Recent Posts

Sunday, January 19, 2025
ಕ್ರೀಡೆ

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ಡಿಸ್ಕಸ್ ಥ್ರೋ ವಿಭಾಗದಲ್ಲಿ ಅಂತಿಮ ಸುತ್ತಿಗೆ ಭಾರತದ ಕಮಲ್‍ಪ್ರೀತ್ ಕೌರ್ – ಕಹಳೆ ನ್ಯೂಸ್

ಟೋಕಿಯೊ: ಜಪಾನ್‍ನಲ್ಲಿ ಸಾಗುತ್ತಿರುವ ಟೋಕಿಯೊ ಒಲಿಂಪಿಕ್ಸ್ ನ ಮಹಿಳಾ ಡಿಸ್ಕಸ್ ಥ್ರೊ ಅರ್ಹತಾ ಸುತ್ತಿನಲ್ಲಿ ಭಾರತದ ಮಹಿಳೆಯರ ಡಿಸ್ಕಸ್ ಥ್ರೋ ಆಟಗಾರ್ತಿ ಕಮಲ್ ಪ್ರೀತ್ ಕೌರ್ ಅವರು ಅಂತಿಮ ಸುತ್ತು ಪ್ರವೇಶಿಸಿದ್ದಾರೆ. 64.00 ಮೀಟರ್ ದೂರದವರೆಗೆ ಡಿಸ್ಕಸ್ ಥ್ರೋ ಹಾರಿಸುವ ಮೂಲಕ ಅಂತಿಮ ಸುತ್ತು ಪ್ರವೇಶಿಸಿದ ಕೌರ್ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದು ನೇರವಾಗಿ ಫೈನಲ್‍ಗೆ ಅರ್ಹತೆ ಗಿಟ್ಟಿಸಿದರು. ಕೇವಲ ಇಬ್ಬರು ಅಥ್ಲೀಟ್‍ಗಳಿಗೆ ಮಾತ್ರ ಪದಕ ಸುತ್ತಿಗೆ ನೇರ ಅರ್ಹತೆ ಲಭಿಸಿದ್ದು, ಕಮಲ್‍ಪ್ರೀತ್‍ಗಿಂತಲೂ ಉತ್ತಮ ಸಾಧನೆ ಮಾಡಿರುವ ಅಮೆರಿಕದ ವಲಾರಿ ಆಲ್‍ಮನ್ 66.42 ಮೀಟರ್ ದೂರ ಡಿಸ್ಕಸ್ ಎಸೆದು ಅಗ್ರಸ್ಥಾನಿಯಾಗಿ ಪದಕ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು