ಮಳೆಗಾಲ ಎಂದಾಕ್ಷಣ ಹಲವಾರು ಸಮಸ್ಯೆಗಳನ್ನು ನಾವು ಎದುರಿಸುತ್ತೇವೆ. ಅಂತಹ ಸಮಸ್ಯೆಗಳಲ್ಲಿ ಒಂದು ಸಮಸ್ಯೆ ಎಂದರೆ ಅದು ಕರೆಂಟ್. ಪ್ರಸುತ್ತ ಜಗತ್ತು ಅಧುನಿಕರಣ ಹೊಂದುತ್ತಿರುವ ಈ ಸಮಯದಲ್ಲಿ ನಾವು ಬಳಸುವ ಪ್ರತಿಯೊಂದಕ್ಕೂ ಕಾರೆಂಟ್ ಎಂಬ ಮಾಧ್ಯಮವು ಬೇಕೇ ಬೇಕಾಗುತ್ತದೆ. ಹೀಗಿರುವಾಗ ಮಳೆಗಾಲದ ಸಂದರ್ಭದಲ್ಲಿ ಕೆಲವೊಂದು ಸಮಸ್ಯೆಯಿಂದ ಹೆಚ್ಚಾಗಿ ಕರೆಂಟ್ ಇರುವುದಿಲ್ಲ. ಕರೆಂಟ್ ಹೋದಾಕ್ಷಣ ಮೊದಲು ನಾವು ಬೈಯುವುದೇ ಲೈನ್ ಮ್ಯಾನ್‌ಗೆ ಇದು ಮಾತ್ರ ನಿಜವಾದ ಸಂಗತಿ.
ಲೈನ್ ಮ್ಯಾನ್ ಕರೆಂಟ್ ತೆಗೆದು ಸತ್ತ ಎಂದು ನಾವು ಹೆಚ್ಚಾಗಿ ಹೇಳುತ್ತೇವೆ. ಹಾಗೆಯೇ ಕರೆಂಟ್ ಹೋದಾ ಸ್ವಲ್ಪ ಹೊತ್ತಿಗೆ ಬಂದರೆ ಅಲ್ಲಿಗೆ ಆ ಬೈಗುಲ ನಿಲ್ಲುತ್ತದೆ, ಇಲ್ಲದಿದ್ದರೆ ಅವನಿಗೆ ಜೊತೆಗೆ ಅವನ ಕುಟುಂಬಕ್ಕೂ ಶಪಿಸುವುದುಂಟು ಆದರೆ ಆತ ಕರೆಂಟ್ ತೆಗೆದದ್ದು ಯಾಕೆ ಎಂಬುದನ್ನು ನಾವು ಯೋಚಿಸುದೇ ಇಲ್ಲ. ಸ್ನೇಹಿತರೇ ನಾವು ಇದನ್ನು ಯೋಚನೆ ಮಾಡಲೇಬೇಕು.
ಲೈನ್ ಮ್ಯಾನ್ ನಮಗೋಸ್ಕರ ಕರೆಂಟ್ ತೆಗೆದಿರುತ್ತಾನೆ. ಅನಾಹೂತಗಳನ್ನು ತಪ್ಪಿಸಲು ಕರೆಂಟ್ ತೆಗೆದಿರುತ್ತಾನೆ. ಆತನ ಉದ್ದೇಶ ಅರಿಯದೇ ನಾವು ಅವನಿಗೆ ಅವನ ಇಡೀ ಕುಟುಂಬಕ್ಕೆ ಬೈಯುವುದು ತಪ್ಪು ಅಲ್ಲವೇ. ಲೈನ್ ಮ್ಯಾನ್‌ನಾಗಿ ಆತನ ಕೆಲಸ ಏನು ಅದನ್ನು ನಿರ್ವಹಿಸುವುದು ಅವನ ಕರ್ತವ್ಯ. ತಾನು ಕಷ್ಟ ಪಟ್ಟು ರಾತ್ರಿ, ಹಗಲು, ಚಳಿ, ಮಳೆ, ಬಿಸಿಲು, ಎಂಬುದನ್ನೇ ಲೆಕ್ಕಿಸದೇ ದಿನ ೨೪ ಗಂಟೆ ದುಡಿಯುತ್ತಾರೆ. ಲೈನ್ ಮ್ಯಾನ್ ನಮ್ಮಲ್ಲಾರಿಗೂ ಬೆಳಕನ್ನು ಒದಗಿಸುವ ಒಬ್ಬ ಯೋಧ ಎಂದು ಹೇಳಿದರೆ ತಪ್ಪಿಲ್ಲ.
ನಮಗೆ ಬೆಳಕನ್ನು ನೀಡಲು ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಾನೆ ಆತನಿಗೆ ತನ್ನದೇ ಆದ ಕುಟುಂಬ ಇದೆ ತನ್ನನ್ನೇ ನಂಬಿಕೊAಡು ಇರುವ ಪುಟ್ಟ ಸಂಸಾರ ಇರುತ್ತದೆ ಅದನ್ನೆಲ್ಲಾ ಮೀರಿ ನಮಗೆ ಸಹಾಯ ಮಾಡುತ್ತಾನೆ. ಹೀಗಿರುವಾಗ ಅಂತಹ ಉತ್ತಮ ಕೆಲಸವನ್ನು ಮಾಡುವ ಲೈನ್ ಮ್ಯಾನ್‌ಗೆ ಬೈಯುವುದು ತಪ್ಪು ಸ್ನೇಹಿತರೇ. ನಾವು ಲೈನ್ ಮ್ಯಾನ್‌ನನ್ನು ಶಪಿಸುವ ಮೊದಲು ಅವರಿಗೆ ಆಗುವ ಕಷ್ಟ ನೋವು ಅದನ್ನು ಅರ್ಥಮಾಡಿಕೊಂಡಾಗ ಲೈನ್ ಮ್ಯಾನ್ ಎಂದರೆ ಯಾರು ಅವರು ನಮ್ಮಗಾಗಿ ಮಾಡುವ ತ್ಯಾಗ ಏನು ಎಂಬುದನ್ನು ತಿಳಿಯಲು ಪ್ರಯತ್ನಿಯೋಣ. ಹಾಗೇ ಸೂರ್ಯನಂತೆ ಬೆಳಕನ್ನು ನೀಡುವ ಲೈನ್ ಮ್ಯಾನ್ ಗೆ ಎಲ್ಲಾರೂ ಸೇರಿ ಸಲಾಂ ಹೇಳುವ ಸ್ನೇಹಿತರೇ.
ಕವಿತಾ
ತ್ರತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು.