ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ರಾಜಧಾನಿ ದೆಹಲಿಯಲ್ಲಿ ಪಾಕಿಸ್ತಾನದ ಉಗ್ರರಿಂದ ಡ್ರೋನ್ ದಾಳಿಗೆ ಸಂಚು ; ಗುಪ್ತಚರ ಸಂಸ್ಥೆಗಳು ಮುನ್ನೆಚ್ಚರಿಕೆ – ಹೈ ಅಲರ್ಟ್ – ಕಹಳೆ ನ್ಯೂಸ್
ನವದೆಹಲಿ(ಜು.21): ಆ.15ರ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ರಾಜಧಾನಿ ದೆಹಲಿಯಲ್ಲಿ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಡ್ರೋನ್ ಬಳಸಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆಗಳು ಮುನ್ನೆಚ್ಚರಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಮುಂಗಾರು ಅಧಿವೇಶನ ಸಂದರ್ಭ ಮತ್ತು ಸ್ವಾತಂತ್ರ್ಯೋತ್ಸವದ ವೇಳೆ ಪಾಕಿಸ್ತಾನ ಮೂಲಕ ಉಗ್ರ ಸಂಘಟನೆಗಳು ಡ್ರೋನ್ ಬಳಸಿ ಮೂಲಕ ದಾಳಿ ನಡೆಸುವ ಸಾಧ್ಯತೆ ಇದೆ. ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಲಾದ ದಿನವಾದ ಆಗಸ್ಟ್ 5ರಂದು ರಾಷ್ಟ್ರ ರಾಜಧಾನಿ¿ಲ್ಲಿ ದಾಳಿಯಾಗುವ ಸಾಧ್ಯತೆಗಳಿವೆ ಎಂದು ಭದ್ರತಾ ಏಜೆನ್ಸಿಯು ದಿಲ್ಲಿ ಪೊಲೀಸರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಇತ್ತೀಚಿಗೆ ಜಮ್ಮುವಿನಲ್ಲಿರುವ ಭಾರತೀಯ ವಾಯುಪಡೆ ಕಚೇರಿ ಮೇಲೆ ಡ್ರೋನ್ ದಾಳಿ ನಡೆದ ಬಳಿಕ ದಿಲ್ಲಿ ಪೊಲೀಸ್ ಆಯುಕ್ತ ಬಾಲಾಜಿ ಶ್ರಿವಾತ್ಸವ ಅವರು ಗುಪ್ತಚರ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಎಲ್ಲಾ ಕಡೆಗಳಲ್ಲಿಯೂ ತೀವ್ರ ಕಟ್ಟೆಚ್ಚರ ವಹಿಸುವಂತೆ ನಿರ್ದೇಶಿಸಿದ್ದಾರೆ.
ಅಲ್ಲದೇ, ನಗರದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.
ಸಂಭಾವ್ಯ ಡ್ರೋನ್ ದಾಳಿಯ ಎಚ್ಚರಿಕೆ ಬಳಿಕ ವಿಶೇಷ ಕಂಟ್ರೋಲ್ ರೂಮ್‌ಅನ್ನು ದಿಲ್ಲಿ ಪೊಲೀಸರು ಸ್ಥಾಪಿಸಿದ್ದು, 4 ಡ್ರೋನ್ ತಡೆ ಸಿಸ್ಟಮ್ ಮೂಲಕ ಕೆಂಪುಕೋಟೆಯ ಮೇಲೆ ನಿಗಾ ಇಟ್ಟಿದ್ದಾರೆ. ಅಧಿಕಾರಿಗಳಿಗೆ ಡ್ರೋನ್ ದಾಳಿ ತಡೆ ಬಗ್ಗೆ ವಿಶೇಷ ತರಬೇತಿಯನ್ನೂ ನೀಡಲಾಗಿದೆ.