Sunday, January 19, 2025
ಬಂಟ್ವಾಳ

ಶಿವಾಜಿ ಫ್ರೆಂಡ್ಸ್ ಮಂಕುಡೆ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಜೀವರಾಜ್ ಆಚಾರ್ಯ ಮಂಕುಡೆ ನೆಡ್ಯಾಳ ಆಯ್ಕೆ – ಕಹಳೆ ನ್ಯೂಸ್

ಶಿವಾಜಿ ಫ್ರೆಂಡ್ಸ್ ಮಂಕುಡೆ ಇದರ ೯ನೇ ವರ್ಷದ ಮಹಾಸಭೆಯು ೦೧-೦೮-೨೦೨೧ರಂದು ಮಂಕುಡೆ ಶ್ರೀ ವಿಷ್ಣುಮೂರ್ತಿ ಭಜನಾ ಮಂದಿರದ ಕಲಾ ಮಂಟಪದಲ್ಲಿ ಜರುಗಿತು ಅಧ್ಯಕ್ಷರಾಗಿ ಜೀವರಾಜ್ ಆಚಾರ್ಯ ಮಂಕುಡೆ ನೆಡ್ಯಾಳ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ನಂದನ್ ಮಂಕುಡೆ ನೆಡ್ಯಾಳ,ಪ್ರಧಾನ ಕಾರ್ಯದರ್ಶಿಯಾಗಿ ರೋಹಿತ್ ಕುಂಟುಕುಡೇಲು, ಜೊತೆ ಕಾರ್ಯದರ್ಶಿಯಾಗಿ ವಿಜಿತ್ ಶೆಟ್ಟಿ ಅಮೈ. ರವಿಕಿರಣ್ ಆಚಾರ್ಯ ಮಂಕುಡೆ ನೆಡ್ಯಾಳ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ಸಂಘಟನಾ ಕಾರ್ಯದರ್ಶಿಯಾಗಿ ಯೋಗೀಶ್ ಮಂಕುಡೆ, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀ ಹರ್ಷಿತ್ ಪೂಂಜ, ಮಾಧ್ಯಮ ಪ್ರಮುಖ್ ಶ್ರೀ ಗುರುರಾಘವೇಂದ್ರ ಭಟ್ ಆಯ್ಕೆಯಾಗಿದ್ದಾರೆ.ಶಿವಾಜಿ ಫ್ರೆಂಡ್ಸ್ ಮಂಕುಡೆ ಸಂಘವು ಕಳೆದ ೯ ವರ್ಷಗಳಿಂದ ಸಮಾಜ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅನೇಕ ಬಡಕುಟುಂಬಗಳಿಗೆ ಶ್ರಮದಾನದ ಮೂಲಕ ಸೇವೆಗೈಯ್ಯುತ್ತಿದ್ದು, ತೆರೆ ಮರೆಯಲ್ಲಿರುವ ಸಮಾಜದ ಅನೇಕ ಸಾಧಕರನ್ನೂ ಗುರುತಿಸಿ ಸನ್ಮಾನ ಮಾಡಿ ಅವರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನ ಮಾಡುತ್ತಿದೆ. ಹಾಗೆಯೇ ಧಾರ್ಮಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲೂ ಕಾರ್ಯ ನಿರ್ವಹಿಸುತ್ತಿದೆ. ೯ ನೇ ವರ್ಷದ ಸಂಭ್ರಮದಲ್ಲಿರುವ ಸಂಘದಿ0ದ ಇನ್ನಷ್ಟು ಮಹತ್ತರ ಕಾರ್ಯಗಳು ನಡೆಯಲಿ ಅನ್ನೋದೆ ಎಲ್ಲರ ಆಶಯ.

ಜಾಹೀರಾತು

ಜಾಹೀರಾತು
ಜಾಹೀರಾತು