Recent Posts

Monday, January 20, 2025
ಪುತ್ತೂರು

ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ಅಗಸ್ಟ್ 4 ರಂದು ವಾಣಿಜ್ಯ ಶಿಕ್ಷಣ ಮತ್ತು ಅವಕಾಶಗಳ ಕುರಿತಾದ ಮಾಹಿತಿ ಕಾರ್ಯಗಾರ-ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜು ಮತ್ತು ಸಿಎ ತರಬೇತಿ ಸಂಸ್ಥೆ ವಿಕಾಸ್ ಇದರ ಸಹಯೋಗದೊಂದಿಗೆ ಉಪನ್ಯಾಸಕರಿಗೆ ಮತ್ತು ಆಸಕ್ತರಿಗೆ ವಾಣಿಜ್ಯ ಶಿಕ್ಷಣ ಮತ್ತು ಅವಕಾಶಗಳು ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಗಾರವನ್ನು ಅಗಸ್ಟ್ 4 ರಂದು ಪೂರ್ವಾಹ್ನ 10 ಗಂಟೆಗೆ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರಿನ ವೃತ್ತಿಪರ ಕೋರ್ಸ್ ತರಬೇತುದಾರ ರಾಜ್‍ಗಣೇಶ್ ಕಾಮತ್ ಮಾಹಿತಿ ನೀಡಲಿದ್ದಾರೆ. ಆಸಕ್ತರಿಗೆ ಇದರ ಜೊತೆಗೆ ಸಿಎ ತರಬೇತಿಯು ನಡೆಯಲಿದೆ. ಈ ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಲು ಇಚ್ಛಿಸಿದಲ್ಲಿ ದೂರವಾಣಿ ಸಂಖ್ಯೆ 8971634042 ಅಥವಾ 9686524162 ಯನ್ನು ಸಂಪರ್ಕಿಸಬೇಕೆಂದು ಸೂಚಿಸಲಾಗಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು