ಉಡುಪಿ : ವಿದ್ಯಾರ್ಥಿಗಳು ಕೃಷಿ ಕಾರ್ಯದಲ್ಲಿ ಮುಂಚೂಣಿಯಲ್ಲಿರಬೇಕೆಂಬ ಆಶಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಉಡುಪಿ ನಗರ ಕಾರ್ಯಕರ್ತರು ಕೇದಾರೋತ್ತಾನ ಟ್ರಸ್ಟ್ ನ ಹಡಿಲು ಭೂಮಿ ಕೃಷಿ ಆಂದೋಲನದಡಿ ಕನ್ನರಪಾಡಿಯ ಕೃಷಿನಾಟಿ ಮಾಡಿದ ಗದ್ದೆಯಲ್ಲಿ ಕಳೆ ಕೀಳುವ ಮೂಲಕ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರು.
ಈ ಸಂದರ್ಭದಲ್ಲಿ ಕೇದಾರೋತ್ತಾನ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿಗಳಾದ ಮುರಳೀ ಕಡೆಕ್ಕಾರ್, ರಿಕೇಶ್ ಕಡೆಕ್ಕಾರ್, ವಿಜಯ್ ಕಡೆಕ್ಕಾರ್ ಎಬಿವಿಪಿ ಹಿರಿಯ ಕಾರ್ಯಕರ್ತರಾದ ಡಾ.ಶಿವಾನಂದ ನಾಯಕ್,ಜಿಲ್ಲಾ ಸಹಸಂಚಾಲಕ್ ಆಶಿಶ್ ಶೆಟ್ಟಿ, ನಗರಾಧ್ಯಕ್ಷರಾದ ಡಾ.ಸೋಮಶೇಖರ್ ಶೆಟ್ಟಿ, ನಗರ ಕಾರ್ಯದರ್ಶಿ ಸುಮುಖ ಭಟ್, ನಗರ ವಿದ್ಯಾರ್ಥಿನಿ ಪ್ರಮುಖ್ ಅಶ್ವಿನಿ ಕುಲಾಲ್, ಪ್ರಮುಖ ಕಾರ್ಯಕರ್ತರಾದ ಅನಿಲ್, ಅಜಿತ್, ವಿಕಾಸ್, ಪ್ರಸನ್ನ, ಗಣಪತಿ, ವಿನೀತ್, ಶ್ರೀಕಂಠ, ಅಜೇಯ್, ರಾಕೇಶ್, ನಿರಂಜನ್, ಚಿನ್ಮಯ್, ದಿವಿತ್ ಮುಂತಾದ ವಿದ್ಯಾರ್ಥಿ ಕಾರ್ಯಕರ್ತರು ಜೊತೆಗೂಡಿದರು.