Saturday, January 18, 2025
ಬಂಟ್ವಾಳಸುದ್ದಿ

ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಪ್ರದೇಶಾಭಿವೃದ್ಧಿ ನಿಧಿಯಿಂದ ಮಂಜೂರಾತಿಗೊಂಡ , ಕೆ.ಎಸ್. ಆರ್. ಟಿ.ಸಿ, ಸಾರಿಗೆ – ಕಹಳೆ ನ್ಯೂಸ್

ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಪ್ರದೇಶಾಭಿವೃದ್ಧಿ ನಿಧಿಯಿಂದ ಮಂಜೂರಾತಿಗೊಂಡ , ಸುರಕ್ಷ ಯೋಜನೆಯ ಸಂಚಾರಿ ಐಸಿಯು ಬಸ್ಸು ಕುಕ್ಕಿಪಾಡಿ ಗ್ರಾಮ ಪಂಚಾಯತ್ ಆವರಣಕ್ಕೆ ಆಗಮಿಸಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿದರು, ಸುಮಾರು ನೂರಕ್ಕೂ ಹೆಚ್ಚು ಜನರು ಸಕ್ಕರೆ ಖಾಯಿಲೆ, ಬಿಪಿ, ಇನ್ನಿತರ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಈ ಸಮಯದಲ್ಲಿ ಪಂಚಾಯತ್ ಅಧ್ಯಕ್ಷರಾದ ಸುಜಾತ ಆರ್ ಪೂಜಾರಿ, ಉಪಾಧ್ಯಕ್ಷಾರಾದ ಯೊಗೀಶ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ತುಳಸಿನಿ, ಪಂಚಾಯತ್ ಸದಸ್ಯರುಗಳಾದ ಲಿಂಗಪ್ಪ ಪೂಜಾರಿ, ಶೇಖರ್ ಶೆಟ್ಟಿ, ಶ್ರೀಮತಿ ಬೇಬಿ, ಶ್ರೀಮತಿ ಗೀತಾ, ಶ್ರೀಮತಿ ಪ್ರತಿಭಾ ಶೆಟ್ಟಿ, ಶ್ರೀಮತಿ ಶೋಭ, ಶ್ರೀಮತಿ ಪುಷ್ಪ, ಚಂದ್ರ ಪೂಜಾರಿ, ಶ್ರೀಮತಿ ಪೂರ್ಣಿಮಾ, ಪಂಚಾಯತ್ ಸಿಬ್ಬಂದಿಗಳು,ಆಶಾ ಕಾರ್ಯ ಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಜರಿದ್ದು ಆರೋಗ್ಯ ತಪಾಸಣೆ ಮಾಡಿಸಿಕೊಂಡರು

ಜಾಹೀರಾತು

ಜಾಹೀರಾತು
ಜಾಹೀರಾತು