Friday, November 22, 2024
ಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದಿನಿಂದ ‘ ಸರ್ಪ ಸಂಸ್ಕಾರ’ ಸೇವೆ ಆರಂಭ- ಕಹಳೆ ನ್ಯೂಸ್

ಸುಬ್ರಹ್ಮಣ್ಯ: : ಕೊರೋನಾ ಸೋಂಕಿನ ನಿಯಂತ್ರಣ ಕ್ರಮವಾಗಿ, ರಾಜ್ಯ ಸರ್ಕಾರ ದೇವಾಲಯಗಳಿಗೆ ಭಕ್ತರ ಭೇಟಿಗೆ ನಿಬರ್ಂಧ ಹೇರಲಾಗಿತ್ತು. ಈಗ ಕೊರೋನಾ ಪಾಸಿಟಿವಿಟಿ ದರ ಕಡಿಮೆಗೊಂಡ ಹಿನ್ನಲೆಯಲ್ಲಿ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ಅನ್ ಲಾಕ್ ಮಾಡಲಾಗಿದ್ದು, ಅನೇಕ ಕೊರೋನಾ ಮಾರ್ಗಸೂಚಿಯ ಪಾಲಿಸುವುದರ ಮೂಲಕ ಭಕ್ತರ ಪ್ರವೇಶಕ್ಕೆ ಅನುಮತಿಸಿದೆ. ಹಾಗೂ ಈವರೆಗೆ ಪ್ರವೇಶಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು. ಇಂದಿನಿಂದ ಸರ್ಪ ಸಂಸ್ಕಾರ ಸೇವೆಯನ್ನು ಆರಂಭಿಸಲಾಗುತ್ತಿದೆ ಎಂದು ದೇವಾಲಯ ಆಡಳಿತ ಮಂಡಳಿ ಮಾಹಿತಿ ನೀಡಿದೆ, ರಾಜ್ಯದ ಸುಪ್ರಸಿದ್ಧ ದೇವಾಲಯಗಳಲ್ಲಿ ಒಂದಾದಂತ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಪ್ರತಿದಿನ ಎರಡು ಹಂತದಲ್ಲಿ 180 ಸರ್ಪ ಸಂಸ್ಕಾರ ಸೇವೆ ನಡೆಯಲಿದ್ದು, ಬೆಳಿಗ್ಗೆ 8 ಗಂಟೆಯಿಂದ ಸರ್ಪ ಸಂಸ್ಕಾರ ಸೇವೆ ಹಾಗೂ ರಾತ್ರಿ 10 ಗಂಟೆಗೆ 2 ನೇ ಹಂತದ ಸೇವೆ ನಡೆಯಲಿದೆ. ಇದಷ್ಟೇ ಅಲ್ಲದೇ ಆಶ್ಲೇಷಾ, ನಾಗ ಪ್ರತಿಷ್ಠೆ  ಕಾರ್ಯಕ್ರಮಗಳು ಕೂಡ ಆರಂಭಗೊಳ್ಳಲಿದ್ದು, ಭಕ್ತರು ಕೊರೋನಾ ನಿಯಂತ್ರಣ ಮುಂಜಾಗ್ರತಾ ಕ್ರಮದೊಂದಿಗೆ ಸೇವೆ ನೆರವೇರಿಸುವಂತೆ ಮನವಿ ಮಾಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು