Recent Posts

Sunday, January 19, 2025
ಸುದ್ದಿ

ಕೋಮು ಪ್ರಚೋದನಾಕಾರಿ ಭಾಷಣ ಆರೋಪ ; ಸಾದ್ವಿ ಸರಸ್ವತಿ ವಿರುದ್ದ ಕೇಸು ದಾಖಲು – ಕಹಳೆ ನ್ಯೂಸ್

ಕಾಸರಗೋಡು : ಎಪ್ರಿಲ್ 27 ರಂದು ಬದಿಯಡ್ಕದಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ವಿ ಎಚ್ ಪಿ ನಾಯಕಿ ಸಾದ್ವಿ ಬಾಲಿಕಾ ಸರಸ್ವತಿ ವಿರುದ್ಧ ಬದಿಯಡ್ಕ ಪೊಲೀಸರು ಜಾಮೀನುರಹಿತ ಮೊಕದ್ದಮೆ ಹೂಡಿದ್ದಾರೆ.

ಕೋಮು ಭಾವನೆ ಕೆರಳಿಸಿ ಗಲಭೆ ನಡೆಸುವಂತಹ ಪ್ರಚೋದನೆ ನೀಡುವ ಕರೆ ನೀಡಿದ ಆರೋಪದಡಿ ಮಧ್ಯಪ್ರದೇಶ ನಿವಾಸಿಯಾಗಿರುವ ಸಾದ್ವಿ ಸರಸ್ವತಿ ವಿರುದ್ಧ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಚೋದನಕಾರಿ ಹೇಳಿಕೆ ವಿರುದ್ಧ ಜಿಲ್ಲೆಯ ಕೆಲ ಸಂಘಟನೆಗಳು ಹಾಗೂ ಹಲವಾರು ಮಂದಿ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಆದೇಶದಂತೆ ಬದಿಯಡ್ಕ ಪೊಲೀಸರು ಈಕೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು