Tuesday, January 21, 2025
ಸುದ್ದಿ

ನಾಟಾ ಪರೀಕ್ಷಾ ಫಲಿತಾಂಶ: ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ- ಕಹಳೆ ನ್ಯೂಸ್

ಪುತ್ತೂರು: ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್ (ಎನ್‍ಎಟಿಎ-ನಾಟಾ) ಪ್ರವೇಶ ಪರೀಕ್ಷೆ ಬರೆದ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳಾದ ನೆಲ್ಲಿಕಟ್ಟೆಯ ಸುರೇಶ್ ಟಿ ಮತ್ತು ಮಾಲಿನಿ ಬಿ.ಎಸ್ ದಂಪತಿಗಳ ಪುತ್ರಿ ಕೃಪಾ ಟಿ.ಎಸ್, ಬನ್ನೂರಿನ ಚಿದಾನಂದ ವಾಸುದೇವ ಶೆಟ್ಟಿ ಮತ್ತು ಬಬಿತಾ ಶೆಟ್ಟಿ ದಂಪತಿ ಪುತ್ರ ದೇವಿಶ್ ಸಿ. ಶೆಟ್ಟಿ, ಕುಂಜೂರುಪಂಜದ ಶಿವಪ್ರಸಾದ್ ಡಿ ಮತ್ತು ಆಶಾ ದಂಪತಿ ಪುತ್ರ ಅನೀಶ್ ಎಸ್ ಮಯ್ಯ , ಸುಳ್ಯದ ಮಂಡೆಕೋಲಿನ ಶ್ಯಾಮ ಪ್ರಸಾದ್ ಮತ್ತು ಸೌಮ್ಯ ಎನ್. ಜೆ ದಂಪತಿ ಪುತ್ರಿ ಪೂರ್ಣ ಎಸ್ ಪ್ರಸಾದ್, ಕಬಕದ ಮಹಬಲೇಶ್ವರ ಭಟ್ ಕೆ ಮತ್ತು ವಿದ್ಯಾ ಎಂ ದಂಪತಿ ಪುತ್ರಿ ದೀಪಿಕಾ ಪಿ. ಎಂ, ಬೊಳ್ವಾರಿನ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮತ್ತು ಶರ್ಮಿಳಾ ದಂಪತಿ ಪುತ್ರಿ ಶಿಫಾಲಿಕಾ ಹಾಗೂ ಕೆದಿಲದ ಶ್ಯಾಮಪ್ರಸಾದ್ ಮತ್ತು ಸುಮನ ದಂಪತಿ ಪುತ್ರಿ ಸಿಂಧೂರ ಒ ನಾಟಾ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಸ್ಪರ್ಧಾತ್ಮಕ ಯುಗದಲ್ಲಿ ಆರ್ಕಿಟೆಕ್ಚರ್ ವಿಭಾಗವು ಪ್ರಾಮುಖ್ಯತೆ ಪಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಒದಗಲಿರುವ ಹಿನ್ನೆಲೆಯಲ್ಲಿ ಈ ಕೋರ್ಸ್‍ಗೆ ಆದ್ಯತೆ ನೀಡಲಾಗುತ್ತಿದೆ. ಈ ಕೋರ್ಸ್‍ನ ಪ್ರವೇಶಕ್ಕೆ ನಾಟಾ ಪರೀಕ್ಷೆಯ ಫಲಿತಾಂಶವೇ ಮಾನದಂಡವಾಗಿದ್ದು, ಈ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಸಂಸ್ಥೆಯ ಪ್ರಾಂಶುಪಾಲ ಮಹೇಶ ನಿಟಿಲಾಪುರ ತಿಳಿಸಿದ್ದಾರೆ.`