ಪುತ್ತೂರು- ಉಪ್ಪಿನಂಗಡಿ ರಸ್ತೆಯಲ್ಲಿನ ಕೋಡಿಂಬಾಡಿ ಸಮೀಪದ ಸೇಡಿಯಾಪು ಜಂಕ್ಷನ್ ಬಳಿ ಸರ್ಕಲ್ ಮತ್ತು ಮಾರ್ಗಸೂಚಿ ಸ್ಥಾಪಿಸುವಂತೆ ಸೇಡಿಯಾಪು ಫ್ರೆಂಡ್ಸ್ ಕ್ಲಬ್ ವತಿಯಿಂದ ಲೋಕೋಪಯೋಗಿ ಇಲಾಖೆಗೆ ಮನವಿ
ಪುತ್ತೂರು- ಸೇಡಿಯಾಪು ಮೂಲಕ ಒಂದು ಮಾರ್ಗ ಪೆರ್ನೆ ಕಡಂಬು ಸೇರುತ್ತದೆ ಮತ್ತು ಅಲ್ಲಿ ದೊಡ್ಡ ತಿರುವು ಇದ್ದ ಕಾರಣ ಹಾಗೂ ವಾಹನಗಳ ದಟ್ಟಣೆ ಜಾಸ್ತಿ ಇರುವ ಕಾರಣ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಈ 3 ಮಾರ್ಗ ಸೇರುವಲ್ಲಿ ಸರ್ಕಲ್‌ನ ಅವಶ್ಯಕತೆ ಇರುತ್ತದೆ. ಸೇಡಿಯಾಪು ಎಂಬ ನಾಮಫಲಕ “ಎಸ್” ಎಂಬ ಮಾರ್ಕಿನಲ್ಲಿ ಹೆಬ್ಬಾವಿನ ಚಿತ್ರದೊಂದಿಗೆ ಬಹಳ ವರ್ಷಗಳಿಂದ ಪ್ರಸಿದ್ಧಿಯಾಗಿತ್ತು. ಇಲ್ಲಿ ಹೊಸ ಮಾರ್ಗವನ್ನು ಮಾಡುವ ಸಂದರ್ಭದಲ್ಲಿ ಈ ಫಲಕವನ್ನು ತೆರವು ಗೊಳಿಸಲಾಗಿದೆ. ಆದ್ದರಿಂದ ಹೊಸ ಸರ್ಕಲ್ ನಿರ್ಮಿಸಿ ಫಲಕ ಅಳವಡಿಸಲು ಮತ್ತು ಮಾರ್ಗಸೂಚಿ ಇಲ್ಲದೇ ವಾಹನ ಚಾಲಕರಿಗೆ ಗೊಂದಲ ಆಗುವ ಸಂದರ್ಭ ನಿರ್ಮಾಣವಾಗುವುದರಿಂದ ಮಾರ್ಗಸೂಚಿಯನ್ನು ಅಳವಡಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ನೀಡುವ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷರಾದ ಗ್ರಾ.ಪಂ.ಸದಸ್ಯ ಜಯಪ್ರಕಾಶ್ ಬದಿನಾರು, ಕ್ಲಬ್ ಅಧ್ಯಕ್ಷ ಚಂದ್ರಶೇಖರ, ಕಾರ್ಯದರ್ಶಿ ಸತೀಶ್ ಮಡಿವಾಳ, ಸದಸ್ಯರಾದ ವಿನಯ ಕುಮಾರ್ ಮತ್ತಯ ಹರೀಶ್ ಉಪಸ್ಥಿತರಿದ್ದರು.