Saturday, November 23, 2024
ದಕ್ಷಿಣ ಕನ್ನಡಶಿಕ್ಷಣಸುದ್ದಿ

ದ್ವಿತೀಯ ಪಿ.ಯು.ಸಿ. 100% ಫಲಿತಾಂಶ ; ಮಂಗಳೂರಿನ ಶಕ್ತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಶ್ಲಾಘನೀಯ ಸಾಧನೆ – ಕಹಳೆ ನ್ಯೂಸ್

 

ಮಂಗಳೂರು, ಜು.20: ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ದ್ವಿತೀಯ ಪ ಪೂ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಜ್ಞಾನ ವಿಭಾಗದಲ್ಲಿ 47 ವಿದ್ಯಾರ್ಥಿಗಳ ಪೈಕಿ ವಿಶಿಷ್ಟ ಶ್ರೇಣಿಯಲ್ಲಿ 28 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 18 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಶ್ರೇಣಿಯಲ್ಲಿ ಓರ್ವ ವಿದ್ಯಾರ್ಥಿ ತೇರ್ಗಡೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಜ್ಞಾನ ವಿಭಾಗದ ಮಾನಸ ಎಸ್.ಬಿ. ಪಿಸಿಎಂಬಿಯಲ್ಲಿ 600ರಲ್ಲಿ 600 ಅಂಕ, ಪಿಸಿಎಂಬಿಯ ರಕ್ಷಿತ್ ಎಸ್.ಬಿ 600ರಲ್ಲಿ 593 ಅಂಕ, ಪಿಸಿಎಂಸಿಯ ಶಿವನ್ ವಿ. ನಾಯ್ಕ್ 600ರಲ್ಲಿ 592, ಪಿಸಿಎಂಬಿಯಲ್ಲಿ ವಂಶಿಕ 600ರಲ್ಲಿ 589, ಪಿಸಿಎಂಬಿಯ ಹರ್ಷ ಕೆ.ಆರ್ 600ರಲ್ಲಿ 579, ಪಿಸಿಎಂಸಿಯ ಚೇತನಾ 600ರಲ್ಲಿ 578, ಪಿಸಿಎಂಸಿಯ ಸಂಜನಾ 600ರಲ್ಲಿ 581, ಪಿಸಿಎಂಬಿಯ ಪ್ರಜ್ವಲ್ ವೈ.ಬಿ.600ರಲ್ಲಿ 579, ಪಿಸಿಎಂಸಿಯ ಕೃಷ್ಣ ಚೇತನ್ ಶೆಟ್ಟಿ 600ರಲ್ಲಿ 575 ಅತ್ಯಧಿಕ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 33 ವಿದ್ಯಾರ್ಥಿಗಳ ಪೈಕಿ ಏಳು ವಿಶಿಷ್ಟ ಶ್ರೇಣಿ, 20 ಪ್ರಥಮ ಶ್ರೇಣಿ, ದ್ವಿತೀಯ ಶ್ರೇಣಿಯಲ್ಲಿ ಆರು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದ ಶಿಖಾ 600ರಲ್ಲಿ 583, ಪ್ರಮೋದಿನಿ 600ರಲ್ಲಿ 554, ಮ್ಯೂರಲ್ ಜೆನಿಶಾ ಫುಟಾರ್ಡೊ 600 ರಲ್ಲಿ 552, ಆತ್ಮಿಕ 600ರಲ್ಲಿ 540, ಶರಣ್ 600ರಲ್ಲಿ 522, ಸ್ಫೂರ್ತಿ 600ರಲ್ಲಿ 520, ಕೃಷಿಕ್ ಬಿ.ಡಿ. 600ರಲ್ಲಿ 518 ಅತ್ಯಧಿಕ ಅಂಕ ಪಡೆದು ತೇರ್ಗಡೆ ಹೊಂದಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.