Sunday, January 19, 2025
ಬಂಟ್ವಾಳ

ಬಂಟ್ವಾಳ ತಾಲ್ಲೂಕಿನ ಅಣ್ಣಳಿಕೆಯಲ್ಲಿ ರೋಟರಿ ಕ್ಲಬ್ ವತಿಯಿಂದ ‘ಆಟಿದ ತಿಂಗೊಳ್ ಡ್ ಕೆಸರ್ಡೊಂಜಿ ದಿನ’ ಕಾರ್ಯಕ್ರಮ-ಕಹಳೆ ನ್ಯೂಸ್

ಬಂಟ್ವಾಳ: ಲೊರೆಟ್ಟೊ ಹಿಲ್ಸ್ ಮತ್ತು ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ವತಿಯಿಂದ ಅಣ್ಣಳಿಕೆ ಸಮೀಪದ ಹಾಂತ್ಲಾಜೆ ಸದಾಶಿವ ಶೆಟ್ಟಿಗಾರ್ ಇವರ ಗದ್ದೆಯಲ್ಲಿ ‘ಆಟಿದ ತಿಂಗೊಳ್ ಕೆಸರ್ ಡ್ ಒಂಜಿ ದಿನ’ ಕಾರ್ಯಕ್ರಮ ಪ್ರಯುಕ್ತ ನೇಜಿ ನಾಟಿ ಮತ್ತು ವಿವಿಧ ಸ್ಪರ್ಧೆಗಳು ನಡೆಯಿತು. ಈ ಸಂದರ್ಭದಲ್ಲಿ ಲೊರೆಟ್ಟೊ ಹಿಲ್ಸ್ ಕ್ಲಬ್ ನ ಅಧ್ಯಕ್ಷ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಪೂರ್ವಾಧ್ಯಕ್ಷ ಪದ್ಮರಾಜ ಬಲ್ಲಾಳ್ ಮಾವಂತೂರು, ನಿಕಟಪೂರ್ವ ಅಧ್ಯಕ್ಷ ಆ್ಯಂಟನಿ ಸಿಕ್ವೇರಾ, ಸಿದ್ದಕಟ್ಟೆ ಕ್ಲಬ್ ನ ಅಧ್ಯಕ್ಷ ಮೈಕಲ್ ಡಿಕೋಸ್ತ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು. ಕ್ಲಬ್ ನ ಸದಸ್ಯರು ನೇಜಿ ನೆಟ್ಟು ಗಮನ ಸೆಳೆದರು. ಇದೇ ವೇಳೆ ಕ್ಲಬ್ ನ ಸದಸ್ಯ ರಾಮಚಂದ್ರ ಶೆಟ್ಟಿಗಾರ್ ದಂಪತಿಗೆ ಸನ್ಮಾನ, ಹಾಗೂ ಸ್ಥಳೀಯ ನಿವಾಸಿ ಕೃಷ್ಣ ಮೂಲ್ಯ ಎಂಬವರ ವೈದ್ಯಕೀಯ ಚಿಕಿತ್ಸೆಗೆ ರೂ 25ಸಾವಿರ ಮೊತ್ತದ ಸಹಾಯಧನ ಚೆಕ್ ಅನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಲಬ್‍ನ ಕಾರ್ಯದರ್ಶಿ ರಮೇಶ್ ನಾಯಕ್ ರಾಯಿ, ರಾಜೇಶ್ ನೆಲ್ಯಾಡಿ, ಪ್ರಮುಖರಾದ ಸುರೇಶ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಜನಾರ್ಧನ ನಾಯ್ಕ ಕರ್ಪೆ ಮತ್ತಿತರರು ಉಪಸ್ಥಿತರಿದ್ದರು. ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು