Recent Posts

Monday, January 20, 2025
ಸುದ್ದಿ

ನೀರುಮಾರ್ಗ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿಯ ಕಳವು ಪ್ರಕರಣ: ಪೊಲೀಸ್ ಆಯುಕ್ತರಿಗೆ ದೂರು-ಕಹಳೆ ನ್ಯೂಸ್

ಮಂಗಳೂರು: ನೀರುಮಾರ್ಗದ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿಯಲ್ಲಿ ನಡೆದ ಕಳವು ಪ್ರಕರಣ ಹಾಗೂ ಗರ್ಭ ಗುಡಿಯ ಪಾವಿತ್ರ್ಯತೆಗೆ ದಕ್ಕೆ ತಂದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಭಜನಾ ಮಂಡಳಿಯ ಸದಸ್ಯರು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ನೀರುಮಾರ್ಗದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿಯು 1976ರಲ್ಲಿ ಸ್ಥಾಪಿಸಲ್ಪಟ್ಟಿದ್ದು, ಊರ ಹಾಗೂ ಪರವೂರ ಭಕ್ತಾಧಿಗಳ ಧಾರ್ಮಿಕ ಪ್ರಜ್ಞೆ ಮತ್ತು ಸಹಕಾರದಿಂದ ಎತ್ತರಕ್ಕೆ ಬೆಳೆದು ನಿಂತಿದೆ. ಭಕ್ತಾಧಿಗಳ ಶೃದ್ಧಾ ಭಕ್ತಿಯ ಪರಿಣಾಮದಿಂದಾಗಿ ಊರಿನ ಆಸ್ಥಿಕ ಬಂಧುಗಳ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಭಕ್ತರ ಅಳಲುಗಳನ್ನು ತೋಡಿಕೊಳ್ಳುವ ಊರಿನ ಪ್ರಮುಖ ಶೃದ್ಧಾಕೇಂದ್ರವಾಗಿದೆ. ಆದ್ರೆ ಜುಲೈ 20 ರಂದು ನಡುರಾತ್ರಿ ಭಜನಾ ಮಂಡಳಿಯಲ್ಲಿ ಕಳವು ಪ್ರಕರಣ ನಡೆದಿದ್ದು, ಕಳ್ಳರು ಪಾದರಕ್ಷೆ ಧರಿಸಿ ಗರ್ಭಗುಡಿ ಪ್ರವೇಶಿಸಿ ಕಳ್ಳತನ ಎಸಗಿದ್ದು ಭಕ್ತಾಧಿಗಳ ಮನಸ್ಸಿಗೆ ನೋವನ್ನು ಉಂಟು ಮಾಡಿದೆ. ಹಾಗಾಗಿ ಈ ಕಳ್ಳತನ ಎಸಗಿದ ಕಳ್ಳರನ್ನು ಬಂಧನಕ್ಕೆ ಊರ ಪರವೂರ ಭಕ್ತರ ಒತ್ತಡವಿದ್ದು ಮುಂದಿನ ದಿನಗಳಲ್ಲಿ ಕಳ್ಳರು ಪತ್ತೆಯಾಗದೆ ಹೋದಲ್ಲಿ ಬೃಹತ್ ಪ್ರತಿಭಟನೆ ಮಾಡುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು