ಥಗಿತಗೊಂಡಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಪಟ್ಟಂತೆ ಸಿಬಿಎಸ್‌ಸಿ ಮಾದರಿಯಲ್ಲಿ ಎಸ್ಸೆಸ್ಸೆಲ್ಸಿ, ಪಿಯು ಅಂಕವನ್ನು ಪರಿಗಣಿಸಿ ಫಲಿತಾಂಶ ನೀಡಲು ತಯಾರಿ ಕೈಗೊಂಡಿದ್ದು, ಫಲಿತಾಂಶ ಗ್ರೇಡ್ ಬದಲು ಅಂಕಗಳ ಆಧಾರದ ಮೇಲೆ ವೆಬ್‌ಸೈಟ್ ಮೂಲಕ ಪ್ರಕಟವಾಗಲಿದೆ.
ಶಿಕ್ಷಣ ಇಲಾಖೆ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದ್ದು, “ಈ ಬಾರಿ ಯಾವುದೇ ರೀತಿಯ ಗೊಂದಲವಾಗದಂತೆ ವ್ಯವಸ್ಥಿತವಾಗಿ ಫಲಿತಾಂಶ ನೀಡಲಾಗುವುದು. ಈ ಬಾರಿ ಗ್ರೇಡ್ ಬದಲು ಅಂಕಗಳ ಆಧಾರದಲ್ಲಿ ಫಲಿತಾಂಶ ಇರಲಿದೆ. ಎಸ್ಸೆಸ್ಸೆಲ್ಸಿಯ ಮೊದಲ ಪರೀಕ್ಷೆಯ ಮರುದಿನ ಪಿಯು ಫಲಿತಾಂಶ ನೀಡಲು ತೀರ್ಮಾನ ಕೈಗೊಳ್ಳಲಾಗಿದ್ದು, ಫಲಿತಾಂಶ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ” ಎಂದು ಹೇಳಿದೆ.
ಫಲಿತಾಂಶ ನೋಡುವುದು ಹೇಗೆ?
“ಫಲಿತಾಂಶ ನೋಡುವ ಸಲುವಾಗಿ ವಿದ್ಯಾರ್ಥಿಗಳಿಗೆ ಹೊಸ ರಿಜಿಸ್ಟರ್ ನಂಬರ್ ಅನ್ನು ಜನರೇಟ್ ಮಾಡುವ ವ್ಯವಸ್ಥೆ ಮಾಡಲಾಗಿದೆ. know my number ಆಯ್ಕೆಯನ್ನು ಪಿಯು ವೆಬ್‌ಸೈಟ್ ಮೂಲಕ ವಿದ್ಯಾರ್ಥಿಗಳು ಪರಿಶೀಲಿಸಬಹುದಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಎಸ್‌ಎಂಎಸ್ ಮೂಲಕ ತಿಳಿಸಲಾಗುವುದು. ಅಲ್ಲದೇ, ಆಯಾ ಕಾಲೇಜಿಗೆ ಈ ಬಗ್ಗೆ ಮಾಹಿತಿ ನೀಡಲಾಗುವುದು. ವಿದ್ಯಾರ್ಥಿಗಳು, ತಮ್ಮ ಫಲಿತಾಂಶದ ಮೊದಲು ತಮ್ಮ ರಿಜಿಸ್ಟರ್ ನಂಬರ್ ಅನ್ನು ಖಚಿತಪಡಿಸಿಕೊಳ್ಳಬೇಕು. ಅಲ್ಲದೇ ಜನರೇಟ್ ಆದ ರಿಜಿಸ್ಟರ್ ನಂಬರ್ ಅನ್ನು ವಿದ್ಯಾರ್ಥಿಗಳು ಖಚಿತಪಡಿಸಿಕೊಳ್ಳಬೇಕು. ಬಳಿಕ ಜುಲೈ 20ರಂದು ವೆಬ್‌ಸೈಟ್ ಮೂಲಕ ಫಲಿತಾಂಶ ಪಡೆದುಕೊಳ್ಳಬಹುದು” ಎಂದು ಮಾಹಿತಿ ನೀಡಿದೆ.