Monday, January 20, 2025
ಪುತ್ತೂರು

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ ಶ್ರೀ ಕುಮಾರ್ ಶೇಣಿ ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ ಕುಮಾರ್ ಶೇಣಿ ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ, ಒಬ್ಬ ಉಪನ್ಯಾಸಕ ತಾನು ಸದಾ ವೃತ್ತಿನಿಷ್ಠೆ ಪಾಲಿಸಬೇಕು ಹಾಗೂ ತನ್ನ ಉಪನ್ಯಾಸದ ಗುಣಮಟ್ಟವನ್ನು ಇದರೊಂದಿಗೆ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಮುಂದಕ್ಕೆ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ವಿಜಯನಾರಾಯಣ ಕೆ ಎಮ್ ಇವರು ಮಾತನಾಡುತ್ತಾ ಒಬ್ಬ ಉಪನ್ಯಾಸಕನು ಉಪನ್ಯಾಸ ವೃತ್ತಿಯೊಂದಿಗೆ ಸೇವಾ ಪ್ರವೃತ್ತ ಮನೋಭಾವವನ್ನು ಒಗ್ಗೂಡಿಸುವುದರೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು ಎಂದು ಹಾರೈಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ ಪಿ ಮಾತನಾಡಿ ಶ್ರೀ ಕುಮಾರ್ ಶೇಣಿಯವರ ವೈಯಕ್ತಿಕ ಹಾಗೂ ಶೈಕ್ಷಣಿಕ ಹಾದಿಯಲ್ಲಿ ಇನ್ನೂ ಪ್ರಗತಿ ಕಾಣಲಿ ಎಂದು ಹಾರೈಸಿದರು. ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಶ್ರೀ ಕುಮಾರ್ ಶೇಣಿ ಇವರು ಮಾತನಾಡಿ ತನ್ನ ಸಾಧನೆ ಮತ್ತು ಏಳಿಗೆ, ಏನೇ ಇದ್ದರೂ ಅದರಲ್ಲಿ ಕೇವಲ ತಾನು ಮಾತ್ರವಲ್ಲದೆ ಸಂಸ್ಥೆ ಮತ್ತು ಅಲ್ಲಿರುವವರ ಪ್ರತಿಯೊಬ್ಬರ ಪಾಲೂ ಇದೆ ಎಂದು ಹೇಳೀದರು. ಕಾಲೇಜಿನ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ. ಕೆ. ರವೀಂದ್ರ ಇವರು ಶ್ರೀ ಕುಮಾರ್ ಶೇಣಿ ಇವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಉಪನ್ಯಾಸಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು