Saturday, November 23, 2024
ಸುದ್ದಿ

ಹಾಸ್ಟಲ್‌ಗಳನ್ನು ಪ್ರಾರಂಭಿಸುವ ಕುರಿತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ವತಿಯಿಂದ ತಾಹಶೀಲ್ದಾರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ – ಕಹಳೆ ನ್ಯೂಸ್

ಪುತ್ತೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ವತಿಯಿಂದ ತಾಹಶೀಲ್ದಾರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಹಾಸ್ಟಲ್‌ಗಳನ್ನು ಪ್ರಾರಂಭಿಸುವ ಮತ್ತು ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೌಲಭ್ಯ ಒದಗಿಸುವ ಕುರಿತಾಗಿ ಮನವಿಯನ್ನು ನೀಡಲಾಯಿತು. ಕೋವಿಡ್ ಎರಡನೆಯ ಅಲೆಯಿಂದಾಗಿ ರಾಜ್ಯದ ಎಲ್ಲ ಹಾಸ್ಟೆಲ್‌ಗಳು ಸೇರಿದಂತೆ ಎಲ್ಲಾ ಕಾಲೇಜುಗಳು ಕಳೆದ ಮೂರ್ನಾಲ್ಕು ತಿಂಗಳುಗಳಿ0ದ ಬಂದ್ ಆಗಿದ್ದವು. ಪ್ರಸ್ತುತ ರಾಜ್ಯ ಸರಕಾರವು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬರುವ ದಿನಗಳಲ್ಲಿ ರಾಜ್ಯದ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಗಳನ್ನು ಆರಂಭಿಸುವ0ತೆ ನೀಡಿರುವುದನ್ನು ಅಭಾವಿಪ ಸ್ವಾಗತಿಸುತ್ತದೆ. ರಾಜ್ಯದ ಅನೇಕ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಹಾಸ್ಟೆಲ್ಗಳಿಗೆ ಅವಲಂಬಿತವಾಗಿರುವುದರಿ0ದ ರಾಜ್ಯದ ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಇಲಾಖೆಯ ವ್ಯಾಪ್ತಿಯ ಬರುವ ಎಲ್ಲಾ ಹಾಸ್ಟಲ್‌ಗಳನ್ನು ತೆರೆಯಬೇಕು ಮತ್ತು ಉನ್ನತ ಶಿಕ್ಷಣ ಇಲಾಖೆಯು ಈ ಇಲಾಖೆಗಳೊಂದಿಗೆ ಸಮನ್ವಯದೊಂದಿಗೆ ಸಂಬ0ಧಪಟ್ಟ ಎಲ್ಲ ಕ್ರಮಗಳನ್ನು ತೆಗೆದುಕೊಂಡು ಸ್ಯಾನಿಟೈಸ್ ಮಾಡಿಸಿ ಹಾಸ್ಟಲ್‌ಗಳನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ಇರಲು ಅವಕಾಶ ಮಾಡಿಕೊಡಬೇಕೆಂದು ಅಭಾವಿಪ ಆಗ್ರಹಿಸುತ್ತದೆ ಮತ್ತು ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ತಕ್ಷಣವೇ ಬಸ್ ಪಾಸ್ ಸೌಲಭ್ಯ ಮಾಡಿಕೊಡಬೇಕಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸರಕಾರವನ್ನು ಆಗ್ರಹಿಸುತ್ತದೆ. ಮನವಿ ನೀಡುವ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ಜಿಲ್ಲಾ ಸಂಚಾಲಕ ಹಿತೇಶ್ ಕಟ್ರಮನೆ,ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಂದಾರ, ಪುತ್ತೂರು ನಗರ ಕಾರ್ಯದರ್ಶಿ ಜಗದೀಶ್ ಕಾಪಾರು, ಸುಬ್ರಹ್ಮಣ್ಯ ನಗರ ಕಾರ್ಯದರ್ಶಿ ಇಳೈ ಅರಸ್ ಕಾರ್ಯಕರ್ತರಾದ ಆಕಾಶ್ ಪಾರೆಪ್ಪಾಡಿ, ಕಾರ್ತಿಕ್ ಪಂಜ ,ದಿವ್ಯ,ಮಿನಲ್ ಕುಮಾರ್,ತೇಜ ಪ್ರಕಾಶ್,ಇಂದ್ರ ಕುಮಾರ್ ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು