Monday, January 20, 2025
ಹೆಚ್ಚಿನ ಸುದ್ದಿ

ಕೊಡಿಯಾಲಬೈಲು ಸ್ಮಶಾನಕ್ಕೆ ಬೀಗ ಹಾಕಿರುವ ಕುರಿತು ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಖಂಡನೆ- ತಹಶೀಲ್ದಾರರವರಿಗೆ ಮನವಿ-ಕಹಳೆ ನ್ಯೂಸ್

ಉಬರಡ್ಕ ಮಿತ್ತೂರು ಪಂಚಾಯತ್ ವ್ಯಾಪ್ತಿಯ ಕೊಡಿಯಾಲಬೈಲಿನಲ್ಲಿರುವ ಸಾರ್ವಜನಿಕ ಮುಕ್ತಿಧಾಮ ಹಿಂದೂ ರುದ್ರ ಭೂಮಿಯ ಗೇಟಿಗೆ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಸೇರಿ ಬೀಗ ಹಾಕಿರುವುದನ್ನು ಖಂಡಿಸಿ ಸುಳ್ಯ ಪ್ರಖಂಡ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಂಘಟನೆಯವರು ಸುಳ್ಯ ತಾಲೂಕು ತಹಶೀಲ್ದಾರರವರಿಗೆ ಹಾಗೂ ಇ.ಒ ರವರಿಗೆ ಮನವಿ ಸಲ್ಲಿಸಿದರು.
ಕೊಡಿಯಾಲಬೈಲಿನಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಸಾರ್ವಜನಿಕರಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಶವಸಂಸ್ಕಾರ ನಡೆಸಲು ಪಂಚಾಯತ್ ಅವಕಾಶ ನೀಡಲಾಗಿದ್ದು ವಿನಾಕಾರಣ ಕಾಂಗ್ರೆಸ್ ನವರು ರಾಜಕೀಯ ಮಾಡಿ ಗೊಂದಲ ಉಂಟು ಮಾಡುತ್ತಿದ್ದಾರೆ. ಈ ಹಿಂದೆ ಕೊರೋನಾದಿಂದ ಮೃತಪಟ್ಟ ಸುಮಾರು 26 ಕ್ಕೂ ಹೆಚ್ಚು ಅಂತ್ಯ ಸಂಸ್ಕಾರವನ್ನು ಸಂಘಟನೆಯ ಕಾರ್ಯಕರ್ತರು ಸೇರಿಕೊಂಡು ಮಾಡಿದ್ದೇವೆ. ಇದೀಗ ಇದ್ದಕ್ಕಿದ್ದಂತೆ ಗೊಂದಲ ಉಂಟುಮಾಡಿ ಬೀಗ ಹಾಕಿರುವುದು ಸರಿಯಲ್ಲ. ತಕ್ಷಣ ಬೀಗ ತೆಗೆದು ಸಾರ್ವಜನಿಕರ ಸದುಪಯೋಗಕ್ಕೆ ಸಿಗುವಂತೆ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇಂತಹವರ ವಿರುದ್ಧ ಪ್ರತಿಭಟನೆಯ ಮೂಲಕ ಹೋರಾಟ ಮಾಡಲಿದ್ದೇವೆ. ಸದ್ರಿ ಜಾಗಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿ ಉಂಟಾಗಿರುವ ಗೊಂದಲದ ವಿವಾದವನ್ನು ಪರಿಹರಿಸುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಂಘಟನೆಯ ಅಧ್ಯಕ್ಷ ಸೋಮಶೇಖರ ಪೈಕ, ಬಜರಂಗದಳ ಜಿಲ್ಲಾ ಸ. ಸಂಯೋಜಕ ಲತೀಶ್ ಗುಂಡ್ಯ, ಸಂಚಾಲಕ ಸಂದೀಪ್ ವಳಲಂಬೆ, ಕಾರ್ಯಕರ್ತರಾದ ನವೀನ್ ಎಲಿಮಲೆ, ಸನತ್, ನವೀನ್, ವರ್ಷಿತ್ ಚೊಕ್ಕಾಡಿ, ಸಾಜನ್ ಕಾಯರ್ತೋಡಿ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು