Sunday, November 24, 2024
ಬಂಟ್ವಾಳ

ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕಾರ್ತಿಕ್ ಪೂಜಾರಿ ಅನುಮಾನಸ್ಪದ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಹಿಂದು ಜಾಗರಣ ವೇದಿಕೆ ಬಂಟ್ವಾಳ ಮನವಿ

ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಬಿನ್ ಲಕ್ಷ್ಮಣ ಪೂಜಾರಿಯವರ ಪುತ್ರ ಕಾರ್ತಿಕ್ ಪೂಜಾರಿ(25) ರೈಲಿನ ಹಳಿಯ ಮೇಲೆ ಅನುಮಾನಸ್ಪದ ರೀತಿಯಲ್ಲಿ ಮೃತ ಪಟ್ಟಿದ್ದು, ಈ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಬಂಟ್ವಾಳ ಉಪವಿಭಾಗ DYSP ಯವರಿಗೆ ಹಿಂದು ಜಾಗರಣ ವೇದಿಕೆ ಬಂಟ್ವಾಳ ವತಿಯಿಂದ ಮನವಿ ಸಲ್ಲಿಸಲಾಯಿತು. 

ಜಾಹೀರಾತು
ಜಾಹೀರಾತು
ಜಾಹೀರಾತು

ತಾ/26/07/2021 ರಂದು ಕಾರ್ತಿಕ್ ಪೂಜಾರಿಯವರ ಮೇಲೆ ದೆಮುಂಡೆ ಎಂಬಲ್ಲಿ ಶರೀಫ್ ಟಿ ಕೆ ,ಸೊಹೇಲ್ ,ನಾಸಿರ್ ,ಎಂಬವರಿಂದ ಹಲ್ಲೆ ನಡೆದಿತ್ತು ,ಈ ಮೂರು ಜನರ ಹೆಸರನ್ನು ಕಾರ್ತಿಕ್ ಪೂಜಾರಿಯವರು ದೂರಿನಲ್ಲಿ ಕೊಟ್ಟಿದ್ದರು ,ಸದ್ರಿ ಪ್ರಕರಣವು ಕ್ರ ಸಂಖ್ಯೆ 85/2021ಎಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು ಸದ್ರಿ ಪ್ರಕರಣದಲ್ಲಿ ಸೊಹೇಲ್ ಎಂಬವನು ಹಲ್ಲೆ ನಡೆಸಿದ್ದು ಆದರೆ ಎಫ್ ಐ ಆರ್ ನಲ್ಲಿ ಸೊಹೇಲ್ ಹೆಸರು ಕೈ ಬಿಡಲಾಗಿದೆ ,ಇದರ ಬೆನ್ನಿಗೆ ಕಾರ್ತಿಕ್ ಪೂಜಾರಿಯವರ ಅನುಮಾನಾಸ್ಪದ ವಾಗಿ ಮೃತಪಟ್ಟಿದ್ದು ಅನುಮಾನಕ್ಕೆ ಕಾರಣವಾಗಿದೆ ಆದ್ದರಿಂದ ಇದರ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಹಿಂದು ಜಾಗರಣ ವೇದಿಕೆ ವತಿಯಿಂದ ಮನವಿ ನೀಡಲಾಯಿತು ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ಜಿಲ್ಲಾ ನ್ಯಾಯ ಜಾಗರಣ ಪ್ರಮುಕ್ ರಾಜೇಶ್ ಬೊಳ್ಳುಕಲ್ಲು, ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕ್ ಅಧ್ಯಕ್ಷರು ತಿರುಲೇಶ್ ಬೆಳ್ಳೋರು, ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಕಾರ್ಯದರ್ಶಿ ಹರೀಶ್ ತಲೆಂಬಿಲ, ಹಿಂದು ಜಾಗರಣ ವೇದಿಕೆ ಬಂಟ್ವಾಳ ಹಿಂದು ಯುವ ವಾಹಿನಿ ಸಂಯೋಜಕ್ ತಿಲಕ್ ಅಮ್ಮ್ಮಡಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು