Saturday, November 23, 2024
ಸುದ್ದಿ

ಬೀದಿಪಾಲಾದ ಕುಟುಂಬಕ್ಕೆ ಬೆಳಕಾದ ಜಿಎಚ್ ಎಂ ಫೌಂಡೇಶನ್ – ಕಹಳೆ ನ್ಯೂಸ್

ಮಂಗಳೂರು: ಕೋರೊನಾ ಲಾಕ್ ಡೌನ್ ಅದೆಷ್ಟೋ ಮಂದಿಯ ಜೀವನದ ಮೇಲೆ ಪ್ರಭಾವ ಬೀರಿ ಅದೆಷ್ಟೋ ಕುಟುಂಬಗಳು ಬೀದಿ ಪಾಲಾಯಿತು. ಆದ್ರೆ ಇಲ್ಲೊಂದು ಸಂಸ್ಥೆ ಬೀದಿ ಪಾಲಾದ ಕುಟುಂಬಗಳಿಗೆ ನೆರವಾಗುವ ಮೂಲಕ ಆಶ್ರಯ ನೀಡುವ ಯೋಜನೆಯಲ್ಲಿ ತೊಡಗಿದೆ. ಹೌದು, ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಗ್ರಾಮಗಳ ಪಟ್ಟಿಯಲ್ಲಿರುವ ಮುಲ್ಲರಪಟ್ಟಣದ ಜಿಎಚ್ಎಂ ಫೌಂಡೇಶನ್ ಸಂಸ್ಥೆ ಮಾತ್ರ ಜಿಲ್ಲೆಯಲ್ಲಿರುವ ಬಡ ನಿರ್ಗತಿಕರ ಬಾಳಿಗೆ ಬೈತುಲ್ ಹುದಾ ಯೋಜನೆಯಡಿ ಆಶ್ರಯ ನೀಡುವ ಮೂಲಕ ನಾಲ್ಕನೆಯ ಆಶ್ರಯ ಯೋಜನೆಯನ್ನು ಅರ್ಹ ಕುಟುಂಬಗಳಿಗೆ ಹಸ್ತಾಂತರಿಸಿದ್ದಾರೆ.


ಜಿಎಚ್ಎ0 ಫೌಂಡೇಶನ್ ಸಂಸ್ಥೆಯ ಸದಸ್ಯರು ವಿದೇಶಿದಲ್ಲಿ ದುಡಿದು ತಮ್ಮ ದೈನಂದಿನ ವೆಚ್ಚದ ಅಲ್ಪ ಭಾಗವನ್ನು ಈ ಸಂಸ್ಥೆಯ ಮೂಲಕ ಬೈತುಲ್ ಹುದಾ ಆಶ್ರಯ ಯೋಜನೆ ನೀಡ್ತಾ ಬಂದಿದ್ದು ಇಂದು ಮೂರನೇ ಬೈತುಲ್ ಹುದಾ ಆಶ್ರಯ ಯೋಜನೆ ಹಾಗೂ ಬೈತುಲ್ ಹುದಾ ನವೀಕೃತ ಮನೆ ಹಸ್ತಾಂತರದ ಮಾತ್ರವಲ್ಲದೆ ಅರ್ಹ ಫಲಾನುಭಾವಿಗಳಿಗೆ ಸಹಾಯ ಧನ ವಿತರಣೆಯನ್ನು ಖ್ಯಾತ ಪ್ರಭಾಷಣಕಾರ ಚೊಕ್ಕಬೆಟ್ಟು ಮಸೀದಿ ಮುದರ್ರಿಸ್ ಅಬ್ದುಲ್ ಅಝೀಝ್ ದಾರಿಮಿ ನೆರವೇರಿಸಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು


ಇದೇ ವೇಳೆ ಮೂಲರಪಟ್ಟಣ ಕೇಂದ್ರ ಜುಮಾ ಮಸೀದಿ ಖತೀಬರಾದ ಅಬ್ದುಲ್ ಸಲಾಮ್ ಯಮಾನಿ, ಜಿಎಚ್ಎಂ ಫೌಂಡೇಶನ್ ಅಧ್ಯಕ್ಷ ಮಹಮ್ಮದ್ ಶಾಲಿ, ಸಮಾಜ ಸೇವಕ ರಫೀಕ್ ಮಾಸ್ಟರ್, ಜಿಎಚ್ಎಂ ಫೌಂಡೇಶನ್ ಪ್ರೋಜೆಕ್ಟ್ ಇವೆಂಟ್ ಕೋಡಿನೇಟರ್ ಸಜೀವುದ್ದೀನ್ ಎಮ್ ಎಸ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು