Sunday, January 19, 2025
ಬೆಳ್ತಂಗಡಿ

ನಾಪತ್ತೆಯಾಗಿದ್ದ ರೆಖ್ಯ ಗ್ರಾಮದ ಮಹಿಳೆಯ ಮೃತ ದೇಹ ಪತ್ತೆ-ಕಹಳೆ ನ್ಯೂಸ್

ಬೆಳ್ತಂಗಡಿ: ತೋಟದಲ್ಲಿದ್ದ ನೆಲನೆಲ್ಲಿ ಗಿಡ ತೆಗೆದು ನದಿಯಲ್ಲಿ ತೊಳೆಯಲು ಹೋಗಿ ನದಿಗೆ ಜಾರಿ ಬಿದ್ದು ನಾಪತ್ತೆಯಾಗಿದ್ದ ಮಹಿಳೆಯ ಮೃತ ದೇಹ ಎಂಜಿರ ಎಂಬ ನದಿ ಬದಿಯಲ್ಲಿ ಪತ್ತೆ ಯಾಗಿದೆ. ರೆಖ್ಯ ಗ್ರಾಮದ ಉರ್ನಡ್ಕ ನಿವಾಸಿ ಯು. ಆರ್. ಸುಂದರ ಗೌಡ, ಎಂಬವರ ಪತ್ನಿ ಶಕುಂತಲಾ ಅವರು ಪಿತ್ತ ಖಾಯಿಲೆ ಇರುವ ಕಾರಣ ನಾಟಿ ಔಷಧಿಯಾಗಿ ನೆಲನೆಲ್ಲಿಯನ್ನು ಕಷಾಯವಾಗಿ ಸೇವಿಸಲು ತೋಟಕ್ಕೆ ಹೋದವರು ನಂತರ ನಾಪತ್ತೆಯಾಗಿದ್ದರು. ಬಳಿಕ ಮನೆಯ ಸುತ್ತಮುತ್ತ ತೋಟದ ಬಳಿ ಹುಡುಕಾಟ ನಡೆಸುವ ಸಂದರ್ಭದಲ್ಲಿ ತೋಟದ ಬಳಿ ಇರುವ ಹೊಳೆಯ ಬದಿ ಶಕುಂತಳಾ ಅವರ ಚಪ್ಪಲಿ ಪತ್ತೆಯಾಗಿದೆ. ಶಕುಂತಲ ನೆಲನೆಲ್ಲಿಯನ್ನು ತೆಗೆದ ಬಳಿಕ ಅದನ್ನು ತೊಳೆಯಲು ಹೊಳೆಗೆ ಹೋದವರು ಆಕಸ್ಮಿಕವಾಗಿ ಕಾಲುಜಾರಿ ನದಿ ನೀರಿಗೆ ಬಿದ್ದು ಕಾಣೆಯಾಗಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿ ಸುಂದರ ಗೌಡರು ಧರ್ಮಸ್ಮಳ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಪಿಲಿಕುಳದಿಂದ ಮುಳುಗುಗಾರರು ಹುಡುಕಾಟ ನಡೆಸಿದ್ದು, ಮೃತದೇಹ ಎಂಜಿರ ಸಮೀಪ ನದಿ ಬದಿಯಲ್ಲಿ ಪತ್ತೆಯಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು