Sunday, January 19, 2025
ಅಂಕಣ

ಬೆಳೆಯುವ ಸಿರಿ ಮೊಳಕೆಯಲ್ಲಿ; ಕೃಷಿಯಲ್ಲಿ ಒಲವು ಬೆಳೆಸಿಕೊಂಡಿರುವ ಪುಟ್ಟ ಪೋರ- ಕಹಳೆ ನ್ಯೂಸ್

ಈ ಪುಟ್ಟ ಪೋರನ ಹೆಸರು ಚಿರಾಗ್ ಗೌಡ. ಪುತ್ತೂರು ತಾಲೂಕು, ಬಜತ್ತೂರು ಗ್ರಾಮದ ಪಾಲೆತ್ತಾಡಿಯ ದುರ್ಗಾರಾಜ್ ಮತ್ತು ನವ್ಯಾ ದಂಪತಿಯ ಪುತ್ರ. ಈತನ ವಯಸ್ಸು ಕೇವಲ ಮೂರು ವರ್ಷ. ಸಾಮಾನ್ಯವಾಗಿ ಈಗಿನ ಮಕ್ಕಳೆಲ್ಲಾ ಈಗಿನ ಟ್ರೆಂಡ್ ಗೆ ಅವಲಂಬಿಸಿರುತ್ತಾರೆ. ಮೊಬೈಲ್ ನಲ್ಲಿ ಗೇಮ್ಸ್, ಟಿ. ವಿ.ಯಲ್ಲಿ ಕಾರ್ಟೂನ್ ಅಂತ ತಮ್ಮ ಬಾಲ್ಯವನ್ನು ಕಳೆಯುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಈ ಪುಟ್ಟ ಪೋರ ಎಷ್ಟರಮಟ್ಟಿಗೆ ಡಿಫರೆಂಟ್ ಅಂದರೆ ಸ್ವ-ಇಚ್ಛೆಯಿಂದ ಗದ್ದೆಗೆ ಇಳಿದು, ತನ್ನ ಹಿರಿಯರು ಗದ್ದೆಯಲ್ಲಿ ನಾಟಿ ಕೆಲಸದಲ್ಲಿ ತೊಡಗಿದ್ದರೆ, ತಾನೂ ಅವರ ಜೊತೆ ನಾಟಿ ಕೆಲಸಕ್ಕೆ ಸಹಾಯ ಮಾಡುತ್ತಾನೆ. ಮನೆಯವರು ತೆಂಗು-ಅಡಿಕೆ ತೋಟದಿಂದ ಹೊತ್ತು ತರುವಾಗ ಇವನು ಸಹ ತನಗಾಗುವಷ್ಟು ತಲೆಯಲ್ಲಿ ಹೊತ್ತು ತರುತ್ತಾನೆ.ಹೀಗೆ ತನ್ನ ವಯಸ್ಸಿಗೂ ಮೀರಿದ ಸಾಧನೆ ಮಾಡುತ್ತಾನೆ. ಈ ಪುಟ್ಟ ಪೋರ ಕ್ರಷಿ ಕೆಲಸದಲ್ಲಿ ಎತ್ತಿದ ಕೈ.

ಜಾಹೀರಾತು
ಜಾಹೀರಾತು
ಜಾಹೀರಾತು

“ಬೆಳೆಯುವ ಸಿರಿ ಮೊಳಕೆಯಲ್ಲಿ” ಅನ್ನುವ ಹಾಗೆ ಈ ಪುಟ್ಟ ಪೋರ ತನ್ನ ಮನೆಯವರನ್ನು ಅನುಸರಿಸುತ್ತಾನೆ. ಹಿಂದಿನ ಕ್ರಷಿ ಪದ್ಧತಿಯು ಅಳಿದು ಹೋಗದಂತೆ ಈ ಚೋಟು ಹುಡುಗ ಪಣ ತೊಟ್ಟಿದ್ದಾನೆ. ಕೃಷಿಯಲ್ಲಿ ಒಲವು ಬೆಳೆಸಿಕೊಂಡಿರುವ ಈತ ಕ್ರಷಿಯನ್ನು ಮುಂದುವರೆಸುವ ಹಂಬಲ ಇಟ್ಟುಕೊಂಡಿದ್ದಾನೆ.

ಮೆಲಿಶಾ ಪ್ರೀಯ ಡಿಸೋಜ
ತೃತೀಯ ಬಿಎ
ವಿವೇಕಾನಂದ ಪದವಿ ಕಾಲೇಜು ಪುತ್ತೂರು