Recent Posts

Sunday, January 19, 2025
ಪುತ್ತೂರು

ಅಕ್ರಮ ಬಾಂಗ್ಲಾದೇಶಿ ಒಳನುಸುಳುಕೋರರು ಹಾಗೂ ರೋಹಿಂಗ್ಯಾ ಮುಸಲ್ಮಾನರನ್ನು ರಾಜ್ಯ ಹಾಗೂ ದೇಶದಿಂದ ಹೊರಕಾಕಲು ಅಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಪ್ರಖಂಡ ವತಿಯಿಂದ ಮನವಿ- ಕಹಳೆ ನ್ಯೂಸ್

ಅಕ್ರಮವಾಗಿ ಭಾರತ ದೇಶದ ಒಳಗೆ ನುಸುಳಿ ಬಂದು ಅನೇಕ ರೀತಿಯ ವಿಧ್ವಂಸಕ ಕೃತ್ಯವನ್ನು ಮತ್ತು ಅತ್ಯಾಚಾರ,ಕಳ್ಳತನ,ಕೊಲೆ ದಂಗೆಗಳು ಮಾಡಿ ಇಡೀ ಸಮಾಜವನ್ನು ಭಯಭೀತಿ ಗೊಳಿಸುವ ಕಾರ್ಯದಲ್ಲಿ ತೊಡಗಿರುವ ಅಕ್ರಮ ಬಾಂಗ್ಲಾದೇಶಿ ಮುಸಲ್ಮಾನರು ಹಾಗೂ ರೋಹಿಂಗ್ಯ ಮುಸಲ್ಮಾನರನ್ನು ತಕ್ಷಣ ಭಾರತ ದೇಶದಿಂದ ಅವರನ್ನು ಬಾಂಗ್ಲಾಕ್ಕೆ ಗಡಿಪಾರು ಮಾಡಬೇಕೆಂಬ ಮಾನ್ಯ ಸರ್ವೋಚ್ಚ ನ್ಯಾಯಾಲಯ ಮಾಡಿರುವ ಆದೇಶವನ್ನು ಜಾರಿ ಮಾಡಬೇಕು

ರೋಹಿಂಗ್ಯಾ ಮುಸಲ್ಮಾನರು ಮತ್ತು ಅಕ್ರಮ ಬಾಂಗ್ಲಾದೇಶಿ ಮುಸಲ್ಮಾನರುಗಳು ಇಡೀ ದೇಶದ ಮೂಲೆಮೂಲೆಗಳಲ್ಲಿ ಕಾರ್ಮಿಕರ ಸೋಗಿನಲ್ಲಿ
ಒಳ ಹೊಕ್ಕಿ ದುಷ್ಕೃತ್ಯ ನಡೆಸಲು ಎಲ್ಲ ಸಿದ್ಧತೆ ನಡೆಸುತ್ತಿದ್ದಾರೆ. ಭಯೋತ್ಪಾದನಾ ಚಟುವಟಿಕೆಗಳು ಮತ್ತು ಕೋಮುಗಲಭೆ ಮಾಡಲು ಸಜ್ಜಾಗಿದ್ದಾರೆ
ಇವರು ಮುಂದಿನ ದಿನಗಳಲ್ಲಿ ಇಡೀ ಭಾರತ ದೇಶದಲ್ಲಿ ಜನಸಂಖ್ಯಾ ಸ್ಪೊಟ ಮತ್ತು ಭಯೋತ್ಪಾದನಾ ಚಟುವಟಿಕೆಗಳನ್ನು ಮಾಡುವಂತಹ ಕಾರ್ಯದಲ್ಲಿ ವ್ಯವಸ್ಥಿತವಾದ ಷಡ್ಯಂತ್ರ ಮಾಡುತ್ತಿದ್ದು
•ಇವರು ಭಾರತ ಮತ್ತು ಬಾಂಗ್ಲಾದೇಶದ ಪಾಸ್ ಪೋರ್ಟ್ ಹೊಂದಿರುವುದರಿಂದ ವಿದೇಶದಲ್ಲಿ ಯಾವುದೇ ರೀತಿಯಾದಂತಹ ದುಷ್ಕೃತ್ಯಗಳು ನಡೆಸಿದಾಗ ಅವರು ಭಾರತದ ಪ್ರಜೆ ಎಂದು ತೋರಿಸುವಂತಹ ಸಾಧ್ಯತೆಗಳು ಹೆಚ್ಚಿವೆ.
•ಇವರ ಜನಸಂಖ್ಯೆ ಅಸಮತೋಲನದಿಂದ ರಾಜ್ಯ ಮತ್ತು ದೇಶದ ಬಜೆಟ್ ಮೇಲೆ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮ ಬೀಳುವುದು
•ಸರ್ಕಾರ ಮಾಡುವ ಜನಗಣತಿಯಲ್ಲಿ ಇವರ ಹೆಸರುಗಳನ್ನು ನೊಂದಾಯಿಸದೆ ಸರ್ಕಾರಕ್ಕೆ ಮತ್ತು ಇಲಾಖೆಗೆ ವಂಚಿಸುತ್ತಾರೆ.
•ಇವರು ಅಕ್ರಮವಾಗಿ ದೇಶದ ಒಳಗಡೆ ನುಸುಳಿ ಇಲ್ಲಿಯ ದಾಖಲೆಗಳನ್ನು ಅಂದರೆ ರೇಷನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸನ್ಸ್ ಇತ್ಯಾದಿ ದಾಖಲೆಗಳನ್ನು ಅಕ್ರಮವಾಗಿ ಹಣ ಕೊಟ್ಟು ತಮ್ಮದೇ ಆದಂತಹ ಏಜೆಂಟರಿಂದ ಮಾಡಿಸಿಕೊಳ್ಳುವುದರಿಂದ ಸಮಾಜಕ್ಕೆ ದೊಡ್ಡ ಕಂಟಕವಾಗುತ್ತದೆ ಹಾಗಾಗಿ ಇವರ ಬಳಿ ಇರುವ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಿ ಅವರು ಅಕ್ರಮ ಬಾಂಗ್ಲಾದೇಶಿ ಎಂದು ಪತ್ತೆ ಆಗುತ್ತಲೇ ಅವರನ್ನ ಬಂಧಿಸಿ ಅವರ ಮೇಲೆ ಅಕ್ರಮ ನುಸುಳುವಿಕೆ ಕೇಸ್ ನಕಲಿ ದಾಖಲೆ ಸೃಷ್ಟಿಸಿರುವ ವಿರುದ್ಧ ಕೇಸ್ ಹಾಗೂ ದೇಶದ್ರೊಹದ ಕೇಸ್ ದಾಖಲಿಸಬೇಕು ಮತ್ತು ತಕ್ಷಣ ಅವರನ್ನ ಸೂಕ್ತ ವೆವಸ್ಥೆ ಮತ್ತು ಭದ್ರತೆಯೊಂದಿಗೆ ಭಾರತ ಗಡಿಯಿಂದ ಬಾಂಗ್ಲಾದೇಶಕ್ಕೆ ಕಳುಹಿಸುವ ವೆವಸ್ಥೆ ಮಾಡಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಪ್ರಖಂಡ ವತಿಯಿಂದ ಪುತ್ತೂರು ಪುತ್ತೂರು ಸಹಾಯಕ ಕಮೀಷನರ್ ಕಚೇರಿಯ ಮೂಲಕ ಮಾನ್ಯ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲಾ ನ್ಯಾಯವಾದಿ ಪ್ರಮುಖ್ ಮಾಧವ ಪೂಜಾರಿ, ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಸಹ ಕಾರ್ಯದರ್ಶಿ ವಿಶಾಕ್ ಸಸಿಹಿತ್ಲು, ಬಜರಂಗದಳ ಪುತ್ತೂರು ಪ್ರಖಂಡ ಸಂಚಾಲಕ್ ಹರೀಶ್ ಕುಮಾರ್ ದೊಳ್ಪಾಡಿ,ಬಜರಂಗದಳ ಸಹ ಸಂಚಾಲಕ್ ಜಯಂತ ಕಂಜೂರುಪಂಜ,ಬಜರಂಗದಳ ಪುತ್ತೂರು ಪ್ರಖಂಡ ಸುರಕ್ಷಾ ಪ್ರಮುಖ್ ಮಿಥುನ್ ತೆಂಕಿಲ,ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಪ್ರಚಾರ ಪ್ರಸಾರ ಪ್ರಮುಖ್ ಭರತ್ ಬಲ್ನಾಡ್,ಬಜರಂಗದಳ ನಗರ ಸಂಚಾಲಕ್ ಚೇತನ್ ಬೊಳ್ವಾರ್, ಬಜರಂಗದಳ ನಗರ ಅಖಾಡ ಪ್ರಮುಖ್ ಹರ್ಷಿತ್ ಬಲ್ನಾಡ್ ಹಾಗೂ ಕಾರ್ಯಕರ್ತರಾದ ಅವಿನಾಶ್ ಬೊಳ್ವಾರ್ ಉಪಸ್ಥಿತರಿದ್ದರು

ಜಾಹೀರಾತು

ಜಾಹೀರಾತು
ಜಾಹೀರಾತು