Sunday, January 19, 2025
ಅಂಕಣ

ಸಾಧನೆಯತ್ತ ಸಾಗುತ್ತಿರುವ ಯುವ ನಟಿ ಸುಶ್ಮಿತಾ ರಾಮ್‌ಕಳ – ಕಹಳೆ ನ್ಯೂಸ್

ಶಕ್ತಿಯೆಲ್ಲ ನಿಮ್ಮೆಳಗೇ ಇದೆ’ ನೀವು ಏನು ಬೇಕಾದರೂ ಮಾಡಬಲ್ಲಿರಿ, ಎಲ್ಲವನ್ನು ಮಾಡಬಲ್ಲಿರಿ. ಎಂಬ ಸ್ವಾಮಿ ವಿವೇಕಾನಂದರ ಮಾತು ನಿಜಕ್ಕೂ ಸತ್ಯ ಎಂದು ಅನಿಸಿತ್ತದೆ ಪ್ರತಿಯೊಬ್ಬರಿಗೂ ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಬಯಕೆ ಇದೆ ಇರುತ್ತದೆ. ಅದರಲ್ಲೂ ಪ್ರಸುತ್ತ ದಿನಗಳಲ್ಲಿ ಯುವಜನರಲ್ಲಿ ಇರುವಂತಹ ಛಲವು ಅವರನ್ನು ಉತ್ತಮ ಸ್ಥಾನಕ್ಕೆ ತಲುಪುವಂತೆ ಮಾಡಿರುವುದು ಸತ್ಯ.
ಪ್ರಸುತ್ತ ದಿನಗಳಲ್ಲಿ ಸಿನಿಮಾ, ಧಾರಾವಾಹಿ,ಮಾಡೆಲಿಂಗ್ ಹೀಗೆ ಮುಂತಾದ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು, ಅದರ ಮೂಲಕ ಮಿಂಚಬೇಕು ಎಂಬ ಆಸೆ, ಕನಸನ್ನು ಕಾಣುವ ಅದೆಷ್ಟೋ ಜನರನ್ನು ನಾವು ಕಾಣಬಹುದು. ಇಂತಹ ಸಾಧನೆ ಮಾಡಬೇಕಾದರೆ ಕಲೆ ಎಂಬುದು ತುಂಬಾನೇ ಮುಖ್ಯ. ನಾನು ನಟ- ನಟಿಯಾಗಬೇಕು ಎನ್ನುವ ಕನಸು ಕಾಣುವ ಪ್ರತಿಯೊಬ್ಬರಲ್ಲಿಯೂ ಕಲೆ ಎಂಬುದು ಇದ್ದೆ ಇರುತ್ತದೆ. ಅಂತವರಲ್ಲಿ “ಸುಶ್ಮಿತಾ ರಾಮ್‌ಕಳ” ಒಬ್ಬರು.


ರಾಮಕೃಷ್ಣ. ಪಿ ಹಾಗೂ ಕಲಾವತಿಯವರ ಪ್ರೀತಿಯ ಮಗಳಾದ ಸುಶ್ಮಿತಾ ರಾಮ್‌ಕಳ ಮೂಲತಃ ಬೆಂಗಳೂರಿನವರು, ಇವರು ತನ್ನ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ ಶಿಕ್ಷಣವನ್ನು ಬೆಂಗಳೂರಿನಲ್ಲಿಪೂರ್ಣಗೊಳಿಸಿದರು.
ಎಳೆಯ ವಯಸ್ಸಿನಿಂದಲೇ ಮಾಡೆಲಿಂಗ್, ನಟನೆಯ ವಿಚಾರದಲ್ಲಿ ತುಂಬಾ ಅಸಕ್ತಿಯನ್ನು ಹೊಂದಿರುವ ಸುಶ್ಮಿತಾ ನಂತರ ದಿನಗಳಲ್ಲಿ ಅನೇಕ ಕಡೆಗಳಲ್ಲಿ ಮಾಡೆಲಿಂಗ್‌ನ್ನು ಪ್ರದರ್ಶಿಸಿದ್ದಾರೆ. ಮೊದಲು ಮಿಸ್ಟರ್ ಅ್ಯಂಡ್ ಮಿಸ್ ಕರ್ನಾಟಕ 2018ರ ನಂದಿನಿ ನಾಗರಾಜ್ ಪ್ರದರ್ಶನದಲ್ಲಿ ಸೆಲೆಬ್ರಿಟಿ ಶೋಸ್ಟಾಪರ್‌ಅಗಿದರು.ಹಾಗೇ ಮಿಸ್ಟರ್ ಅ್ಯಂಡ್ ಮಿಸ್ ಇಂಡಿವುಡ್ ಹೈದರಾಬಾದ್ ಫ್ಲಿಮ್ ಕಾರ್ನೀವಲ್ 2018 ರ ಮಾಡೆಲಿಂಗ್ ಪ್ರದರ್ಶನದಲ್ಲಿ ಎರಡನೇ ಸ್ಥಾನ ಗಳಿಸಿರುತ್ತಾರೆ. ಮೈಸೂರಿನಲ್ಲಿ ನಡೆದ ಮಿಸ್ಟರ್ ಅ್ಯಂಡ್ ಮಿಸ್ ಡೆಕಾಥ್ಲಾನ್ 2018 ರ ಮಾಡೆಲಿಂಗ್ ಪ್ರದರ್ಶನದಲ್ಲಿ ಸುಶ್ಮಿತಾ ರಾಮ್‌ಕಳ ರವರು ರನ್ನರ್ ಅಫ್ sಸ್ಥಾನವನ್ನು ಪಡೆದು ಕೊಂಡಿರುತ್ತಾರೆ.ಸಾಧಿಸಬೇಕೆಂಬ ಮನಸಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸುಶ್ಮಿತಾ ಒಂದು ಉದಾಹರಣೆಯೆಂದೇ ಹೇಳಬಹುದು. ಹೌದು ಸ್ನೇಹಿತರೇ ಎಲ್ಲರಿಗೂ ತಾನು ಒಂದು ನಟ- ನಟಿಯಾಗಬೇಕು, ಸಿನಿಮಾ ಧಾರಾವಾಹಿಯಲ್ಲಿ ಕಾಣಬೇಕು ಎಂಬ ಆಸೆ ಎಲ್ಲರಲ್ಲಿಯೂ ಇದ್ದೆ ಇರುತ್ತದೆ. ಆದರೆ ಕೇವಲ ಆಸೆ ಕನಸು ಇದ್ದರೆ ಸಾಲದು, ಆ ಕನಸನ್ನು ನನಸು ಮಾಡುವ ಛಲ, ಮನಸ್ಸು ಇರಬೇಕು. ಅಗಿರುವಾಗ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ. ಸುಶ್ಮಿತಾ ಚಿಕ್ಕ ವಯಸ್ಸಿನಿಂದಲೇ ತಾನೂ ಒಬ್ಬ ಉತ್ತಮ ನಟಿಯಾಗಬೇಕೆಂಬ ಕನಸು ಇದ್ದದ್ದು ನಿಜ. ಅದರಲ್ಲೂ ತನ್ನ ಮಗಳು ದೊಡ್ಡ ಪರದೆಯ ಮೇಲೆ ಕಾಣಬೇಕು ಎಂಬ ತಂದೆ ತಾಯಿಯ ಅಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸುಶ್ಮಿತಾ ತನ್ನ ಸ್ನೇಹಿತರ ಹಾಗೂ ಹಿರಿಯ ಧಾರಾವಾಹಿ ಕಲಾವಿದರ ಸಹಕಾರದೊಂದಿಗೆ ಧಾರಾವಾಹಿಗಳಲ್ಲಿ ನಟಿಸಲು ವಿವಿಧ ಕಡೆಗಳಲ್ಲಿ ನಡೆದ ಆಡಿಷನ್‌ಗಳಲ್ಲಿ ತನ್ನ ನಟನೆಯನ್ನು ಪ್ರದರ್ಶಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಹೀಗೆ ನಂತರ ತನ್ನ ತಂದೆ ತಾಯಿಯ ಅಸೆಯಂತೆ ಧಾರಾವಾಹಿಗೆ ಆಯ್ಕೆಯೂ ಆಗುತ್ತಾರೆ.ನಟನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸು ಕಾಣುತ್ತಿದ್ದ ಸುಶ್ಮಿತಾ ಇದೀಗ ಅನೇಕ ಧಾರಾವಾಹಿಯಲ್ಲಿ ನಟನೆಯನ್ನು ಪ್ರದರ್ಶಿಸಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಅರಮನೆ ಗಿಳಿಯಲ್ಲಿ” ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಶ್ಮಿತಾ, ಉದಯ ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ “ನಾನು ನನ್ನ ಕನಸು” ಎಂಬ ಧಾರಾವಾಹಿಯ ಮೂಲಕ ಜನರ ಮನಸ್ಸಿನಲ್ಲಿ ಅಚ್ಚು ಮೆಚ್ಚಿನ ನಟಿಯಾಗಿದ್ದಾರೆ. ಹಾಗೆಯೇ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ “ಅಭಿಲಾಷ” ಎಂಬ ತೆಲುಗು ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ ಸುಶ್ಮಿತಾ ಪ್ರಸುತ್ತ “ಬೈ 2 ಲವ್” ಎಂಬ ಸಿನಿಮಾ ಒಂದರಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ. ಆರ್ ಪೇಟೆಯವರ ಜೊತೆ ಎರಡನೇ ನಾಯಕಿಯಾಗಿ ನಟಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜೀವನದಲ್ಲಿ ಮನುಷ್ಯನಿಗೆ ತಾಳ್ಮೆ ಪರಿಶ್ರಮ ಮತ್ತು ಸಮಯ ಪ್ರಜ್ಞೆ ಬಹಳ ಮುಖ್ಯ. ಈ ಮೂರು ಅಂಶ ಮಾನವನಲ್ಲಿ ಇದ್ದರೆ ಮಾತ್ರ ನಮ್ಮ ಗುರಿಯನ್ನು ತಲುಪಲು ಸಾಧ್ಯ. ಹಾಗೆಯೇ ಒಬ್ಬ ನಟಿ- ನಟನಾಗ ಬಯಸುವವರಿಗೆ ಮೊದಲು ತಾಳ್ಮೆ ವಿಶ್ವಾಸಮುಖ್ಯ. ಸಮಯ ಪ್ರಜ್ಞೆ ಇರುವವರು ತನ್ನ ಗುರಿಯನ್ನು ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ ಎಂದು ಸುಶ್ಮಿತಾ ಅಭಿಪ್ರಾಯವನ್ನು ತಿಳಿಸಿದ್ದಾರೆ.

“ಶ್ರದ್ಧೆಯೆ ಯಶಸ್ಸುನ ಕೀಲಿ ಕೈ” ಎಂಬ ಮಾತು ನಿಜಕ್ಕೂ ಸತ್ಯ ಯಾವುದೇ ಒಂದು ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ದಾರೆ ಯಶಸ್ಸುಎಂಬುದು ಸಿಗುತ್ತದೆ. ಅದೇ ರೀತಿ ಸುಶ್ಮಿತಾ ತನ್ನನಟನೆಯ ಮೇಲೆ ಇಟ್ಟಿರುವ ಶ್ರದ್ದೆ ಅವರನ್ನು ಈ ಒಂದು ಸಾಧನೆ ಮಾಡುವಂತೆ ಮಾಡಿತು. ಮುಂದಿನ ದಿನಗಳಲ್ಲಿ ಇವರ ನಟನೆ ಸ್ಯಾಂಡಲ್‌ವುಡ್‌ನಲ್ಲೂ ಪಸರಿಸಲ್ಲಿ ಎಂಬುದೇ ನಮ್ಮ ಅಶಯ.

ಕವಿತಾ
ತೃತೀಯ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜು ಪುತ್ತೂರು.