ಕೆಎಮ್ಎಫ್ಗೆ ಸಂಸ್ಧೆಯಿಂದ ಸರಬರಾಜಾಗುವ ಉತ್ಪನ್ನಗಳ ಪೊಟ್ಟಣದ ಮೇಲೆ ತುಳು ಲಿಪಿ ಮುದ್ರಿಸಿ – ಕೆಎಮ್ಎಫ್ಗೆ ಶಾಸಕ ವೇದವ್ಯಾಸ್ ಕಾಮತ್ ಮನವಿ – ಕಹಳೆ ನ್ಯೂಸ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆ.ಎಂ.ಎಫ್ ಸಂಸ್ಥೆಯಿಂದ ಸರಬರಾಜಾಗುವ ಉತ್ಪನ್ನಗಳ ಪೊಟ್ಟಣಗಳ ಮೇಲೆ ತುಳು ಲಿಪಿಯ ವರ್ಣಮಾಲೆ ಮುದ್ರಿಸಿ ಹಂಚುವಂತೆ ಶಾಸಕ ವೇದವ್ಯಾಸ್ ಕಾಮತ್ ದಕ್ಷಿಣ ಕನ್ನಡ ಹಾಲು ಉತ್ಪಾದಕ ಸಂಸ್ಥೆಯ ಅಧ್ಯಕ್ಷರಿಗೆ ಹಾಗೂ ವ್ಯವಸ್ಥಾಪನಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಭಾಷೆಯ ಉಳಿವು ಅದನ್ನು ಬಳಸಿದಾಗ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ಕೆ.ಎಂ.ಎಫ್ ಸಂಸ್ಥೆಯ ಉತ್ಪನ್ನಗಳ ಪೊಟ್ಟಣಗಳ ಮೇಲೆ ತುಲುಲಿಪಿಯ ವರ್ಣಮಾಲೆಯ ಬಳಕೆಗೆ ಈಗಾಗಲೇ ಅಧ್ಯಕ್ಷರಿಗೆ ಮತ್ತು ವ್ಯವಸ್ಥಾಪನಾ ನಿರ್ದೇಶಕರಿಗೆ ಪತ್ರ ಬರೆದಿದ್ದೇನೆ. ಮುಂದಿನ ದಿನಗಳಲ್ಲಿ ಸಹಕಾರಿ ಸಚಿವರಿಗೂ ಇದರ ಕುರಿತು ಮಾಹಿತಿ ನೀಡಿ ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.