Recent Posts

Monday, January 20, 2025
ಸುದ್ದಿ

ಉಪ್ಪಿನಂಗಡಿ ವಲಯದಲ್ಲಿ ಅಕ್ರಮ ಆಕೇಶಿಯ ಕಂಬಗಳ ಸಾಗಾಟ: ಇಬ್ಬರು ಆರೋಪಿಗಳ ಬಂಧನ: ಪ್ರಕರಣ ದಾಖಲು-ಕಹಳೆ ನ್ಯೂಸ್

ಉಪ್ಪಿನಂಗಡಿ: ಅಕ್ರಮವಾಗಿ ಆಕೇಶಿಯ ಕಂಬಗಳನ್ನು ಸಾಗಾಟ ಮಾಡುತ್ತಿದ್ದ ಪಿಕ್‌ಅಪ್ ವಾಹನವನ್ನು ತಣ್ಣೀರುಪಂತ ಗ್ರಾಮದ ಕಲ್ಲೇರಿ ಸಮೀಪದಲ್ಲಿ ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ, ಇಬ್ಬರು ಆರೋಪಿಗಳನ್ನು ಬಂದಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳಾದ ವಾಹನ ಚಾಲಕ ಅಶ್ರಫ್ ಬಿನ್ ಅಬೂನು ಬ್ಯಾರಿ ಹಾಗೂ ಜಗದೀಶ್ ಬಿನ್ ಗಣೇಶ ನಾಯ್ಕ ಎನ್ನಲಾಗಿದೆ. ಇನ್ನೋರ್ವ ಆರೋಪಿ ಬಂಟ್ವಾಳ ತಾಲೂಕಿನ ಬದಿನಾರು ಗ್ರಾಮದ ಚಂದ್ರ ನಾಯ್ಕ ಬಿನ್ ವೀರಪ್ಪ ನಾಯ್ಕ ತಲೆಮರೆಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತು ಹಾಗೂ ಪಿಕ್‌ಅಪ್ ವಾಹನದ ಒಟ್ಟು ಮೌಲ್ಯ ೪,೦೦ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ, ಡಾ: ದಿನೇಶ್ ಕುಮಾರ್‌ರವರ ಆದೇಶದಂತೆ ಮತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪ್ಪ ಇವರ ಮಾರ್ಗದರ್ಶನದಂತೆ, ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಮಧುಸೂದನ್.ಎ ತನಿಖೆ ನಡೆಸುತ್ತಿದ್ದಾರೆ. ಇನ್ನು ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ವಲಯದ ಉಪ ವಲಯ ಅರಣ್ಯ ಅಧಿಕಾರಿಗಳಾದ ಕೆ.ಆರ್.ಅಶೋಕ, ಅರಣ್ಯ ರಕ್ಷಕರಾದ ರಾಜೇಶ್, ಜಗದೀಶ.ಕೆ.ಎನ್, ಅರಣ್ಯ ವೀಕ್ಷಕ ರಸೂಲ್ ಸಾಬ್ ಸಕಾನದಗಿ ವಾಹನ ಚಾಲಕ ರವಿ ಪಾಲ್ಗೊಂಡಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು