ಕೊಳ್ನಾಡು ಗ್ರಾಮ ಪಂಚಾಯತ್‍ನ ಅವರಣದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ರೂ 10 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಸ್ಬಚ್ಚ ಸಂಕೀರ್ಣ ಘನ ತ್ಯಾಜ್ಯ ನಿರ್ವಹಣಾ ಸಂಪನ್ಮೂಲ ಘಟಕದ ಉದ್ಘಾಟನೆ- ಕಹಳೆ ನ್ಯೂಸ್
ವಿಟ್ಲ: ಕೊಳ್ನಾಡು ಗ್ರಾಮ ಪಂಚಾಯತ್‍ನ ಅವರಣದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ರೂ 10 ಲಕ್ಷ ವೆಚ್ಚದಲ್ಲಿ ನಿರ್ಮಾಣ ವಾದ ಸ್ಬಚ್ಚ ಸಂಕೀರ್ಣ ಘನ ತ್ಯಾಜ್ಯ ನಿರ್ವಹಣಾ ಸಂಪನ್ಮೂಲ ಘಟಕದ ಉದ್ಘಾಟನೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ನಡೆಸಿದರು. ಅತ್ಯಂತ ಅವಶ್ಯಕತೆಗಳಲ್ಲಿ ಒಂದಾದ ಸ್ಚಚ್ಚತೆಗೆ ಅದ್ಯತೆಯ ಘನತ್ಯಾಜ್ಯ ನಿರ್ವಹಣಾ ಘಟಕದ ನಿರ್ಮಾಣ ಕಾರ್ಯ ಅಭಿನಂದನೀಯ. ಎಲ್ಲರು ಒಂದಾಗಿ ಗ್ರಾಮದ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಎಂದು ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನೆಬೀಶಾ, ಉಪಾಧ್ಯಕ್ಷ ಶುಭಾಶ್ಚಂದ್ರ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ರಾಜರಾಮ ಆಳ್ವ ಕುದ್ರಿಯಾ, ಪ್ರಶಾಂತ ಶೆಟ್ಟಿ ಅಗರಿ, ಹರೀಶ್ ಟೈಲರ್ ಮಕುಂಡೆ, ಆಶ್ರಫ್, ಮಹಮ್ಮದ್ ಮಂಚಿ, ಜಯಂತಿ ಎಸ್.ಪೂಜಾರ್ತಿ, ವಿಶಾಲಾಕ್ಷಿ, ಅನಿತ, ಸುಲೋಚನ, ಲವೀನಾ ಡಿ.ಸೋಜ, ಹಮೀದ್ ಎಸ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಮಾದವ ಮಾವೆ, ಕುಲ್ಯಾರು ನಾರಾಯಣ ಶೆಟ್ಟಿ, ಪಿ.ಡಿ.ಒ. ರೋಹಿಣಿ, ಗ್ರಾಮ ಕರಣಿಕ ಅನಿಲ್ ಕುಮಾರ್ ಉಪಸ್ಥಿತರಿದ್ದರು.