ಗುರುಪೂರ್ಣಿಮೆ ನಿಮಿತ್ತ ಸಂದೇಶ – ಧರ್ಮಸಂಸ್ಥಾಪನೆಗಾಗಿ ಸರ್ವಸ್ವದ ತ್ಯಾಗ ಮಾಡಿ ! – (ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ- ಕಹಳೆ ನ್ಯೂಸ್
‘ಗುರುಪೂರ್ಣಿಮೆಯು ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವಾಗಿದೆ. ಈ ದಿನದಂದು ಪ್ರತಿಯೊಬ್ಬ ಶ್ರದ್ಧಾವಂತ ಹಿಂದೂವು ಆಧ್ಯಾತ್ಮಿಕ ಗುರುಗಳ ಬಗ್ಗೆ ಕೃತಜ್ಞತೆಯೆಂದು ತನ್ನ ಕ್ಷಮತೆಗನುಸಾರ ತನು-ಮನ-ಧನವನ್ನು ಸಮರ್ಪಿಸುತ್ತಿರುತ್ತಾನೆ ಅಧ್ಯಾತ್ಮದಲ್ಲಿ ತನು, ಮನ ಮತ್ತು ಧನ ಇವುಗಳ ತ್ಯಾಗಕ್ಕೆ ಅಸಾಧಾರಣ ಮಹತ್ವವಿದೆ; ಆದರೆ ಗುರು ತತ್ತ್ವಕ್ಕೆ ಶಿಷ್ಯನ ಒಂದು ದಿನದ ತನು-ಮನ-ಧನದ ತ್ಯಾಗವಲ್ಲ, ಆದರೆ ಸರ್ವಸ್ವದ ತ್ಯಾಗವು ಬೇಕಾಗಿರುತ್ತದೆ. ಸರ್ವಸ್ವದ ತ್ಯಾಗ ಮಾಡದೇ ಮೋಕ್ಷ ಪ್ರಾಪ್ತಿಯಾಗುವುದಿಲ್ಲ. ಆದುದರಿಂದ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳಲು ಬಯಸುವವರು ಸರ್ವಸ್ವದ ತ್ಯಾಗವನ್ನು ಮಾಡಬೇಕು.
ವೈಯಕ್ತಿಕ ಜೀವನದಲ್ಲಿ ಧರ್ಮಪರಾಯಣ ಜೀವನವನ್ನು ನಡೆಸುವ ಶ್ರದ್ಧಾವಂತ ಹಿಂದೂ ವಾಗಿರಲಿ ಅಥವಾ ಸಮಾಜಸೇವಕ, ದೇಶಭಕ್ತ ಮತ್ತು ಹಿಂದುತ್ವನಿಷ್ಠ ಹೀಗೆ ಸಮಷ್ಟಿ ಜೀವನ ದಲ್ಲಿ ಕರ್ಮಶೀಲ ಹಿಂದೂವಾಗಿರಲಿ, ಅವರಿಗೆ ಸಾಧನೆಗಾಗಿ ಸರ್ವಸ್ವದ ತ್ಯಾಗ ಮಾಡುವುದು ಕಠಿಣವೆನಿಸಬಹುದು; ಆದರೆ ಅವರಿಗೆ ರಾಷ್ಟ್ರ- ಧರ್ಮದಕಾರ್ಯಕ್ಕಾಗಿ ಸರ್ವಸ್ವದ ತ್ಯಾಗ ಮಾಡುವುದು ತುಲನೆಯಲ್ಲಿ ಸುಲಭವೆನಿಸಬಹುದು. ಪ್ರಸ್ತುತ ಧರ್ಮಸಂಸ್ಥಾಪನೆಗಾಗಿ ಕಾರ್ಯ ಮಾಡುವುದು ಸರ್ವೋತ್ತಮ ಸಮಷ್ಟಿ ಸಾಧನೆಯಾಗಿದೆ. ಧರ್ಮಸಂಸ್ಥಾಪನೆ ಎಂದರೆ ಸಮಾಜ ವ್ಯವಸ್ಥೆ ಮತ್ತು ರಾಷ್ಟ್ರ ರಚನೆಯನ್ನು ಆದರ್ಶವಾಗಿರಿಸಲು ಮಾಡುವ ಪ್ರಯತ್ನವಾಗಿದೆ. ಕಲಿಯುಗದಲ್ಲಿ ಈ ಕಾರ್ಯವನ್ನು ಮಾಡಬೇಕಾದರೆ ಸಮಾಜಕ್ಕೆ ಧರ್ಮಾಚರಣೆಯನ್ನು ಕಲಿಸುವುದು ಮತ್ತು ಆದರ್ಶ ರಾಜ್ಯ ವ್ಯವಸ್ಥೆಗಾಗಿ ನ್ಯಾಯೋಚಿತವಾಗಿ ಹೋರಾಡುವುದು ಅನಿವಾರ್ಯವಾಗಿದೆ. ಆರ್ಯ ಚಾಣಕ್ಯ, ಛತ್ರಪತಿ ಶಿವಾಜಿ ಮಹಾರಾಜರು ಸಹ ಧರ್ಮಸಂಸ್ಥಾಪನೆಯ ಕಾರ್ಯಕ್ಕಾಗಿ ಸರ್ವಸ್ವದ ತ್ಯಾಗ ಮಾಡಿದ್ದರು. ಅವರ ತ್ಯಾಗದಿಂದ ಧರ್ಮ ಸಂಸ್ಥಾಪನೆಯ ಕಾರ್ಯವು ಯಶಸ್ವಿಯಾಗಿತ್ತು, ಎಂಬ ಇತಿಹಾಸವನ್ನು ಗಮನದಲ್ಲಿಡಿ. ಆದುದರಿಂದಲೇ ಧರ್ಮನಿಷ್ಠ ಹಿಂದೂಗಳೇ, ಈ ಗುರುಪೂರ್ಣಿಮೆಯಿಂದ ಧರ್ಮಸಂಸ್ಥಾಪನೆಗಾಗಿ ಅಂದರೆ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸರ್ವಸ್ವದ ತ್ಯಾಗ ಮಾಡುವ ಸಿದ್ಧತೆಯನ್ನು ಮಾಡಿರಿ ಮತ್ತು ಇಂತಹ ತ್ಯಾಗ ಮಾಡುವುದರಿಂದ ಖಂಡಿತವಾಗಿಯೂ ಗುರುತತ್ತ್ವಕ್ಕೆ ಅಪೇಕ್ಷಿತವಾದ ಆಧ್ಯಾತ್ಮಿಕ ಉನ್ನತಿಯಾಗುತ್ತದೆ, ಎಂಬುದನ್ನು ಗಮನದಲ್ಲಿಡಿ ! – (ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ.