Sunday, January 19, 2025
ಸಂತಾಪ

ಶ್ರೀ ದುರ್ಗಾಂಬಿಕಾ ಸಿದ್ಧೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ವಿಶ್ವನಾಥ ಸ್ವಾಮಿ ಸೋರ್ಣಾಡು ನಿಧನ – ಕಹಳೆ ನ್ಯೂಸ್

ಬಂಟ್ವಾಳ: ಸೋರ್ಣಾಡು ಶ್ರೀ ದುರ್ಗಾಂಬಿಕಾ ಸಿದ್ಧೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ವಿಶ್ವನಾಥ ಸ್ವಾಮಿ ಸೋರ್ಣಾಡು (90) ಇವರು ಹೃದಯಾಘಾತದಿಂದ ಸೋರ್ಣಾಡು ಆಶ್ರಮದಲ್ಲಿ ನಿಧನರಾದರು. ಏಕಾಂಗಿಯಾಗಿದ್ದ ಇವರು ಬಾಲ್ಯದಿಂದಲೇ ಧಾರ್ಮಿಕತೆ ಜತೆಗೆ ನಾಟಕ, ಯಕ್ಷಗಾನ ಕಲಾವಿದರಾಗಿ ವಿವಿಧ ಪಾತ್ರಗಳಿಗೆ ಜೀವ ತುಂಬಿದ್ದರು. ಕಳೆದ ಹಲವು ವರ್ಷಗಳಿಂದ ಸ್ವತಃ ಯಕ್ಷಗಾನ ಮೇಳ ಮುನ್ನಡೆಸುತ್ತಿದ್ದರು. ತುಳು ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್, ಜಾಗತಿಕ ಬಂಟ ಪ್ರತಿಷ್ಠಾನದಿಂದ ವಿಶೇಷ ಸನ್ಮಾನ ಮತ್ತು ಪ್ರಶಸ್ತಿಗೆ ಭಾಜನಾರಾಗಿದ್ದರು. ಮೃತರ ಅಂತ್ಯಕ್ರಿಯೆ ಸೋರ್ಣಾಡು ಆಶ್ರಮ ಬಳಿ ಭಾನುವಾರ ಮಧ್ಯಾಹ್ನ ನೆರವೇರಿತು. ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು