Saturday, January 18, 2025
ಆರೋಗ್ಯರಾಷ್ಟ್ರೀಯಸುದ್ದಿ

ಭಾರತದಲ್ಲಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರದಿಂದ ತಲಾ 50 ಲಕ್ಷ ರೂ.ಗಳ ವಿಮೆ ; ಯಾರಿಗೆ ಸಿಗುತ್ತೆ ಆರೋಗ್ಯ ವಿಮೆ..!? – ಕಹಳೆ ನ್ಯೂಸ್

ನವದೆಹಲಿ, ಜುಲೈ 21: ಭಾರತದಲ್ಲಿ ಕೊರೊನಾವೈರಸ್ ವಿರುದ್ಧ ಹೋರಾಡುವ ಆರೋಗ್ಯ ಕಾರ್ಯಕರ್ತರಿಗೆ ವಿಮಾ ಯೋಜನೆಯಡಿ 50 ಲಕ್ಷ ರೂಪಾಯಿ ಆರೋಗ್ಯ ವಿಮೆ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ದೇಶದಲ್ಲಿ 921 ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ತಲಾ 50 ಲಕ್ಷ ರೂ.ಗಳ ವಿಮಾ ಹಕ್ಕುಗಳನ್ನು ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

ದೇಶದಲ್ಲಿ ಜುಲೈ 15ರ ಅಂಕಿ-ಅಂಶಗಳ ಪ್ರಕಾರ, “ಒಟ್ಟು 921 ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ಆರೋಗ್ಯ ವಿಮೆ ಅಡಿಯಲ್ಲಿ 50 ಲಕ್ಷ ರೂಪಾಯಿ ನೀಡಲಾಗಿದೆ,” ಎಂದು ರಾಜ್ಯಸಭೆಯಲ್ಲಿ ಕೇಂದ್ರ ರಾಜ್ಯ ಆರೋಗ್ಯ ಸಚಿವರಾದ ಭಾರತಿ ಪವಾರ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಭದ್ರತೆ ಒದಿಗಸುವ ದೃಷ್ಟಿಯಿಂದ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರು ಕೇಳಿದ ಪ್ರಶ್ನೆಗೆ ಸಚಿವ ಭಾರತಿ ಪವಾರ್ ಉತ್ತರ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಗ್ಯ ವಿಮಾ ಯೋಜನೆ ಅಡಿ ಎಷ್ಟು ವೈದ್ಯಕೀಯ ಸಿಬ್ಬಂದಿಗೆ ಹಣ ನೀಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿದರು.

ಯಾವ ರಾಜ್ಯದಲ್ಲಿ ಎಷ್ಟು ಆರೋಗ್ಯ ಸಿಬ್ಬಂದಿಗೆ ವಿಮೆ:

ಮಹಾರಾಷ್ಟ್ರದಲ್ಲಿ 144 ಆರೋಗ್ಯ ಸಿಬ್ಬಂದಿ, ಆಂಧ್ರ ಪ್ರದೇಶ 90 ಮಂದಿ, ರಾಜಸ್ಥಾನ 78 ಮಂದಿ, ಕರ್ನಾಟಕ 71 ಮಂದಿ, ಗುಜರಾತ್ 66 ಮಂದಿ ಹಾಗೂ ಮಧ್ಯಪ್ರದೇಶ 57 ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂಪಾಯಿ ವಿಮೆ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

ಯಾರಿಗೆ ಸಿಗುತ್ತೆ ಆರೋಗ್ಯ ವಿಮೆ:

ಕೊರೊನಾವೈರಸ್ ನಿರ್ವಹಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ವೈದ್ಯರು, ಖಾಸಗಿ ವೈದ್ಯರು ಹಾಗೂ ಸರ್ಕಾರದ ಅಧೀನದಲ್ಲಿ ಬರುವ ವೈದ್ಯರಿಗೆ ವೈಯಕ್ತಿಕ ಅಪಘಾತ ಭದ್ರತೆ ಒದಗಿಸಲಾಗುವುದು. ಆರೋಗ್ಯ ವಿಮೆ ಯೋಜನೆ ಅಡಿಯಲ್ಲಿ 50 ಲಕ್ಷ ರೂಪಾಯಿ ಹಣವನ್ನು ನೀಡಲಾಗುವುದು.