Recent Posts

Sunday, November 17, 2024
ಸುದ್ದಿ

ಸಾಹಸ ಪ್ರವೃತ್ತಿ ಇಂದಿನ ಪೀಳಿಗೆಗೆ ಬಹು ಅಗತ್ಯ: ವೇಣುಶರ್ಮ- ಕಹಳೆ ನ್ಯೂಸ್

ಮಂಗಳೂರು: ಫೇಮ್ ಅಡ್ವೆಂಚರ್ ಅಕಾಡೆಮಿ ವತಿಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಎನ್‍ಎಸ್‍ಎಸ್, ಯೂತ್ ರೆಡ್‍ಕ್ರಾಸ್ ಘಟಕ ಹಾಗೂ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಜು.31 ಮತ್ತು ಆ.1ರಂದು, ಬೆಳುವಾಯಿಯ ಶೃಂಗ ಶ್ಯಾಮಲ ನೇಚರ್ ವಿಲೇಜ್‍ನಲ್ಲಿ “ಎರಡು ದಿನಗಳ ಸಾಹಸ ತರಬೇತಿ ಶಿಬಿರ” ನಡೆಯಿತು. ಕಾರ್ಯಕ್ರಮದಲ್ಲಿ ಹಲವು ಸಾಹಸ ಕ್ರೀಡೆಗಳು ಹಾಗೆಯೇ ಪ್ರಥಮ ಚಿಕಿತ್ಸೆ, ಹಾವು ಕಚ್ಚಿದ ಸಂದರ್ಭ, ಜಲ ಸಾಹಸ, ರಾಪ್ಲಿಂಗ್, ಟ್ರೆಕ್ಕಿಂಗ್‍ನಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಫೇಮ್ ಅಡ್ವೆಂಚರ್ ನ   ವೇಣು ಶರ್ಮ, ಸಾಹಸ ಪ್ರವೃತ್ತಿ ಇಂದಿನ ಯುವ ಪೀಳಿಗೆಗೆ ಬಹು ಅಗತ್ಯ. ಹಾಗೆಯೇ ಶಾಲಾ-ಕಾಲೇಜುಗಳಲ್ಲಿಯೂ ಇದರ ಬಗ್ಗೆ ಅರಿವು ಮುಡಿಸುವ ಅಗತ್ಯ ಇದೆ ಎಂದರು. ಕಂಬಳ ಉಸೇನ್ ಬೋಲ್ಟ್ ಖ್ಯಾತಿಯ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಭತ್ತ ಕೃಷಿ ಖ್ಯಾತಿಯ ಅಬುಬಕ್ಕರ್, ಮುಳಿಯ ಜ್ಯುವೆಲ್ಸ್ ನ ಎಚ್.ಆರ್. ಮ್ಯಾನೇಜರ್ ಶ್ಯಾಮ್ ಉಪಸ್ಥಿತರಿದ್ದರು. ಶೃಂಗ ಶ್ಯಾಮಲ ನೇಚರ್ ವಿಲೇಜ್‍ನ ವೆಂಕಟೇಶ್ ಮಯ್ಯ ಅಧ್ಯಕ್ಷ ಸ್ಥಾನ ವಹಿಸಿದ್ದರು. ಸಂತೋಷ್ ಪೀಟರ್ ಡಿಸೋಜಾ, ನಿತಿನ್ ಸುವರ್ಣ, ಸುಹಾನ್ ಹಾಗೂ ಶೆರಿಲ್ ತರಬೇತಿಯ ನೇತೃತ್ವ ವಹಿಸಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು