ಮೂಡುಬಿದಿರೆ: ಜುಲೈ 26ರಂದು ಮೂಡುಬಿದಿರೆ ಟೆಂಪಲ್ ಟೌನ್ ರೋಟರಿ ಕ್ಲಬ್‍ನ ನೂತನ ಅಧ್ಯಕ್ಷ ರಮೇಶ್ ಕುಮಾರ್ ಮತ್ತು ಪದಾಧಿಕಾರಿಗಳಿಗೆ ಪದಗ್ರಹಣ ನೇರವೇರಿಸಿ ಮಾತನಾಡಿದ ರೋಟರಿ ಜಿಲ್ಲೆ ಮಾಜಿ ರಾಜ್ಯಪಾಲ ಅಭಿನಂದನ್ ಶೆಟ್ಟಿ ‘ಕೋವಿಡ್ ನಮಗೆ ಹಲವು ಪಾಠ ಕಲಿಸಿದೆ. ‘ಸೇವೆ ಹಾಗೂ ಸಂತೋಷದ ಬದುಕು ನೀಡುವುದೇ ರೋಟರಿಯ ಉದ್ದೇಶ. ರೋಟರಿಯಲ್ಲಿದ್ದು ನಾವೆಷ್ಟು ಸಂತೋಷದಿಂದಿದ್ದೇವೆ ಎನ್ನುವುದಕ್ಕಿಂತ ನಮ್ಮ ಸೇವೆಯಿಂದ ಜನ ಎಷ್ಟು ಸಂತೃಪ್ತರಾಗಿದ್ದಾರೆ ಎನ್ನುವುದು ಮುಖ್ಯ’ ಮನುಕುಲದ ಒಳಿತಿಗೆ ಕಳೆದ ವರ್ಷ ರೋಟರಿ ಅಂತರರಾಷ್ಟ್ರೀಯ ಸಂಸ್ಥೆ 25 ಸಾವಿರ ಡಾಲರ್ ನೆರವು ನೀಡಿದೆ’ ಎಂದರು. ಜಿಲ್ಲಾ ಉಪ ರಾಜ್ಯಪಾಲ ಸುರೇಂದ್ರ ಕಿಣಿ ಮಾತನಾಡಿ, ಸಂಘಟನೆ ಮತ್ತು ಸೇವೆಯಿಂದ ರೋಟರಿ ಸಂಸ್ಥೆ ಸಮಾಜಕ್ಕೆ ಆದರ್ಶವಾಗಿದೆ ಎಂದರು. ವಲಯ ಸಭಾಪತಿ ಡಾ.ಮಹಾವೀರ ಜೈನ್, ಜಿಎಸ್‍ಆರ್ ಡಾ.ಹರೀಶ್ ನಾಯಕ್ ಶುಭ ಹಾರೈಸಿದರು. ಹಾಗೂ ನಿರ್ಗಮಿತ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ, ಕಾರ್ಯದರ್ಶಿ ಪೂರ್ಣಚಂದ್ರ ಜೈನ್ ಅವರನ್ನು ಕ್ಲಬ್ ಪರವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕೊರೊನಾ ಸೇನಾನಿಗಳಾದ ವೇಣೂರಿನ ಕುಸುಮಾವತಿ ಹಾಗೂ ಮೂಡುಬಿದಿರೆಯ ಸುಶೀಲಾ ಅವರನ್ನು ಗೌರವಿಸಲಾಯಿತು. ಸೇವಾ ಚಟುವಟಿಕೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹಧನ, ಅಶಕ್ತರಿಗೆ ನೆರವು ಹಾಗೂ ಶಾಲೆಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಡಾ.ಅಮರ್‍ದೀಪ್ ಮತ್ತು ಶಾಂತಲಾ ಸೀತಾರಾಮ ಆಚಾರ್ಯ ನಿರೂಪಿಸಿ, ಕಾರ್ಯದರ್ಶಿ ಮಂಜುನಾಥ ಪೂಜಾರಿ ವಂದಿಸಿದರು.
You Might Also Like
ಮಣಿಪಾಲ ಜ್ಞಾನಸುಧಾದ ಇಬ್ಬರು ವಿದ್ಯಾರ್ಥಿಗಳು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ-ಕಹಳೆ ನ್ಯೂಸ್
ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನವೆಂಬರ್ 21ರಂದು ನಡೆದ 2024-25ನೇ ಸಾಲಿನ ಪದವಿ ಪೂರ್ವ ವಿದ್ಯಾರ್ಥಿಗಳ ಉಡುಪಿ ಜಿಲ್ಲಾ ಮಟ್ಟದ...
ಶ್ರೀಮತಿ ರಶ್ಮಿತಾ ಜೈನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ-ಕಹಳೆ ನ್ಯೂಸ್
ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕರ್ಯದರ್ಶಿಗಳಾದ ಶ್ರೀಮತಿ ರಶ್ಮಿತಾ ಜೈನ್ ಅವರಿಗೆ 2024 ನೆಯ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಾಪ್ತವಾಗಿದೆ. ಸಾಮಾಜಿಕ, ಸಾಂಸ್ಕೃತಿಕ, ಪರಿಸರ ಹಾಗೂ ಮುಖ್ಯವಾಗಿ...
ಮಣಿಪಾಲ ಜ್ಞಾನಸುಧಾದಲ್ಲಿ ವಿದ್ಯಾದೇವತೆ ಶಾರದಾ ಪೂಜೆಯ ಸಂಭ್ರಮ-ಕಹಳೆ ನ್ಯೂಸ್
ಮಣಿಪಾಲ : ನಾಡಿನೆಲ್ಲೆಡೆ ವಿಜಯ ದಶಮಿಯ ಸಂಭ್ರಮ ಕಳೆಗಟ್ಟಿರುವ ಸಂದರ್ಭದಲ್ಲಿ, ಅಕ್ಟೋಬರ್ 12ರಂದು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದಲ್ಲಿ ಶಾರದ ಪೂಜೆಯನ್ನು ಅರ್ಥಪೂರ್ಣವಾಗಿ...
ಮೂಲ್ಕಿ-ಮೂಡುಬಿದಿರೆ ನಡುವೆ ಸಂಚರಿಸುವ ಖಾಸಗಿ ಬಸ್ಸಿಗೆ “ಇಸ್ರೇಲ್’ ಹೆಸರು ; ಆಕ್ಷೇಪದ ಬಳಿಕ “ಜೆರುಸಲೇಂ”! – ಕಹಳೆ ನ್ಯೂಸ್
ಮಂಗಳೂರು: ಮೂಲ್ಕಿ-ಮೂಡುಬಿದಿರೆ ನಡುವೆ ಸಂಚರಿಸುವ ಖಾಸಗಿ ಬಸ್ಸೊಂದಕ್ಕೆ “ಇಸ್ರೇಲ್ ಟ್ರಾವೆಲ್ಸ್’ ಎಂದು ಹೆಸರಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಹೆಸರನ್ನೇ ಬದಲಾಯಿಸಲಾಗಿದೆ. ಇಸ್ರೇಲ್ನಲ್ಲಿ ಸುಮಾರು 12 ವರ್ಷಗಳಿಂದ...