ಬೆಂಗಳೂರು: ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ಭಾರಿ ಮಳೆ ಆಗುತ್ತಿದೆ. ಬಿಸಿಲಿನಿಂದ ಬೆಂದ ಜನರಿಗೆ ಪೂರ್ವ ತಂಪೆರೆದಿದ್ದು, ಸೋಮವಾರ ನಗರದ ಹಲವೆಡೆ ಸಂಜೆಯ ವೇಳೆಗೆ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗಿತ್ತು.
ಬಿಇಎಲ್ ಸರ್ಕಲ್, ಗಂಗಮ್ಮನಗುಡಿ, ಎಂಎಸ್ ಪಾಳ್ಯ ಮತ್ತಿಕೆರೆ ಯಶವಂತಪುರ ಸೇರಿ ಹಲವಡೆ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಈಗ ಭಾರೀ ಮಳೆ ಆಗಿದೆ. ಸಿಲಿಕಾನ್ ಸಿಟಿಯ ಹಲವೆಡೆ ಭಾರೀ ಮಳೆ ಆಗುತ್ತಿದ್ದು, ವಿಜಯನಗರ, ಮಾಗಡಿರೋಡ್, ವೆಸ್ಟ್ ಆಫ್ ಕಾರ್ಡ್ ರೋಡ್, ರಾಜಾಜಿನಗರ ಸೇರಿದಂತೆ ಮಳೆಯ ಸಿಂಚನ ಆರಂಭಗೊಂಡಿದೆ.
ಮಳೆ ಕುರಿತು ಮಾಹಿತಿ ನೀಡಿದ ಹವಾಮಾನ ತಜ್ಞ ಗವಾಸ್ಕರ್, ಬೆಂಗಳೂರಿನಲ್ಲಿ ಪೂರ್ವ ಮುಂಗಾರು ಮಳೆಯಾಗುತ್ತಿದ್ದು, ದಕ್ಷಿಣ ಭಾರತದ ಕರ್ನಾಟಕದಲ್ಲಿ ಟ್ರಫ್ (ಮೋಡಗಳ ಸಾಲು) ಪ್ರಭಾವದಿಂದ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆಗಲಿದೆ ಎಂದು ತಿಳಿಸಿದ್ದಾರೆ.